ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ದಯಾನಂದ ಅವರ ಆದೇಶದಂತೆ ಠೇವಣಿ ಇಡಲು ಬಂದಿದ್ದ ಕಂಟ್ರಿಮೇಡ್ ಪಿಸ್ತೂಲ್ ಪರಿಶೀಲಿಸುವಾಗ, ಠಾಣಾ ಸಿಬ್ಬಂದಿಯಿಂದ ಮಿಸ್ ಫೈರ್ ಆಗಿ ರೈಟರ್ಗೆ ಗುಂಡೇಟು ಬಿದ್ದು ಗಾಯಗೊಂಡಿದ್ದಾರೆ. ಬೇಗೂರು ಠಾಣೆಯಲ್ಲಿ ಈ ದುರ್ಘಟನೆ ನಡೆದಿದೆ.
ಪೊಲೀಸ್ ಕಮೀಷನರ್ ಸೂಚನೆಯಂತೆ ಮುಕುಂದರೆಡ್ಡಿ ಎಂಬುವವರು ತಮ್ಮ ಬಳಿಯಿದ್ದ ಕಂಟ್ರಿಮೇಡ್ ಪಿಸ್ತೂಲ್ ಅನ್ನು ಠಾಣೆಯಲ್ಲಿ ಠೇವಣಿ ಇಡಲು ಬಂದಿದ್ದರು. ಕಾನ್ಸ್ಟೇಬಲ್ ವೆಂಕಣ್ಣ ಅವರು ಪರಿಶೀಲಿಸುತ್ತಿದ್ದರು. ಈ ವೇಳೆ, ಟ್ರಿಗರ್ ಒತ್ತಿದ ತಕ್ಷಣ ಪಿಸ್ತೂಲ್ ಒಳ ಹೊಕ್ಕಿದ್ದ ಗುಂಡು ಎದುರುಗಡೆ ಕುಳಿತ್ತಿದ್ದ ಠಾಣಾ ರೈಟರ್ ಅಂಬುದಾಸ್ ಅವರ ಎಡಕಾಲಿಗೆ ಮಿಸ್ ಫೈರ್ ಆಗಿದೆ. ಘಟನೆ ಸಂಬಂಧ ಗಾಯಾಳುವನ್ನ ಅಪೊಲೊ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬುಲೆಟ್ ಮ್ಯಾಗಜೀನ್ನಲ್ಲಿದ್ದ ಒಂದು ಗುಂಡು ಪಿಸ್ತೂಲ್ನಲ್ಲಿ ಲಾಕ್ ಆಗಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ. ಸ್ಥಳಕ್ಕೆ ವಿಧಿವಿಜ್ಞಾನ ತಂಡ ಆಗಮಿಸಿ ಪರಿಶೀಲಿಸುತ್ತಿದೆ. ಘಟನೆಗೆ ಕಾರಣರಾದ ಕಾನ್ಸ್ಟೇಬಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ರಿವಾಲ್ವಾರ್ ಸ್ವಚ್ಛ ಮಾಡುವಾಗ ಮಿಸ್ ಫೈಯರ್: ಹಣೆಗೆ ತಗುಲಿದ ಗುಂಡು