ETV Bharat / state

ಹಾವೇರಿ ಜಿಪಂನಿಂದ ವಿನೂತನ ಪ್ರಯತ್ನ; ಲಿಂಗತ್ವ ಅಲ್ಪಸಂಖ್ಯಾತರಿಂದ ಅಕ್ಕ ಕೆಫೆ ನಿರ್ವಹಣೆ - AKKA CAFE

ಹಾವೇರಿ ಜಿಲ್ಲಾ ಪಂಚಾಯತ್​ ಆವರಣದಲ್ಲಿ ಅಕ್ಕ ಕೆಫೆ ಹೆಸರಿನ ವಿನೂತನ ಕೆಫೆಯೊಂದು ನಿರ್ಮಾಣವಾಗುತ್ತಿದೆ. ಇಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಕೆಫೆ ನಿರ್ವಹಿಸಲಿದ್ದಾರೆ.

akka-cafe
ನಿರ್ಮಾಣ ಹಂತದಲ್ಲಿರುವ ಅಕ್ಕ ಕೆಫೆ (ETV Bharat)
author img

By ETV Bharat Karnataka Team

Published : Nov 29, 2024, 5:43 PM IST

ಹಾವೇರಿ : ಜಿಲ್ಲಾ ಪಂಚಾಯತ್ ಆವರಣದಲ್ಲಿ ಇದೀಗ ವಿನೂತನ ಕೆಫೆಯೊಂದು ನಿರ್ಮಾಣಗೊಳ್ಳುತ್ತಿದೆ. ಅಕ್ಕ ಕೆಫೆ ಹೆಸರಿನ ಈ ಕ್ಯಾಂಟೀನ್ ವಿಶೇಷತೆ ಎಂದರೆ ಈ ಕೆಫೆ ನಿರ್ವಹಣೆ ಮಾಡುವವರು ಲಿಂಗತ್ವ ಅಲ್ಪಸಂಖ್ಯಾತರು.

ಈ ಅಕ್ಕ ಕೆಫೆಯಲ್ಲಿ ಅಡುಗೆ ಮಾಡುವುದು, ಪೂರೈಕೆ ಮಾಡುವುದು, ಹಣದ ಕೌಂಟರ್ ನಿರ್ವಹಣೆ ಮಾಡುವವರೆಲ್ಲ ಲಿಂಗತ್ವ ಅಲ್ಪಸಂಖ್ಯಾತರು. ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಹಿಳಾ ಸಬಲೀಕರಣಕ್ಕಾಗಿ ಸುಮಾರು 50 ಅಕ್ಕ ಕೆಫೆ ನಿರ್ಮಿಸುತ್ತಿದೆ. ಬೆಂಗಳೂರಲ್ಲಿ ಈಗಾಗಲೇ ಅಕ್ಕ ಕೆಫೆ ಕಾರ್ಯಾರಂಭ ಮಾಡಿದ್ದು, ಅದರ ನಿರ್ವಹಣೆಯನ್ನ ಮಹಿಳೆಯರೇ ಮಾಡುತ್ತಿದ್ದಾರೆ.

ಜಿಲ್ಲಾ ಪಂಚಾಯತ್ ಸಿಇಓ ಅಕ್ಷಯ ಶ್ರೀಧರ್ ಮಾತನಾಡಿದರು (ETV Bharat)

ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಅಕ್ಷಯ ಶ್ರೀಧರ್ ಅವರು ಮಾತನಾಡಿ, 'ರಾಜ್ಯದ ವಿವಿಧೆಡೆಯಲ್ಲಿ ನಿರ್ಮಾಣವಾಗಿರುವ ಅಕ್ಕ ಕೆಫೆಗಳನ್ನ ಸಹ ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ. ಆದರೆ, ಹಾವೇರಿಯಲ್ಲಿ ಅದು ಜಿಲ್ಲಾಡಳಿತದ ಸಂಕೀರ್ಣದ ಪಕ್ಕದಲ್ಲಿರುವ ಜಿಲ್ಲಾ ಪಂಚಾಯತ್ ಕಚೇರಿಗೆ ಹೊಂದಿಕೊಂಡಂತೆ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆ ಮಾತ್ರ ಲಿಂಗತ್ವ ಅಲ್ಪಸಂಖ್ಯಾತರು ನಿರ್ವಹಣೆ ಮಾಡಲಿದ್ದಾರೆ. ಇದಕ್ಕೆ ಇಲ್ಲಿಯ ಲಿಂಗತ್ವ ಅಲ್ಪಸಂಖ್ಯಾತರ ಉತ್ಸಾಹ ಮತ್ತು ಸರ್ಕಾರದ ಸಹಕಾರ ಕಾರಣ' ಎಂದಿದ್ದಾರೆ.

15 ಲಕ್ಷ ರೂಪಾಯಿ ವೆಚ್ಚದಲ್ಲಿ ಅಕ್ಕ ಕೆಫೆ ನಿರ್ಮಾಣ : ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅಕ್ಕ ಕೆಫೆ ನಿರ್ಮಾಣ ಮಾಡುತ್ತಿರುವ ವಿಷಯ ತಿಳಿದ ಲಿಂಗತ್ವ ಅಲ್ಪಸಂಖ್ಯಾತರು, ಹಾವೇರಿಯಲ್ಲಿ ನಾವೇ ಅಕ್ಕ ಕೆಫೆ ನಿರ್ವಹಣೆ ಮಾಡುತ್ತೇವೆ ಎಂಬ ಉತ್ಸುಕತೆ ತೋರಿದರು. ಅದನ್ನ ನಾವು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅದರಂತೆ ಸರ್ಕಾರ ಸಹ ಇದಕ್ಕೆ ಒಪ್ಪಿಗೆ ನೀಡಿದ್ದು, ಇದೀಗ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಅಕ್ಕ ಕೆಫೆ ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾರೆ.

akka-cafe
ನಿರ್ಮಾಣ ಹಂತದಲ್ಲಿರುವ ಅಕ್ಕ ಕೆಫೆ (ETV Bharat)

ರಾಜ್ಯದಲ್ಲಿ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಮಾದರಿ ಕೆಫೆಯಂತೆ ಅಕ್ಕ ಕೆಫೆಗಳು ನಿರ್ಮಾಣಗೊಳ್ಳುತ್ತಿವೆ. ಈಗಾಗಲೇ ಬೆಂಗಳೂರಲ್ಲಿ ಎರಡು ಅಕ್ಕ ಕೆಫೆಗಳು ಮಹಿಳೆಯರ ಒಕ್ಕೂಟದಿಂದ ಕಾರ್ಯನಿರ್ವಹಿಸುತ್ತಿವೆ. ಅಕ್ಕ ಕೆಫೆಯಲ್ಲಿ ಸ್ಥಳೀಯ ಪ್ರಸಿದ್ಧ ಆಹಾರಗಳನ್ನ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಿದರು.

ಲಿಂಗತ್ವ ಅಲ್ಪಸಂಖ್ಯಾತರೇ ನಿರ್ವಹಣೆ ಮಾಡಲಿದ್ದಾರೆ: ಹಾವೇರಿಯಲ್ಲಿ ಎರಡು ಅಕ್ಕ ಕೆಫೆಗೆ ಅರ್ಜಿ ಸಲ್ಲಿಸಲಾಗಿತ್ತು. ಅದರಲ್ಲಿ ಒಂದು ಜಿಲ್ಲಾ ಪಂಚಾಯತ್ ಕಚೇರಿಗೆ ಹೊಂದಿಕೊಂಡಂತೆ ಇನ್ನೊಂದು ರಾಣೆಬೆನ್ನೂರು ತಾಲೂಕಿನ ಕೊಡಿಯಾಲದಲ್ಲಿ ನಿರ್ಮಾಣವಾಗುತ್ತಿದೆ. ಹಾವೇರಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆ ಸಂಪೂರ್ಣ ಲಿಂಗತ್ವ ಅಲ್ಪಸಂಖ್ಯಾತರೇ ನಿರ್ವಹಣೆ ಮಾಡಲಿದ್ದಾರೆ. ಜೊತೆಗೆ ಕೆಫೆಗೆ ಹೊಂದಿಕೊಂಡಂತೆ ಕೆಎಂಎಫ್ ಮಿಲ್ಕ್ ಪಾರ್ಲರ್ ಸ್ಥಾಪಿಸಲಾಗುತ್ತಿದ್ದು, ಅದನ್ನು ಸಹ ಲಿಂಗತ್ವ ಅಲ್ಪಸಂಖ್ಯಾತರೇ ನಿರ್ವಹಣೆ ಮಾಡಲಿದ್ದಾರೆ ಎಂದು ಹೇಳಿದರು.

ಹಾವೇರಿಯ ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆ ಆರಂಭದಿಂದಲೂ ಕ್ಯಾಂಟೀನ್ ವ್ಯವಸ್ಥೆ ಮಾಡಿಕೊಡುವಂತೆ ಕೋರಿಕೆ ಸಲ್ಲಿಸಿತ್ತು. ಅಲ್ಲದೇ ಕ್ಯಾಂಟೀನ್ ನಡೆಸಲು ಉತ್ಸುಕತೆ ಹೊಂದಿತ್ತು. ಈ ಹಿನ್ನೆಲೆ ಹಾವೇರಿಯಲ್ಲಿ ಜಿಲ್ಲಾ ಪಂಚಾಯತ್ ಆವರಣದ ಅಕ್ಕ ಕೆಫೆ ಲಿಂಗತ್ವ ಅಲ್ಪಸಂಖ್ಯಾತರೇ ನಿರ್ವಹಣೆ ಮಾಡಲಿದ್ದಾರೆ ಎಂದು ತಿಳಿಸಿದರು.

akka-cafe
ಅಕ್ಕ ಕೆಫೆ (ETV Bharat)

ಕೆಫೆಯಲ್ಲಿ ತಯಾರಿಸುವ ಆಹಾರಗಳಿಗೆ ದರ ನಿಗದಿ : ಕೆಫೆಯ ನಿರ್ವಹಣೆಗೆ ಬೇಕಾಗುವ ಸಲಕರಣೆಗಳು ಮತ್ತು ಪೀಠೋಪಕರಣಗಳ ಖರೀದಿ ಕಾರ್ಯ ಸಹ ನಡೆಯುತ್ತಿದೆ. ಕೆಫೆಯಲ್ಲಿ ತಯಾರಿಸುವ ಆಹಾರಗಳಿಗೆ ದರ ನಿಗದಿ ಮಾಡಲಾಗುತ್ತಿದೆ. ಆದಷ್ಟು ಬೇಗ ಕೆಫೆ ಆರಂಭವಾಗಲಿದೆ. ಜಿಲ್ಲಾಡಳಿತದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಈ ಅಕ್ಕ ಕೆಫೆಯಿಂದ ಆಹಾರ ಪೂರೈಕೆ ಮಾಡಲಾಗುತ್ತದೆ. ಜಿಲ್ಲಾಡಳಿತ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುವ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಚೇರಿಗೆ ಕೆಲಸ ನಿಮಿತ್ತ ಆಗಮಿಸುವ ಸಾರ್ವಜನಿಕರು ಇಲ್ಲಿಯ ಉಪಹಾರ ಭೋಜನ ಸವಿಯಲು ಮನವಿ ಮಾಡಲಾಗುತ್ತದೆ ಎಂದು ಹೇಳಿದರು.

ಆಹಾರ ತಯಾರಿಸುವ, ಪೂರೈಸುವ ಕುರಿತಂತೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಈಗಾಗಲೇ ತರಭೇತಿ ಸಹ ನೀಡಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಜಿಲ್ಲಾ ಪಂಚಾಯತ್ ಈ ಕೆಫೆ ಆರಂಭಿಸಲು ಉತ್ಸುಕವಾಗಿದೆ ಎಂದು ತಿಳಿಸಿದರು.

ಈ ಬಗ್ಗೆ ಲಿಂಗತ್ವ ಅಲ್ಪಸಂಖ್ಯಾತೆ ಅಕ್ಷತಾ ಕೆ ಸಿ ಹೇಳಿದ್ದೇನು?: ಜಿಲ್ಲಾ ಪಂಚಾಯತ್ ಮತ್ತು ಸರ್ಕಾರದ ಈ ನಿರ್ಧಾರಕ್ಕೆ ಲಿಂಗತ್ವ ಅಲ್ಪಸಂಖ್ಯಾತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಮತ್ತು ಜಿಲ್ಲಾ ಪಂಚಾಯತ್ ಮುಂದಾಗಿರುವುದು ಸಂತಸ ತಂದಿದೆ ಎಂದಿದ್ದಾರೆ.

ಸರ್ಕಾರ ತಮಗೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಲಿಂಗತ್ವ ಅಲ್ಪಸಂಖ್ಯಾತರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕೆಫೆ ನಿರ್ಮಾಣ ಉಸ್ತುವಾರಿಯನ್ನ ಲಿಂಗತ್ವ ಅಲ್ಪಸಂಖ್ಯಾತರ ಸಂಘಕ್ಕೆ ನೀಡಲಾಗಿದೆ. ಸುಮಾರು 10 ಜನರಿಗೆ ಇಲ್ಲಿ ಉದ್ಯೋಗ ಸಿಗಲಿದೆ ಎಂದು ಹೇಳಿದ್ದಾರೆ.

ಶೋಷಿತ ಸಮುದಾಯದ ಸಂಘಟನೆಗಳಿಂದ ಅಭಿನಂದನೆ: ನಮ್ಮನ್ನು ಕೇವಲವಾಗಿ ನೋಡುತ್ತಿರುವ ಈ ಸಂದರ್ಭದಲ್ಲಿ ನಮಗೆ ಘನತೆ ತಂದುಕೊಡುವ ಕೆಲಸಕ್ಕೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ. ಅವರಿಗೆ ಜಿಲ್ಲೆಯ ಎಲ್ಲ ಶೋಷಿತ ಸಮುದಾಯದ ಸಂಘಟನೆಗಳಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ರಾಜ್ಯಾದ್ಯಂತ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲು 'ಅಕ್ಕ ಕೆಫೆ' ಸಜ್ಜಾಗಿದೆ: ಸಚಿವ ಡಾ.ಪಾಟೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.