ETV Bharat / state

ಹೊಸ ವರ್ಷಕ್ಕೆ ಮೈಸೂರು ನಗರದಲ್ಲಿ ಬಿಗಿ ಭದ್ರತೆ: ಪೊಲೀಸ್​ ಕಮಿಷನರ್​ ಸೀಮಾ ಲಾಟ್ಕರ್‌ - POLICE COMMISSIONER SEEMA LATKAR

ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಬಿಗಿ ಭದ್ರತೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಪೊಲೀಸ್​ ಕಮಿಷನರ್‌ ಸೀಮಾ ಲಾಟ್ಕರ್‌ ತಿಳಿಸಿದರು.

ಪೊಲೀಸ್​ ಕಮಿಷನರ್​ ಸೀಮಾ ಲಾಟ್ಕರ್‌
ಮೈಸೂರು ನಗರ ಪೊಲೀಸ್​ ಕಮಿಷನರ್​ ಸೀಮಾ ಲಾಟ್ಕರ್‌ (ETV Bharat)
author img

By ETV Bharat Karnataka Team

Published : Dec 17, 2024, 4:37 PM IST

ಮೈಸೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಬಿಗಿ ಭದ್ರತೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮೈಸೂರು ನಗರ ಪೊಲೀಸ್​ ಕಮಿಷನರ್‌ ಸೀಮಾ ಲಾಟ್ಕರ್‌ ತಿಳಿಸಿದ್ದಾರೆ.

ನಗರ ಪೊಲೀಸರ ವತಿಯಿಂದ ಇಂದು ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪೊಲೀಸ್​ ಕಮಿಷನರ್​ ಸೀಮಾ ಲಾಟ್ಕರ್‌ (ETV Bharat)

"ನಾವು ಡಿ.1ರಿಂದ ಡಿ.31ರವರೆಗೆ ನಗರದ ವಿವಿಧ ಭಾಗಗಳಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಗರದ ಶಾಲಾ-ಕಾಲೇಜು, ಪಾರ್ಕ್​ಗಳಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ. ಮಾದಕ ವಸ್ತುಗಳ ಸೇವನೆ, ಸೈಬರ್‌ ಕ್ರೈಂ, ಸರಗಳ್ಳತನ, ಮನೆಗಳ್ಳತನ ಕುರಿತು ಜಾಗೃತಿ ಮೂಡಿಸುವ ಕೆಲಸ ಪ್ರತಿ ಠಾಣಾ ವ್ಯಾಪ್ತಿಯಲ್ಲೂ ನಡೆಸಲಾಗುತ್ತಿದೆ" ಎಂದರು.

ಅಪರಾಧ ತಡೆ ಮಾಸಾಚರಣೆ ರ‍್ಯಾಲಿ: ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪೊಲೀಸರು ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ರ‍್ಯಾಲಿ ಪ್ರಾರಂಭಿಸಿ ಗಾಂಧಿ ವೃತ್ತ, ಸಯ್ಯಾಜಿ ರಾವ್‌ ವೃತ್ತ, ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಸಾಗಿ ಜನರಲ್ಲಿ ಅಪರಾಧಗಳ ಬಗ್ಗೆ ಅರಿವು ಮೂಡಿಸಿದರು.

ಇದನ್ನೂ ಓದಿ: ನುಡಿ ಜಾತ್ರೆಗೆ ಸಕ್ಕರೆ ನಗರಿ ಮಂಡ್ಯ ಸಜ್ಜು: 'ಕನ್ನಡಕ್ಕಾಗಿ ಓಟ'ದಲ್ಲಿ ನಟ, ನಟಿಯರು ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.