ETV Bharat / state

ಸಿಎಂ ಸಿದ್ದರಾಮಯ್ಯರಂತಹ ಧೀಮಂತ ಮುಖ್ಯಮಂತ್ರಿ ಯಾರೂ ಇಲ್ಲ : ಜಯದೇವ್ ನಾಯ್ಕ್ - Jayadev Naik

author img

By ETV Bharat Karnataka Team

Published : Jun 30, 2024, 3:34 PM IST

ಸಿಎಂ ಹುದ್ದೆಯ ಕುರಿತು ತಾಂಡಾ ಅಭಿವೃದ್ಧಿ ನಿಗಮ ನೂತನ ಅಧ್ಯಕ್ಷ ಜಯದೇವ್ ನಾಯ್ಕ್ ಮಾತನಾಡಿದ್ದಾರೆ. ಸಿಎಂ ಆಗಬೇಕೆಂಬ ಆಸೆ ಇರುವುದು ಸಹಜ. ಆದರೆ ಈ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು ಎಂದಿದ್ದಾರೆ.

jayadev-naik
ತಾಂಡಾ ಅಭಿವೃದ್ಧಿ ನಿಗಮ ನೂತನ ಅಧ್ಯಕ್ಷ ಜಯದೇವ್ ನಾಯ್ಕ್ (ETV Bharat)

ದಾವಣಗೆರೆ : ಇಡೀ ಇಂಡಿಯಾದಲ್ಲಿ ಸಿಎಂ ಸಿದ್ದರಾಮಯ್ಯರಂತಹ ಧೀಮಂತ ಮುಖ್ಯಮಂತ್ರಿ ಯಾರೂ ಇಲ್ಲ ಎಂದು ತಾಂಡಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಜಯದೇವ್ ನಾಯ್ಕ್ ಹೇಳಿದ್ದಾರೆ.

ಸಿಎಂ ಹುದ್ದೆಗೆ ಸಿದ್ದರಾಮಯ್ಯ ಫಿಟ್ ಅಥವಾ ಅನ್​ಫಿಟ್​ ಎಂಬ ಮಾಧ್ಯಮದವರ ಪ್ರಶ್ನೆಯ ಕುರಿತು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಅನ್ನಭಾಗ್ಯ, ವಿದ್ಯಾಭಾಗ್ಯ ಇವು ಬಸವಣ್ಣನವರ ಕಾಲದಿಂದಲೂ ಪ್ರಚಾರಕ್ಕೆ ಬಂದಿರುವಂತಹದ್ದು. ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂದು ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡಿದ್ದಾರೆ ಎಂದರು.

ಸಿಎಂ ಆಗಬೇಕೆಂಬುದು ಎಲ್ಲರ ಆಸೆ ಸಹಜ. ಆದರೆ ಆ ಹುದ್ದೆಗೆ ಸಿದ್ದರಾಮಯ್ಯ ಒಬ್ಬರೇ ಫಿಟ್ ಎಂದು ಸಿಎಂ ಪರವಾಗಿ ಜಯದೇವ್ ನಾಯ್ಕ್ ಬ್ಯಾಟಿಂಗ್ ಮಾಡಿದರು. ಸಿದ್ದರಾಮಯ್ಯ ಬಡವರ ಹಸಿವನ್ನು ನೀಗಿಸಿದವರು. ಸಮರ್ಥವಾಗಿ ಆಡಳಿತ ಮಾಡಿದ್ದಾರೆ. ಉತ್ತಮ ಆಡಳಿತ ನಡೆಸಿದ್ದಾರೆ. ಬಡವರು, ಹಿಂದುಳಿದವರು, ಶೋಷಿತರ ಧ್ವನಿ ಸಿದ್ದರಾಮಯ್ಯ. ಸಿಎಂ ಬದಲಾವಣೆ ಮಾಡುವ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು, ಸಿಎಂ ಬದಲಾವಣೆ ಮಾಡುವುದು ಸುಲಭದ ವಿಚಾರವಲ್ಲ. ಸದ್ಯ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಸಮರ್ಥವಾಗಿದ್ದಾರೆ ಎಂದು ಜಯದೇವ್ ನಾಯ್ಕ್ ಹೇಳಿದರು.

ಇದನ್ನೂ ಓದಿ : ಸಿಎಂ - ಡಿಸಿಎಂ ಬಗ್ಗೆ ಬಹಿರಂಗ ಚರ್ಚೆ ಬೇಡ, ಬಾಯಿಗೆ ಬೀಗ ಹಾಕಿ, ಇಲ್ಲವಾದರೆ ಪಕ್ಷದಿಂದ ನೋಟೀಸ್ ಜಾರಿ: ಡಿ.ಕೆ. ಶಿವಕುಮಾರ್ - DK SHIVAKUMAR WARN TO LEADERS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.