ETV Bharat / state

ಮಂಡ್ಯ: ಬಿರುಗಾಳಿ ಸಹಿತ ಮಳೆಗೆ ರೈಲಿನ ಮೇಲೆ ಬಿದ್ದ ಮರ; ಲೋಕೋ ಪೈಲಟ್‌ಗೆ ಗಾಯ - Mandya Rain - MANDYA RAIN

ರೈಲಿನ ಮೇಲೆ ಮರ ಬಿದ್ದು ಲೋಕೋ ಪೈಲಟ್ ಗಾಯಗೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ.

ಮರ ಬಿದ್ದು ಹಾನಿಗೊಳಗಾದ ರೈಲು
ಮರ ಬಿದ್ದು ಹಾನಿಗೊಳಗಾದ ರೈಲು (ETV Bharat)
author img

By ETV Bharat Karnataka Team

Published : May 14, 2024, 10:33 AM IST

Updated : May 14, 2024, 12:21 PM IST

ಮರ ಬಿದ್ದು ರೈಲಿಗೆ ಹಾನಿ (ETV Bharat)

ಮಂಡ್ಯ: ಸೋಮವಾರ ಸಂಜೆ ಬಿರುಗಾಳಿಸಹಿತ ಮಳೆ ಸುರಿದ ಮಳೆಗೆ ನಗರದ ಫ್ಯಾಕ್ಟರಿ ವೃತ್ತದ ಸಮೀಪ ಸಂಚರಿಸುತ್ತಿದ್ದ ರೈಲಿನ ಮೇಲೆ ಮರ ಮುರಿದು ಬಿದ್ದು, ಲೋಕೋ ಪೈಲೆಟ್ ಗಾಯಗೊಂಡಿದ್ದಾರೆ. ಲೋಕೋ ಪೈಲೆಟ್ ಎನ್.ಎಸ್.ಪ್ರಶಾಂತ್​ ತಲೆಗೆ ಗಾಯವಾಗಿದ್ದು, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೆಮೋ ರೈಲು ಸೋಮವಾರ ಸಂಜೆ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿತ್ತು. ಈ ಸಂದರ್ಭ ಫ್ಯಾಕ್ಟರಿ ವೃತ್ತದ ಬಳಿ ಮರ ರೈಲಿನ ಮುಂಭಾಗಕ್ಕೆ ಹೊಡೆದಿದೆ. ಇದರ ರಭಸಕ್ಕೆ ರೈಲಿನ ಕಿಟಕಿ ಗಾಜುಗಳು ಒಡೆದು ಲೋಕೋ ಪೈಲೆಟ್‌ನ ತಲೆಗೆ ಗಾಯವಾಗಿದೆ. ತಕ್ಷಣ ಪೈಲೆಟ್ ರೈಲು ನಿಲ್ಲಿಸಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ರೈಲ್ವೆ ಪೊಲೀಸರು ಗಾಯಾಳು ಸಿಬ್ಬಂದಿಯನ್ನು ಮಿಮ್ಸ್‌ಗೆ ದಾಖಲಿಸಿದ್ದಾರೆ.

ನಂತರ 500ಕ್ಕೂ ಹೆಚ್ಚು ಪ್ರಯಾಣಿಕರನ್ನು ವಿಶ್ವಮಾನವ ಪ್ಯಾಸೆಂಜ‌ರ್ ರೈಲಿನಲ್ಲಿ ಮೈಸೂರಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಯಿತು. ಸುಮಾರು ಒಂದು ಗಂಟೆಯ ನಂತರ ಪ್ರಯಾಣಿಕರು ಬೇರೊಂದು ರೈಲಿನಲ್ಲಿ ಪ್ರಯಾಣ ಮುಂದುವರೆಸಿದರು.

ಇದನ್ನೂ ಓದಿ: ಹೋರ್ಡಿಂಗ್ ಕುಸಿದು 14 ಮಂದಿ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ: ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಣೆ - Hoarding Collapse At Ghatkopar

Last Updated : May 14, 2024, 12:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.