ಬೆಂಗಳೂರು: ಉಪನೋಂದಣಾಧಿಕಾರಿ ಕಚೇರಿಯಲ್ಲಿ ತುರ್ತು ಆಸ್ತಿ ನೋಂದಣಿಯನ್ನು ಹೊಂದಿರದ ನಾಗರಿಕರು, ಬಿಬಿಎಂಪಿ ಹಿಂಬರಹದ ಮೂಲಕ ನಿರ್ದಿಷ್ಟ ಸೂಚನೆಯ ಹೊರತು ಅಂತಿಮ ಇ-ಖಾತಾವನ್ನು ಪಡೆಯಲು ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಹೋಗದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಾಗರಿಕರಿಗೆ ವಿನಂತಿ ಮಾಡಿದ್ದಾರೆ.
ಶುಕ್ರವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ ಅವರು, ಬಿಬಿಎಂಪಿ ಅಂತಿಮ ಇ - ಖಾತಾವನ್ನು ಪಡೆಯುವ ವಿಧಾನದ ಬಗ್ಗೆ, ಅಲ್ಲದೆ ಬಿಬಿಎಂಪಿ ಅಂತಿಮ ಇ-ಖಾತಾವನ್ನು ಪಡೆಯಲು ಕೆಲವು ವಿಧಾನಗಳಿದ್ದು, ಅವುಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.
ಪಾಲಿಕೆಯ ವೆಬ್ ಸೈಟ್ ಮೂಲಕ ಆನ್‌ಲೈನ್‌ನಲ್ಲಿ ವಾರ್ಡ್‌ವಾರು ಇ-ಖಾತಾ ಪಟ್ಟಿಯಿಂದ ನಾಗರಿಕರು ತಮ್ಮ ಕರಡು ಇ-ಖಾತಾ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ತಮ್ಮ ಸ್ವತ್ತಿನ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಹೆಸರು ಮತ್ತು ಸಂಖ್ಯೆಯನ್ನು ತಿಳಿದುಕೊಳ್ಳಬಹುದಾಗಿದೆ.
ಇ- ಕೆವೈಸಿ ಕಡ್ಡಾಯ: ಸ್ವತ್ತಿನ ಆಸ್ತಿ ತೆರಿಗೆ ಅರ್ಜಿ ಸಂಖ್ಯೆಯ 10 ಅಂಕಿಗಳು, ಮಾಲೀಕರ ಆಧಾರ್ ಆಧಾರಿತ ಇ-ಕೆವೈಸಿ (ಇ-ಖಾತಾ ನಲ್ಲಿರುವ ಎಲ್ಲ ಮಾಲೀಕರು ಇ-ಕೆವೈಸಿ ಮಾಡಬೇಕಾಗಿದೆ. ಯಾವುದೇ ಮಾಲೀಕರು ಆಧಾರ್ ಹೊಂದಿಲ್ಲದಿದ್ದರೆ, ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಪಾಸ್‌ಪೋರ್ಟ್ ಅಥವಾ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಬಳಸಿ ದೃಢೀಕರಿಸಿ), ಮಾಲೀಕರು ಆಸ್ತಿ ಪಡೆದ ನೋಂದಾಯಿತ ಪತ್ರ ಸಂಖ್ಯೆ (ಕ್ರಯ, ದಾನ ಪತ್ರ ಇತ್ಯಾದಿ)ಕಾವೇರಿ ತಂತ್ರಾಂಶದಿಂದ ನೋಂದಾಯಿತ ಪತ್ರ ಮಾಹಿತಿಯನ್ನು ಪಡೆಯಲಾಗುವುದು.
ಆಸ್ತಿಯ ಹಕ್ಕು ನಿರೂಪಿಸುವ ನೋಂದಾಯಿತ ಪತ್ರವು, ನೋಂದಣಿ ದಿನಾಂಕದ ಒಂದು ದಿನದ ಹಿಂದಿನಿಂದ ಅಂದರೆ ಅಕ್ಟೋಬರ್ 18 ರವರೆಗೆ ಆಸ್ತಿಯ ಋಣಭಾರ ಪ್ರಮಾಣಪತ್ರ, ಆಸ್ತಿಯ ಮಾಲೀಕರು, ಆಸ್ತಿಯ ಹೊರಗೆ ಹಾಗೂ ಮುಂದೆ ನಿಂತಿರುವ ಆಸ್ತಿಯ ಛಾಯಾಚಿತ್ರ. ಬೆಸ್ಕಾಂ ಹತ್ತು ಅಂಕಿಯ ಎಸಿಸಿ ಐಡಿ (ಬೆಸ್ಕಾಂ ಬಿಲ್ ನೋಡಿ ಖಾಲಿ ಭೂಮಿಗೆ ಕಡ್ಡಾಯವಲ್ಲ) ಈ ಎಲ್ಲ ಮಾಹಿತಿ ಹಾಗೂ ದಾಖಲೆಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ, ಸಲ್ಲಿಸಿದ ನಂತರ, ಎಲ್ಲವೂ ಕ್ರಮದಲ್ಲಿದ್ದರೆ, ಒಂದೇ- ದಿನದಲ್ಲಿ ಅಂತಿಮ ಇ-ಖಾತಾ ವನ್ನು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಯ ಬಳಿ ಪಡೆಯಬಹದು ಎಂದು ತಿಳಿಸಿದ್ದಾರೆ.
ವಿಧಾನವನ್ನು ಪೂರ್ಣಗೊಳಿಸಲು ಯಾವುದೇ ಸವಾಲುಗಳಿದ್ದಲ್ಲಿ ಮತ್ತು ನೀವು ತುರ್ತು ನೋಂದಣಿ ಹೊಂದಿದ್ದರೆ, ತಮ್ಮ ಎಲ್ಲ ದಾಖಲೆಗಳು ಮತ್ತು ತಹಲ್‌ವರೆಗಿನ ಋಣಭಾರ ಪ್ರಮಾಣಪತ್ರವನ್ನು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಅಲ್ಲಿ ಸಹಾಯ ಫಲಕದ ಸಿಬ್ಬಂದಿ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಾರೆ ಮತ್ತು ಒಂದು ದಿನದಲ್ಲಿ ನಿಯಮಗಳ ಪ್ರಕಾರ ಅಂತಿಮ ಇ-ಖಾತಾ ಹೊಂದಲು ಸಹಾಯವನ್ನು ಪಡೆಯಬಹುದಾಗಿದೆ ಎಂದಿದ್ದಾರೆ.