ETV Bharat / state

ಗಂಗಾವತಿ: ನೀರು ಸೇವಿಸಿದ ಬೆನ್ನಲ್ಲೇ 3 ಜಾನುವಾರು ಸಾವು: ಕಂಗಾಲಾದ ರೈತ - Cattle Death - CATTLE DEATH

ಗಂಗಾವತಿಯ ಕಾರಟಗಿ ತಾಲೂಕಿನ ಬೂದಗುಂಪಾ - ಹಾಲಸಮುದ್ರ ಗ್ರಾಮದಲ್ಲಿ ನೀರು ಕುಡಿದು ಮೂರು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

cattle-died
ಜಾನುವಾರುಗಳು ಸಾವು (koppal)
author img

By ETV Bharat Karnataka Team

Published : Aug 25, 2024, 9:43 PM IST

ಗಂಗಾವತಿ (ಕೊಪ್ಪಳ) : ಮೇವು ಸೇವಿಸಿದ ಬಳಿಕ ನೀರು ಕುಡಿದ ಮೂರು ಜಾನುವಾರುಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾ-ಹಾಲಸಮುದ್ರ ಗ್ರಾಮದಲ್ಲಿ ನಡೆದಿದೆ.

ಹಾಲಸಮುದ್ರ ಗ್ರಾಮದ ರೈತ ಶಿವಬಸ್ಸಪ್ಪ ಮರಳಿ ಎಂಬವರಿಗೆ ಸೇರಿದ ಎರಡು ಎತ್ತು, ಒಂದು ಎಮ್ಮೆ ಕರು ಮೃತಪಟ್ಟಿವೆ. ಅದೃಷ್ಟವಶಾತ್ ಪಶು ವೈದ್ಯರು ಒಂದು ಹಸುವಿಗೆ ಸಕಾಲಕ್ಕೆ ಚಿಕಿತ್ಸೆ ನೀಡುವ ಮೂಲಕ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.

ಘಟನೆಗೆ ಕಾರಣ ಏನು?: ಬೆಳಗ್ಗೆ ಎಂದಿನಂತೆ 6 ಗಂಟೆಗೆ ರೈತ ಶಿವಬಸ್ಸಪ್ಪ ಮರಳಿ, ತಮ್ಮ ನಾಲ್ಕು ಜಾನುವಾರುಗಳಿಗೆ ಮೇವು ಹಾಕಿದ್ದಾರೆ. ಬಳಿಕ ನೀರು ಕುಡಿಸಿದ್ದಾರೆ. ನೀರು ಸೇವಿಸಿ ಕೆಲವೇ ನಿಮಿಷಗಳಲ್ಲಿ ಎರಡು ಹಸು ಮತ್ತು ಒಂದು ಎಮ್ಮೆ ಕರುವಿನ ಬಾಯಿಯಿಂದ ರಕ್ತ ಸ್ರಾವವಾಗಿದೆ. ಮಲಮೂತ್ರ ವಿಸರ್ಜನೆ ಮಾಡಿಕೊಂಡಿವೆ. ಬಳಿಕ ಜಾನುವಾರುಗಳ ಉಸಿರಾಟದಲ್ಲಿ ಏರುಪೇರಾಗಿ ಸಾವನ್ನಪ್ಪಿವೆ. ಕೂಡಲೇ ರೈತ ಪಶು ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪಶು ವೈದ್ಯ ಡಾ. ಚನ್ನಬಸಪ್ಪ ಹಳ್ಳದ್, ಪ್ರಭಾರಿ ಪಶು ವೈದ್ಯಾಧಿಕಾರಿ ಡಾ. ಲಕ್ಷ್ಮಣ ನಾಯ್ಕ್ ತಂಡ ಚಿಕಿತ್ಸೆ ನೀಡಿದೆ.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಎರಡು ಎತ್ತು, ಒಂದು ಎಮ್ಮೆ ಕರು ಸಾವನ್ನಪ್ಪಿವೆ. ಒಂದು ಜಾನುವಾರು ಸಾವಿನ ದವಡೆಯಿಂದ ಪಾರಾಗಿದೆ. ಜಾನುವಾರುಗಳಿಗೆ ನೀಡಿದ್ದ ಮುಸುರಿ ನೀರಿನಲ್ಲಿ ರಾಸಾಯನಿಕ ಮಿಶ್ರಣವಾಗಿದ್ದರಿಂದ ಜಾನುವಾರು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಪಶು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ ಜಾನುವಾರುಗಳ ಮೌಲ್ಯ ಎರಡು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ರೈತ ತನ್ನ ಎರಡು ಎತ್ತುಗಳಿಂದ 10 ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದರು. ಜಾನುವಾರುಗಳಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಈಗ ಏಕಾಏಕಿ ಜಾನುವಾರುಗಳ ಸಾವಿನಿಂದ ಕುಟುಂಬ ಕಂಗಾಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶುಪಾಲನಾ ಇಲಾಖೆಯ ಅಧಿಕಾರಿ ಡಾ. ಚನ್ನಬಸಪ್ಪ ಹಳ್ಳದ್, ''ಇಲಾಖೆಯಿಂದ ಪ್ರತಿ ಹಸುವಿಗೆ 10 ಸಾವಿರ ರೂಪಾಯಿಯಂತೆ 30 ಸಾವಿರ ರೂ. ಪರಿಹಾರವನ್ನು ವಾರದೊಳಗೆ ನೀಡಲಾಗುವುದು. ವಿಶೇಷ ಪ್ರಕರಣವೆಂದು ಪರಿಗಣಿಸಿ ಸಚಿವ ತಂಗಡಗಿಯವರ ಗಮನಕ್ಕೆ ತಂದು ರೈತನಿಗೆ ಹೆಚ್ಚುವರಿ ಪರಿಹಾರ ಧನ ಕೊಡಿಸಲು ಯತ್ನಿಸಲಾಗುವುದು'' ಎಂದರು.

ಇದನ್ನೂ ಓದಿ : ಬೆಳಗಾವಿ: ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿ ಎರಡು ಹಸು, ಎಮ್ಮೆ, ಐದು ಆಡು ಸಾವು - CATTLE DIED

ETV Bharat Logo

Copyright © 2025 Ushodaya Enterprises Pvt. Ltd., All Rights Reserved.