ಹುಬ್ಬಳ್ಳಿ : ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಕೆಲವು ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಪರಿಷ್ಕರಿಸಲಾಗಿದೆ. ಈ ರೈಲುಗಳ ಬದಲಾವಣೆಯು ಕೆಳಗೆ ತಿಳಿಸಿದ ಪ್ರಯಾಣದ ದಿನಾಂಕಗಳಿಂದ ಜಾರಿಗೆ ಬರಲಿದೆ.
1. ಜೂನ್ 21, 2024 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16,532 ಕೆಎಸ್ಆರ್ ಬೆಂಗಳೂರು-ಅಜ್ಮೀರ್ ಗರೀಬ್ ನವಾಜ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.
2. ಜೂನ್ 22, 2024 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16,506 ಕೆಎಸ್ಆರ್ ಬೆಂಗಳೂರು-ಗಾಂಧಿ ಧಾಮ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.
3. ಜೂನ್ 23, 2024 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16,534 ಕೆಎಸ್ಆರ್ ಬೆಂಗಳೂರು - ಜೋಧಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.
4. ಜೂನ್ 24, 2024 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16,508 ಕೆಎಸ್ಆರ್ ಬೆಂಗಳೂರು-ಜೋಧಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.
5. ಜೂನ್ 25, 2024 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16,210 ಮೈಸೂರು-ಅಜ್ಮೀರ್ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬೆಳಿಗ್ಗೆ 06:00/06:10 ಗಂಟೆಯ ಬದಲು 05:35 ಗಂಟೆಗೆ ಆಗಮಿಸಿ, 05:45 ಗಂಟೆಗೆ ಹೊರಡಲಿದೆ.
ಸುಗಮ ಮತ್ತು ತೊಂದರೆ ರಹಿತ ಪ್ರಯಾಣ ಬೆಳೆಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರು ಈ ಪರಿಷ್ಕೃತ ಸಮಯವನ್ನು ಗಮನಿಸಬೇಕು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಯಾಣಿಕರೇ ಗಮನಿಸಿ: ಕೆಲ ರೈಲುಗಳ ನಿಲುಗಡೆ ಹಾಗೂ ಹತ್ತು ವಿಶೇಷ ರೈಲುಗಳ ಸಂಚಾರ ಮುಂದುವರಿಕೆ - Special Trains