ETV Bharat / state

ಪೀಕ್ ಅವರ್​ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ ಮಾರ್ಪಾಡು: ಶೇ.24ರಷ್ಟು ಕಡಿಮೆಯಾಯ್ತು ಟ್ರಾಫಿಕ್ ಜಾಮ್ - TRAFFIC JAM REDUCED

ಭಾರಿ ವಾಹನಗಳ ಸಂಚಾರದಲ್ಲಿ ಮಾರ್ಪಾಡು ಮಾಡಿದ ಪರಿಣಾಮ ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಟ್ರಾಫಿಕ್​ ಜಾಮ್ ಕಡಿಮೆಯಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Oct 18, 2024, 9:58 PM IST

ಬೆಂಗಳೂರು: ನಗರದ ಟ್ರಾಫಿಕ್ ಜಾಮ್​ಗೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಶತಪ್ರಯತ್ನ ನಡೆಸುತ್ತಿದ್ದಾರೆ. ಸಂಚಾರ ದಟ್ಟಣೆಯಾಗುವ ಜಂಕ್ಷನ್​ಗಳಲ್ಲಿ ವಿಶೇಷ ಆದ್ಯತೆಯ ಮೇರೆಗೆ ಕಾರ್ಯೋನ್ಮುಖವಾಗಿರುವ ಪೊಲೀಸರು ಶನಿವಾರ ಭಾರಿ ವಾಹನಗಳ ನಿಷೇಧ ಸಮಯದ ಮಾರ್ಪಾಡು ಮಾಡಿರುವುದು ಫಲಪ್ರದವಾಗಿದೆ.

ಪ್ರತಿದಿನ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ಸುಗಮ ಸಂಚಾರ ದೃಷ್ಟಿಯಿಂದ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಕಳೆದ ಆಗಸ್ಟ್ 2ರಂದು ಬೆಳಗ್ಗೆ 10.30ರಿಂದ 2.30ವರೆಗೆ ಸಂಜೆ 4.30ರಿಂದ ರಾತ್ರಿ 9 ಗಂಟೆವರೆಗೆ ಶನಿವಾರದಂದು ಭಾರಿ ವಾಹನಗಳ ಸಂಚಾರ ನಿಷೇಧಿಸಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಸಂಚಾರ ಪೊಲೀಸರು ಮಾಡಿದ ಈ ಬದಲಾವಣೆಯಿಂದ ಶನಿವಾರ ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿತ್ತು.

ಔಟರ್ ರಿಂಗ್ ರೋಡ್​ನಲ್ಲಿ ಶೇ.24ರಷ್ಟು ಕಡಿಮೆಯಾಯ್ತು ಟ್ರಾಫಿಕ್ ಜಾಮ್: ಭಾರಿ ವಾಹನಗಳ ಸಂಚಾರದಲ್ಲಿ ಮಾರ್ಪಾಡು ಮಾಡಿದ ಪರಿಣಾಮ ಹೊರವರ್ತುಲ ರಸ್ತೆ (ಒಆರ್​ಆರ್)ಯಲ್ಲಿ ಟ್ರಾಫಿಕ್​ ಜಾಮ್ ಕಡಿಮೆಯಾಗಿದೆ. ಒಆರ್​ಆರ್ ರಸ್ತೆಯಾಗಿರುವ ಹೆಬ್ಬಾಳ-ಸಿಲ್ಕ್ ಬೋರ್ಡ್ ಸದಾ ವಾಹನ ಸಂಚಾರದಿಂದ ಕೂಡಿದ್ದು, ಶನಿವಾರದಂದು ಶೇ.24ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ. ಅದೇ ರೀತಿ ಬಳ್ಳಾರಿ ರಸ್ತೆಯಿಂದ ಕೆಂಪೇಗೌಡ ಏರ್​ಪೋರ್ಟ್‌ವರೆಗೂ ಪೀಕ್ ಅವರ್​ನಲ್ಲಿ ಶೇ.14 ಹಾಗೂ ಹೊಸೂರು, ಮೈಸೂರು ಹಾಗೂ ತುಮಕೂರು ರಸ್ತೆಗಳಲ್ಲಿ ಶೇ.8ರಷ್ಟು ವಾಹನ ದಟ್ಟಣೆಯಲ್ಲಿ ಇಳಿಕೆಯಾಗಿದೆ.

ಹೊಸೂರು, ಮೈಸೂರು ಹಾಗೂ ತುಮಕೂರು ರಸ್ತೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಅಲ್ಲದೆ, ನಗರಕ್ಕೆ ಪ್ರವೇಶಿಸುವ ಈ ರಸ್ತೆಗಳಲ್ಲಿ ಸದಾ ನಿರಂತರ ವಾಹನ ದಟ್ಟಣೆ ಇರುತ್ತದೆ. ಪೀಕ್ ಅವರ್​ನಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧದ ಸಮಯ ಮಾರ್ಪಾಡಿನಿಂದ ಕೊಂಚ ಮಟ್ಟದಲ್ಲಿ ಟ್ರಾಫಿಕ್ ಜಾಮ್​ ಕಡಿಮೆಯಾಗಿದೆ. ಅಲ್ಲದೆ, ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಸರ್ಕಾರಿ ರಜೆಯಿದೆ. ಅಲ್ಲದೆ, ಪ್ರತಿ ಶನಿವಾರ ಶಾಲಾ ಮಕ್ಕಳಿಗೆ ಅರ್ಧ ದಿನ ರಜೆಯಿರುವುದರಿಂದ ಇದು ಒಂದು ಸಂಚಾರ ದಟ್ಟಣೆ ಇಳಿಯಲು ಕಾರಣವಾಗಿದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕಸದಿಂದ ಕರೆಂಟ್ ಉತ್ಪಾದನೆ: ಶೀಘ್ರದಲ್ಲೇ ವಿದ್ಯುತ್ ಸ್ಥಾವರಕ್ಕೆ ಚಾಲನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.