ETV Bharat / state

"ಕಿರಿಯ ಜೈಲು ಸಿಬ್ಬಂದಿ ಅಮಾನತು ಮಾಡಿದರೆ ಪ್ರಯೋಜ‌ನ ಇಲ್ಲ, ದೊಡ್ಡವರ ವಿರುದ್ಧ ಕ್ರಮವಾಗಬೇಕು": ಸಚಿವ ರಾಮಲಿಂಗಾರೆಡ್ಡಿ - photo of Darshan in jail - PHOTO OF DARSHAN IN JAIL

ಪರಪ್ಪನ ಅಗ್ರಹಾರದಲ್ಲಿ ಸೆರೆ ಹಿಡಿದಿರುವ ಕೊಲೆ ಆರೋಪಿ ನಟ ದರ್ಶನ್​ನ ಬಿಂದಾಸ್​ ಲೈಫ್​ ಫೋಟೋ ವೈರಾಲಾಗುತ್ತಿದ್ದು ಸಚಿವ ರಾಮಲಿಂಗಾರೆಡ್ಡಿ, ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ (ETV Bharat)
author img

By ETV Bharat Karnataka Team

Published : Aug 26, 2024, 2:24 PM IST

ಬೆಂಗಳೂರು: "ಕೆಳಹಂತದ ಜೈಲು ಸಿಬ್ಬಂದಿ ಅಮಾನತು ಮಾಡಿದರೆ ಪ್ರಯೋಜನ ಇಲ್ಲ. ದೊಡ್ಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಇಂಥ ಘಟನೆಗಳು ಮರುಕಳಿಸುವುದಿಲ್ಲ" ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, "ನಟ ದರ್ಶನ್​ಗೆ ರಾಜಾತಿಥ್ಯ ನೀಡಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಯಾವ ದೊಡ್ಡ ಅಧಿಕಾರಿ ಇದ್ದರೂ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಇಂತಹ ಘಟನೆ ಮುಂದೆ ಆಗಲ್ಲ. ನಾನು ಕೂಡ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಖಡಕ್​ ಆಫೀಸರ್ ಗಳನ್ನು ಇಂಥ ಸ್ಥಳಕ್ಕೆ ನಿಯೋಜಿಸಬೇಕು. ಆಗ ಮಾತ್ರ ಈ ರೀತಿ ಘಟನೆಗಳು ಆಗಲ್ಲ. ಯಾರು ಸೌಲಭ್ಯ ಕೊಟ್ಟಿದ್ದಾರೆ ಎಂಬ ಬಗ್ಗೆ ಗೃಹ ಮಂತ್ರಿಗಳಿಗೆ ಗೊತ್ತಿದೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಡಿಜಿ ಅವರಿಗೆ ಈ ವಿಚಾರಗಳೆಲ್ಲ ಗೊತ್ತಿರುವುದಿಲ್ಲ. ಆದರೆ ಅವರು ಪರಿಶೀಲನೆ ಮಾಡುತ್ತಿರಬೇಕಿತ್ತು. ಜೈಲಿಗೆ ಭೇಟಿ ಕೊಡಬೇಕು. ಆಫೀಸರ್​ ಕರೆದು ವಾರ್ನ್ ಮಾಡಬೇಕಿತ್ತು" ಎಂದರು.

"ನಮ್ಮ ಗೃಹ ಮಂತ್ರಿಗಳು ಅನುಭವಿಗಳಿದ್ದಾರೆ. ಈ ಘಟನೆ ಪುನರಾವರ್ತನೆ ಆಗದಂತೆ ಕ್ರಮ ವಹಿಸಬೇಕು. ಇದು ರಾಜ್ಯ ಸರ್ಕಾರದ ಹೊಣೆಯಲ್ಲ. ಆದರೆ, ಲೋಪ ಆಗಿರೋದು ನಿಜ. ಅಲ್ಲಿ ಫೋನ್ ಇಟ್ಕೊಂಡಿರುವುದು ಲೋಪ ಆಗಿದೆ. ಎಲ್ಲೋ ಒಂದು ಕಡೆ ರೈಲು ಅಪಘಾತ ಆಗುತ್ತೆ. ರೈಲ್ವೆ ಸಚಿವ ರಾಜೀನಾಮೆ ಕೇಳೋಕೆ ಆಗುತ್ತಾ?. ಎಲ್ಲೋ ಜೈಲಲ್ಲಿ ಇಂತಹ ಘಟನೆಯಾದಾಗ ಗೃಹ ಮಂತ್ರಿ ರಾಜೀನಾಮೆ ಕೊಟ್ಟರೆ, ದೇಶದಲ್ಲಿರುವ ಯಾವ ಸರ್ಕಾರ, ಯಾವ ಮಂತ್ರಿಗಳು ಕೂಡ ಕೆಲಸ ಮಾಡಲು ಸಾಧ್ಯವಿಲ್ಲ" ಎಂದರು.

ಮುಂದುವರೆದು, "ದರ್ಶನ್​ ಪತ್ನಿ ಶಾಲೆಯ ಸೀಟ್​ ವಿಚಾರಕ್ಕೆ ಡಿಸಿಎಂ ಭೇಟಿ ಮಾಡಿದ್ದು. ಸಾರ್ವಜನಿಕವಾಗಿ ಡಿಕೆಶಿ ಅವರು ಯಾವುದೇ ಹೇಳಿಕೆ ನೀಡಿಲ್ಲ. ಅವರ ಭೇಟಿ ಬಗ್ಗೆ ಡಿಸಿಎಂ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ" ಎಂದು ಇದೇ ವೇಳೆ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ನಟ ದರ್ಶನ್​ ಬೇರೆ ಜೈಲಿಗೆ ಶಿಫ್ಟ್​ ಮಾಡುವ ವಿಚಾರವಾಗಿ ಮಾತನಾಡಿ, "ನಮ್ಮ ಗೃಹ ಮಂತ್ರಿಗಳು ಅನುಭವಿಗಳಿದ್ದಾರೆ. ಈ ರೀತಿ ಮರುಕಳಿಸದಂತೆ ಮಾಡುತ್ತಾರೆ. ಈ ಪ್ರಕರಣದಲ್ಲಿ ಯಾರು ಮಧ್ಯಪ್ರವೇಶ ಮಾಡಿಲ್ಲ. ಯಾವ ಸಚಿವರು ಕೂಡ ಒತ್ತಡ ಹಾಕಿಲ್ಲ" ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ದರ್ಶನ್, ಇತರ ಆರೋಪಿಗಳನ್ನು ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲು ಸಿಎಂ ಸೂಚನೆ - Darshan Photo Viral

ETV Bharat Logo

Copyright © 2024 Ushodaya Enterprises Pvt. Ltd., All Rights Reserved.