ETV Bharat / state

ತುಮಕೂರು: ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸುಧಾಮೂರ್ತಿ - Sudhamurthy Visits Temple

ತುಮಕೂರು ಜಿಲ್ಲೆಯ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಸುಧಾಮೂರ್ತಿ ಅವರು ಇಂದು ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

Goravanahalli Mahalakshmi Devi Temple
ಗೊರವನಹಳ್ಳಿ ಮಹಾಲಕ್ಷ್ಮಿದೇವಿಗೆ ಸಂಸದೆ ಸುಧಾಮೂರ್ತಿ ವಿಶೇಷ ಪೂಜೆ ಸಲ್ಲಿಸಿದರು. (ETV Bharat)
author img

By ETV Bharat Karnataka Team

Published : May 19, 2024, 8:10 PM IST

ತುಮಕೂರು: ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ತುಮಕೂರು ಜಿಲ್ಲೆಯ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಪುಣ್ಯ ಕ್ಷೇತ್ರಕ್ಕೆ ಸಂಬಂಧಿಕರೊಂದಿಗೆ ಆಗಮಿಸಿದ್ದ ಅವರು, ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಾಮಾನ್ಯರಂತೆ ಬಂದು ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಿದ ಬಳಿಕ ಸುಧಾ ಮೂರ್ತಿ ಅವರು ದೇವಸ್ಥಾನದ ಆಡಳಿತ ಮಂಡಳಿಯ ಜೊತೆ ಕೆಲಕಾಲ ಚರ್ಚೆ ಮಾಡಿದರು.

ದೇವಸ್ಥಾನದ ಆಡಳಿತ ಮಂಡಳಿಯಿಂದ ಸುಧಾಮೂರ್ತಿ ಅವರನ್ನು ಸನ್ಮಾನ ಮಾಡಲಾಯಿತು. ಸುಧಾಮೂರ್ತಿಯವರಿಗೆ ದೇವಸ್ಥಾನದ ಆಡಳಿತ ಮಂಡಳಿ ಮುಖಂಡರು ಹಾಗೂ ಸದಸ್ಯರು ಸಾಥ್ ನೀಡಿ ಮಹಾಲಕ್ಷ್ಮೀ ದೇವಸ್ಥಾನದ ಕುರಿತು ಮಾಹಿತಿ ನೀಡಿದರು.

ಇನ್ಫೋಸಿಸ್‌ ಫೌಂಡೇಶನ್‌ ಮೂಲಕ ಸುಧಾಮೂರ್ತಿ ಅವರು ಹಲವು ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಸಾಹಿತಿಯಾಗಿ ಅವರು ಅನೇಕ ಕಥೆ ಮತ್ತು ಕೃತಿಗಳನ್ನು ರಚಿಸಿದ್ದಾರೆ. ಇನ್ನು ಸುಧಾ ಮೂರ್ತಿ ಅವರು ಕಳೆದ ಕೆಲ ತಿಂಗಳ ಹಿಂದೆಯಷ್ಟೇ ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ:ಗೃಹ ಇಲಾಖೆ ಪರಮೇಶ್ವರ್ ಕೈಯಲ್ಲಿಲ್ಲ, ಬೇರೆ ಯಾರೋ ಹೈಜಾಕ್‌‌ ಮಾಡುತ್ತಿದ್ದಾರೆ: ಆರ್‌.ಅಶೋಕ್ ಆರೋಪ - R AShok Slam Congress

ETV Bharat Logo

Copyright © 2024 Ushodaya Enterprises Pvt. Ltd., All Rights Reserved.