ETV Bharat / state

ತುಳುನಾಡಿನಲ್ಲಿ ಸಾಂಪ್ರದಾಯಿಕ ಕಂಬಳ: ಆಧುನಿಕತೆಗೆ ತೆರೆದುಕೊಂಡರೂ ಧಾರ್ಮಿಕ ನೆಲೆಗೆ ಮಹತ್ವ

ತುಳುನಾಡಿನಲ್ಲಿ ಕಂಬಳ ಎಲ್ಲರೂ ಪಾಲ್ಗೊಳ್ಳುವ ಸಾಂಪ್ರದಾಯಿಕ ಕ್ರೀಡೆ. ಒಂದು ಕಾಲದಲ್ಲಿ ಜಾನಪದ ಆರಾಧನೆಯಾಗಿದ್ದ ಕಂಬಳ ಇಂದು ಆಧುನಿಕತೆಗೆ ತೆರೆದುಕೊಂಡು, ಪ್ರತಿಷ್ಠೆಯ ಸ್ಪರ್ಧೆಯಾಗಿದೆ. ಈಟಿವಿ ಭಾರತ ಪ್ರತಿನಿಧಿ ಆದಿತ್ಯ ಐತಾಳ್​ ಮಾಡಿರುವ ವಿಶೇಷ ವರದಿ ಇಲ್ಲಿದೆ..

Traditional Kambala in Tulunad
ತುಳುನಾಡಿನ ಸಾಂಪ್ರದಾಯಿಕ ಕಂಬಳ (ETV Bharat)
author img

By ETV Bharat Karnataka Team

Published : Nov 28, 2024, 1:50 PM IST

Updated : Nov 28, 2024, 4:14 PM IST

ಉಡುಪಿ: ಕಂಬಳ ಕರಾವಳಿಯ ಕೃಷಿ ಸಂಸ್ಕೃತಿಯ ಪ್ರತೀಕ. ರೈತ-ಜಾನುವಾರುಗಳ ಬದುಕಿನ ನಂಟಿನೊಂದಿಗೆ ಆರಂಭವಾದ ಸಂಪ್ರದಾಯ. ಕಾಲ ಕ್ರಮೇಣ ಜಾನಪದ ಆಚರಣೆಯಾಗಿ, ಗ್ರಾಮೀಣ ಕ್ರೀಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಸ್ಪರ್ಧಾತ್ಮಕವಾಗಿ ಆಯೋಜನೆಗೊಂಡರೆ, ಉಡುಪಿ ಜಿಲ್ಲೆಯಲ್ಲಿ ಪಾರಂಪರಿಕ ರೀತಿಯಲ್ಲಿ ಸಾಂಪ್ರದಾಯಿಕ ಕಂಬಳ ನಡೆಯಲಿದೆ. ಇದರ ಬಗ್ಗೆ ವಿಶೇಷ ವರದಿ ಇಲ್ಲಿದೆ ನೋಡಿ..

ಒಂದು ಕಾಲದಲ್ಲಿ ಜಾನಪದ ಆರಾಧನೆಯಾಗಿದ್ದ ಕಂಬಳ ಇಂದು ಆಧುನಿಕತೆಗೆ ತೆರೆದುಕೊಂಡಿದೆ. ಈ ಆಧುನಿಕ ಕಂಬಳದಲ್ಲಿ ತಂತ್ರಜ್ಞಾನಗಳ ಬಳಕೆ, ಸ್ಪರ್ಧೆ, ಪೈಪೋಟಿ ಮುಂತಾದ ಆಯಾಮಗಳಿವೆ. ಸಾಂಪ್ರದಾಯಿಕ (ಪರಂಪರೆ) ಕಂಬಳವೆಂದರೆ ಎಲ್ಲರೂ ಪಾಲ್ಗೊಳ್ಳುವ, ಶ್ರದ್ಧೆಯ ಆಚರಣೆ. ಒಂದು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕೃಷಿಗೆ ಮಹತ್ವ ನೀಡುವ, ಮಹಿಷಂದಾಯ (ಕೋಣಗಳು) ಆರಾಧನೆ, ದೈವರಾಧನೆಯ ನೆಲೆಯಲ್ಲೂ ಈ ಕಂಬಳ ನಡೆಸಲಾಗುತ್ತಿದೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ, ಉಡುಪಿ ಜಿಲ್ಲೆಯ ಕಾರ್ಕಳ, ಕಾಪು ಭಾಗದಲ್ಲಿ ಆಧುನಿಕ (ಜೋಡುಕರೆ) ಕಂಬಳವಾದರೆ, ಉಡುಪಿ ಜಿಲ್ಲೆಯ ಕುಂದಾಪುರ, ಬ್ರಹ್ಮಾವರ, ಬೈಂದೂರು ಭಾಗದಲ್ಲಿ ಸಾಂಪ್ರದಾಯಿಕ (ಒಂಟಿ ಗದ್ದೆ) ಕಂಬಳ ನಡೆಯತ್ತವೆ.

ತುಳುನಾಡಿನ ಸಾಂಪ್ರದಾಯಿಕ ಕಂಬಳ (ETV Bharat)

ಸಾಂಪ್ರದಾಯಿಕ ಕಂಬಳ ಎಂದರೇನು? ಸಾಂಪ್ರದಾಯಿಕ ಕಂಬಳ ಆರಾಧನೆ ರೀತಿಯ ರೂಪದ್ದು. ಧಾರ್ಮಿಕ ನೆಲೆಯೇ ಇಲ್ಲಿ ಪ್ರಮುಖ. ಅಂದಾಜು 50 ರಿಂದ 60 ಕಂಬಳಗಳಲ್ಲಿ 20-22 ಕೊಂಚ ಹೆಚ್ಚು ವಿಜೃಂಭಣೆಯಿಂದ ನಡೆಯುತ್ತವೆ. ಕಂಬಳ ನಡೆಸುವ ಮನೆತನದವರೇ ಅರ್ಚಕರಲ್ಲಿ ಕೇಳಿ ಯಜಮಾನರ ತಾರಾಬಲಕ್ಕೆ ಅನುಕೂಲವಾಗಿ ದಿನ ನಿಗದಿ ಮಾಡುತ್ತಾರೆ. ಕೆಲವೆಡೆ ಕಂಬಳ ನಡೆಸುವ ಯಜಮಾನ ಉಪವಾಸ ಇರುತ್ತಾರೆ. ದಿನ ನಿಗದಿಯಾದಾಗಿನಿಂದ ಕಂಬಳ ಮುಗಿಯುವವರೆಗೆ ಅವರು ಕೆಲವು ಶಿಷ್ಟಾಚಾರಗಳನ್ನು ಪಾಲಿಸಬೇಕು.

ಕಂಬಳ ಗದ್ದೆಗಳಿಗೆ ಪೂಜೆ ಸಲ್ಲಿಕೆ: ಕಂಬಳ ಗದ್ದೆಯನ್ನು ಎರಡು ದಿನ ಮೊದಲು ಉಳುಮೆ ಮಾಡುವ ಕ್ರಮವಿದೆ. ಕಂಬಳದ ದಿನ ಬೆಳಗ್ಗೆ ನಂಬಿದ ದೈವ, ದೇವರಿಗೆ ವಾದ್ಯದೊಂದಿಗೆ ಪೂಜೆ ನೀಡಲಾಗುತ್ತದೆ. ಮುಹೂರ್ತದ ಸಮಯ ನೋಡಿ, ಸಿಂಗರಿಸಲಾದ ಅಡಿಕೆ ಮರದ ಧ್ವಜ ಕಂಬವನ್ನು ಕಂಬಳ ಗದ್ದೆಯ ಮಧ್ಯದಲ್ಲಿ ಹಾಕಿ, ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಸ್ಪರ್ಧೆ, ಹಗ್ಗ ಕಿರಿಯ, ಹಿರಿಯ, ಹಲಗೆ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಓಟದ ಸಮಯದ ಆಧಾರದಲ್ಲಿ ಫಲಿತಾಂಶ ನಿರ್ಧಾರ. ಬಹುಮಾನ ಪಡೆಯುವುದು ಪ್ರತಿಷ್ಠೆಯೂ ಹೌದು. ಇಲ್ಲಿ ಕೋಣಗಳಿಗೆ ಮರ ಕಟ್ಟುವ ಸಂಪ್ರದಾಯ ಇಲ್ಲ. ಆಡಂಬರವೂ ಇಲ್ಲ. ಕೋಣಗಳಿಗೆ ಅನಾರೋಗ್ಯ ಉಂಟಾದರೆ ಕಂಬಳ ಗದ್ದೆಯ ಸುತ್ತು ಹಾಕುವ ಹರಕೆಯನ್ನು ಆ ಮನೆಯವರು ಕಟ್ಟಿಕೊಳ್ಳುವುದು ಇದೆ.

ಆಧುನಿಕ ಕಂಬಳ ಎಂದರೇನು? ಆಧುನಿಕ ಕಂಬಳವೆಂದರೆ ಜೋಡುಕರೆ ಕಂಬಳ ಅಥವಾ ಕ್ರೀಡೆಯಾಗಿ ನೋಡಲಾಗುತ್ತಿದೆ. ಇಲ್ಲಿ ಆಚರಣೆಗೆ ಅಷ್ಟೊಂದು ಮಹತ್ವವಿಲ್ಲ. ಐಕಳ, ಮೂಲ್ಕಿ, ಕಟಪಾಡಿ, ವಾಮಂಜೂರು ಕಂಬಳ ಜೋಡುಕರೆಯಾಗಿದ್ದರೂ, ಮೊದಲು ದೇವರ ಆರಾಧನೆ, ಪೂಜೆ ನಡೆಸಿ, ಆರಂಭಿಸುವ ಪದ್ಧತಿ ಇದೆ. ಸುಮಾರು 25ಕ್ಕೂ ಮಿಕ್ಕಿ ಕಡೆಗಳಲ್ಲಿ ಜೋಡುಕರೆ ಕಂಬಳಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಕಂಬಳವನ್ನು ಕ್ರೀಡೆಯಾಗಿಯೇ ನೋಡುವುದರಿಂದ ಸ್ಪರ್ಧೆಗೆ ಹೆಚ್ಚಿನ ಪ್ರಾಶಸ್ತ್ಯ ಗೆಲ್ಲುವುದು ಪ್ರತಿಷ್ಠೆಯ ಸಂಗತಿ. ಕನೆ ಹಲಗೆ, ಅಡ್ಡ ಹಲಗೆ, ಹಗ್ಗ ಹಿರಿಯ, ಕಿರಿಯ, ನೇಗಿಲು ಹಿರಿಯ, ಓಡಿಸಿದವರು ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಸ್ಪರ್ಧೆ ನಡೆಸಿ, ಬಹಮಾನಗಳನ್ನು ನೀಡಲಾಗುತ್ತದೆ. ಇಲ್ಲಿ ಎಲ್ಲ ಕೋಣಗಳಿಗೆ ಮರ ಕಟ್ಟುವುದು ಖಾಯಂ.

ಬಡಗುತಿಟ್ಟಿನಲ್ಲಿ ಅಂದಾಜು 50 ರಿಂದ 60 ಸಾಂಪ್ರದಾಯಿಕ ಕಂಬಳಗಳಿವೆ. ಇತ್ತಿಚಿಗೆ 30-40 ಕಂಬಳಗಳು ಮಾತ್ರ ವಿಜೃಂಭಣೆಯಿಂದ ನಡೆಯುತ್ತದೆ. ಸಾಂಪ್ರದಾಯಿಕ ಕಂಬಳ ಆರಾಧನೆ ಮಾಡುವವರು ದೇವರ ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆಧುನಿಕ ಕಂಬಳಗಳು ನ. 9ರಿಂದ ಆರಂಭಗೊಂಡು ಎ.19 ರವರೆಗೆ ನಿಗದಿಯಾಗಿವೆ. ಆದರೆ ಸಾಂಪ್ರದಾಯಿಕ ಕಂಬಳಗಳು ವೃಶ್ಚಿಕ ಸಂಕ್ರಮಣ (ನ.16) ದಿಂದ ಆರಂಭಗೊಂಡು, ಧನು ಸಂಕ್ರಮಣ (ಡಿ.15)ದೊಳಗೆ ಮುಗಿಯಬೇಕು. ಬಹುತೇಕ ಮನೆತನಗಳು ವೃಶ್ಚಿಕ ಸಂಕ್ರಮಣ ದಿನದಂದು ಅರ್ಚಕರ ಮನೆಗೆ ತೆರಳಿ ಕಂಬಳದ ದಿನ ನಿಗದಿಪಡಿಸುವುದು ವಾಡಿಕೆ. ಇವೆಲ್ಲವಾದ ಬಳಿಕ ಸಾಂಪ್ರದಾಯಿಕ ಕಂಬಳ, ಆಧುನಿಕ ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಬಾರ್ಕೂರು ಶಾಂತರಾಮ ಶೆಟ್ಟಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ದಿನಾಂಕ ನಿಗದಿಯಾಗಿಲ್ಲ: ಹೈಕೋರ್ಟ್‌ಗೆ​ ಸರ್ಕಾರದ ಮಾಹಿತಿ

Last Updated : Nov 28, 2024, 4:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.