ಬೆಳಗಾವಿ: ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಹುಲಿ, ಚಿರತೆ ಹಾವಳಿ ಹೆಚ್ಚಾಗಿದೆ. ಇದೀಗ ಹುಲಿ ದಾಳಿಗೆ ಮೂರು ನಾಯಿಗಳು ಬಲಿಯಾಗಿರುವ ಘಟನೆ ಜಾಂಬೋಟಿ- ಕುಸಮಳಿ ಅರಣ್ಯಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಹುಲಿ ಹಾಗೂ ಚಿರತೆ ಹೆಜ್ಜೆ ಗುರುತುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ರೈತ ಸಂಭಾಜಿ ಸಡೇಕರ್ ಅವರ ತೋಟದಲ್ಲಿ ಶುಕ್ರವಾರ ಹುಲಿ ಪ್ರತ್ಯಕ್ಷವಾಗಿತ್ತು. ಶನಿವಾರ ಬೆಳಗ್ಗೆ ರೈತ ಸಂಭಾಜಿ ಸಡೇಕರ್‌ಗೆ ಅವರ ಸಾಕುನಾಯಿಯ ಕಳೇಬರ ಪತ್ತೆಯಾಗಿದೆ. ನಾಯಿಯ ಕಳೇಬರ ಪತ್ತೆಯಾದ ಸ್ಥಳದಲ್ಲೇ ಹುಲಿಯ ಹೆಜ್ಜೆಯ ಗುರುತು ಕೂಡ ಕಂಡುಬಂದಿದೆ.
ಕಾಡಂಚಿನ ಗ್ರಾಮಗಳ ವಿವಿಧೆಡೆ ಹುಲಿ ದಾಳಿಗೆ ಮೂರು ನಾಯಿಗಳು ಬಲಿಯಾಗಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಘಟನೆಯಿಂದ ಜಾಂಬೋಟಿ ಅರಣ್ಯ ವಲಯ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿ; ಧಾರವಾಡ: ಅಂಜುಮನ್ ಸಂಸ್ಥೆ ಅಧ್ಯಕ್ಷನ ಮೇಲೆ ಹಲ್ಲೆಗೆ ಯತ್ನ ಆರೋಪ: ದೂರು ದಾಖಲು - Attempt To Assault