ಬೆಂಗಳೂರು: ಆಡಳಿತಾತ್ಮಕ ಕಾರಣ ನೀಡಿ ರಾಜ್ಯ ಸರ್ಕಾರವು ನಿನ್ನೆ ರಾತ್ರಿ 33 ಎಸಿಪಿ ಮತ್ತು 132 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಆದೇಶದಲ್ಲಿ ಬೆಂಗಳೂರು ನಗರದ ಹಲವು ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಮುಂದಾಗುತ್ತಿದ್ದಂತೆ ವರ್ಗಾವಣೆಗೆ ತಾತ್ಕಾಲಿಕ ತಡೆಯಾಗಿದೆ.
ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ನಗರದಿಂದ ವರ್ಗಾವಣೆ ಆಗಿರುವ ಅಧಿಕಾರಿಗಳಿಂದ ರಿಲೀವ್ ಮತ್ತು ರಿಪೋರ್ಟ್ ಮಾಡಿಕೊಳ್ಳದಂತೆ ಕಂಟ್ರೋಲ್ ರೂಮ್ ಮೂಲಕ ಸೂಚನೆ ನೀಡಿದ್ದಾರೆ. ವರ್ಗಾವಣೆ ಆದ ಕೆಲ ಅಧಿಕಾರಿಗಳ ವರ್ಗಾವಣೆಯಲ್ಲಿ ಗೊಂದಲವಿದ್ದು, ಮುಂಬರುವ ಚುನಾವಣೆಗೆ ಅಡೆತಡೆಯಾಗುವ ಹಿನ್ನೆಲೆ ತಾತ್ಕಾಲಿಕ ಬ್ರೇಕ್ ನೀಡಲಾಗಿರುವ ಮಾಹಿತಿ ಲಭಿಸಿದೆ. ಕೆಲ ಅಧಿಕಾರಿಗಳು ಮೂಲ ಕ್ಷೇತ್ರ ಹಾಗೂ ಮೂರು ವರ್ಷ ಕಾರ್ಯ ನಿರ್ವಹಣೆ ಹಿನ್ನೆಲೆ ಈ ತಡೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
33 ಡಿವೈಎಸ್ಪಿಗಳು, 132 ಪೊಲೀಸ್ ಇನ್ಸ್ಪೆಕ್ಟ್ರರ್ಗಳ ವರ್ಗಾವಣೆ ಹಾಗೂ ಹೊಸದಾಗಿ ಸೃಷ್ಟಿಯಾದ ಹುದ್ದೆಗಳಿಗೆ ನೇಮಕಾತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರಲ್ಲಿ ಯು. ಡಿ. ಕೃಷ್ಣಕುಮಾರ್-ಡಿವೈಎಸ್ಪಿ ಬಿಡಿಎ, ಟಿ. ಎಂ. ಶಿವಕುಮಾರ್-ಎಸಿಪಿ ಮಡಿವಾಳ ಉಪವಿಭಾಗ, ಹೆಚ್.ಬಿ. ರಮೇಶ್ ಕುಮಾರ್-ಎಸಿಪಿ ವಿ. ವಿ. ಪುರಂ ಉಪವಿಭಾಗ, ಎಂ. ಎನ್. ನಾಗರಾಜ್-ಎಸಿಪಿ ಸಿಸಿಬಿ ಬೆಂಗಳೂರು ಸೇರಿದಂತೆ ಒಟ್ಟು 33 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.
ರವಿಕಿರಣ್-ಸಂಪಂಗಿ ರಾಮನಗರ ಠಾಣಾ ಇನ್ಸ್‌ಪೆಕ್ಟರ್, ಮಂಜುನಾಥ್ ಜಿ. ಹೂಗಾರ್- ಕುಂಬಳಗೋಡು ಠಾಣೆ, ನರೇಂದ್ರ ಬಾಬು-ಕಾಟನ್ಪೇಟೆ ಪೊಲೀಸ್ ಠಾಣೆ, ಕೆ. ಲಕ್ಷ್ಮೀ ನಾರಾಯಣ್-ಸಿಸಿಬಿ ಬೆಂಗಳೂರು ಇನ್ಸ್‌ಪೆಕ್ಟರ್ ಸೇರಿದಂತೆ ಒಟ್ಟು 132 ಇನ್ಸ್ಪೆಕ್ಟರ್ಗಳ ವರ್ಗಾವಣೆ ಆದೇಶ ನೀಡಲಾಗಿತ್ತು.
ಇದನ್ನೂ ಓದಿ: ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ನಿರ್ಮಲಾ ಸೀತಾರಾಮನ್ಗೆ ಸಿಎಂ ಪತ್ರ