ಉಡುಪಿ : ಚಲಿಸುತ್ತಿದ್ದಾಗಲೇ ಕೆಎಸ್ಆರ್ಟಿಸಿ ಬಸ್ನ ಟಯರ್ ಕಳಚಿದ್ದು, ಸಂಭವನೀಯ ಅನಾಹುತ ತಪ್ಪಿದ ಘಟನೆ ಕುಂದಾಪುರ ಆಜ್ರಿ ಸಮೀಪದ ಹೆಮ್ಮಕ್ಕಿ ಬಳಿ ಶನಿವಾರ ನಡೆದಿದೆ.
ಆಜ್ರಿಯಿಂದ ಕುಂದಾಪುರಕ್ಕೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಇದಾಗಿದೆ. ಬಸ್ ನಿಧಾನಗತಿಯಲ್ಲಿ ಸಂಚರಿಸುತ್ತಿದ್ದರಿಂದ ಯಾವುದೇ ಅನಾಹುತ ಸಂಭವಿಸದೆ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಆಜ್ರಿಯ ನಿವಾಸಿ ಚಂದ್ರಹಾಸ ಅವರು ಪ್ರತಿಕ್ರಿಯೆ ನೀಡಿದ್ದು, ಕೆಎಸ್ಆರ್ಟಿಸಿ ಹಾಗೂ ಡಿಪೋ ಮೆಕ್ಯಾನಿಕ್ಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟ ಆಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕಾರವಾರದಲ್ಲಿ ಬಸ್ ಟಯರ್ ಸ್ಫೋಟ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ