ETV Bharat / state

ಶ್ರೀಕೃಷ್ಣದೇವರಾಯ ವಿವಿಯಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾದ ಮಂಗಳಮುಖಿ - TRANSGENDER LECTURER

ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ (ವಿಎಸ್​ಕೆವಿವಿ)ಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಕನ್ನಡ ಅತಿಥಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿದ್ದಾರೆ.

Renuka Pujari
ರೇಣುಕಾ ಪೂಜಾರಿ (ETV Bharat)
author img

By ETV Bharat Karnataka Team

Published : Dec 17, 2024, 10:01 PM IST

Updated : Dec 18, 2024, 2:38 PM IST

ಬಳ್ಳಾರಿ: ಇಲ್ಲಿನ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ(ವಿಎಸ್‌ಕೆವಿವಿ) ಕನ್ನಡ ವಿಭಾಗಕ್ಕೆ ಲಿಂಗತ್ವ ಅಲ್ಪಸಂಖ್ಯಾತ (ಮಂಗಳಮುಖಿ)ರೊಬ್ಬರು ಅತಿಥಿ ಉಪನ್ಯಾಸಕರಾಗಿ ನೇಮಕವಾಗಿದ್ದಾರೆ.

ಕುರುಗೋಡು ತಾಲೂಕಿನ ರೇಣುಕಾ ಪೂಜಾರಿ ಈ ಹುದ್ದೆ ಪಡೆದ ರಾಜ್ಯದ ಮೊದಲ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯಾಗಿದ್ದಾರೆ.

ವಿಎಸ್‌ಕೆವಿವಿ ನೇಮಕಾತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ.1ರಷ್ಟು ಮೀಸಲಾತಿ ಅನುಸರಿಸುತ್ತದೆ. ಇದರನ್ವಯ ರೇಣುಕಾ ಪೂಜಾರಿ ಆಯ್ಕೆಯಾಗಿದ್ದಾರೆ.

ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಡಿ.10ರಿಂದ ಇವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ರೇಣುಕಾ ಪೂಜಾರಿ ಪ್ರತಿಕ್ರಿಯಿಸಿ, "ನಮ್ಮದು ಬಡ ಕುಟುಂಬ. ತಂದೆ ಪೂಜಾರಿ ಮಲ್ಲಯ್ಯ, ತಾಯಿ ತಿಪ್ಪಮ್ಮ ಇಬ್ಬರೂ ಅನಕ್ಷರಸ್ಥರು. ಸಮಾಜ ಕೊಂಕು ನುಡಿದರೂ ತಂದೆ, ತಾಯಿ ನನ್ನನ್ನು ದೂರ ತಳ್ಳಲಿಲ್ಲ. ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇನೆ. ಬಹಳಷ್ಟು ಅವಮಾನ ಎದುರಿಸಿದೆ. ಆದರೆ ಹಲವರು ನನಗೆ ನೆರವಾದರು. ಜೋಗತಿ ಸಂಸ್ಕೃತಿ ಮತ್ತು ಚೌಡಿಕೆ ಪದಗಳ ಕುರಿತು ಪಿಎಚ್​ಡಿ ಮಾಡುವ ಗುರಿ ಇದೆ" ಎಂದು ಹೇಳಿದರು.

ಅರ್ಹತೆಯಿಂದ ನೌಕರಿ ಪಡೆದ ರೇಣುಕಾ: ಕುಲಪತಿ ಮುನಿರಾಜು ಪ್ರತಿಕ್ರಿಯಿಸಿ, "ರೇಣುಕಾ ತಮ್ಮ ಅರ್ಹತೆಯ ಆಧಾರದ ಮೇಲೆ ನೌಕರಿ ಪಡೆದಿದ್ದಾರೆ. ಈ ವಿಶ್ವವಿದ್ಯಾಲಯದಲ್ಲೇ 2020–22ರ ಅವಧಿಯಲ್ಲಿ ಕನ್ನಡ ಎಂ.ಎ ಮಾಡಿದ್ದರು. ಅವರ ಶಿಕ್ಷಣಕ್ಕೆ ಇಂಗ್ಲಿಷ್ ವಿಭಾಗದ ರಾಬರ್ಟ್ ಜೋಸ್ ಆರ್ಥಿಕ ನೆರವು ನೀಡಿದ್ದರು" ಎಂದು ತಿಳಿಸಿದರು.

ರೇಣುಕಾ ಅವರು ಯಲ್ಲಮ್ಮನ ದೀಕ್ಷೆ ಪಡೆದು ಜೋಗತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಹೆಸರನ್ನು ರೇಣುಕಾ ಎಂದು ಬದಲಿಸಿಕೊಂಡಿದ್ದಾರೆ. ಮಲ್ಲೇಶ ಕೆ.ಜೋಗತಿ ಇವರ ಮೊದಲ ಹೆಸರಾಗಿತ್ತು.

"ದೀಕ್ಷೆ ಪಡೆದ ಬಳಿಕ ವಾರಕ್ಕೆ ಒಮ್ಮೆಯಾದರೂ ಪಡಲಗಿ ಹಿಡಿದು ಭಿಕ್ಷೆ ಪಡೆಯಬೇಕಾಗುತ್ತದೆ. ಜೊತೆಗೆ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಬಡವರು, ದುರ್ಬಲರಲ್ಲಿ ತಾಯಿ ಯಲ್ಲಮ್ಮಳನ್ನು ಕಾಣಬೇಕಾಗು. ಅವರಿಗೆ ಸಹಾಯ ಮಾಡಬೇಕು. ಹಸಿದವರಿಗೆ ಅನ್ನ ಕೊಡಬೇಕಿದೆ" ಎಂದರು.

ಇದನ್ನೂ ಓದಿ: ಹಾವೇರಿ ಜಿಪಂನಿಂದ ವಿನೂತನ ಪ್ರಯತ್ನ; ಲಿಂಗತ್ವ ಅಲ್ಪಸಂಖ್ಯಾತರಿಂದ ಅಕ್ಕ ಕೆಫೆ ನಿರ್ವಹಣೆ - AKKA CAFE

Last Updated : Dec 18, 2024, 2:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.