ETV Bharat / state

ದೀಪಾವಳಿ ಪಟಾಕಿ ಅವಘಡ: ಕಣ್ಣಿನ ತೊಂದರೆಗೆ ಒಳಗಾದ ಪ್ರಕರಣಗಳ ಸಂಖ್ಯೆ 54ಕ್ಕೆ ಏರಿಕೆ

ಬೇರೆಯವರು ಸಿಡಿಸಿರುವ ಪಟಾಕಿಯಿಂದ ಕಣ್ಣಿನ ಗಾಯಕ್ಕೊಳಗಾದವರ ಸಂಖ್ಯೆ ಅಧಿಕವಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಮೊದಲೇ ಜಾಗೃತಿ ಮೂಡಿಸಿದ್ದರೂ ಪಟಾಕಿ ದುರಂತಗಳು ಸಂಭವಿಸುತ್ತಲೇ ಇವೆ.

ಪಟಾಕಿಯಿಂದ ಕಣ್ಣಿನ ತೊಂದರೆಗೆ ಒಳಗಾದ ಪ್ರಕರಣಗಳ ಸಂಖ್ಯೆ 54ಕ್ಕೆ ಏರಿಕೆ
ಪಟಾಕಿಯಿಂದ ಕಣ್ಣಿನ ತೊಂದರೆಗೆ ಒಳಗಾದ ಪ್ರಕರಣಗಳ ಸಂಖ್ಯೆ 54ಕ್ಕೆ ಏರಿಕೆ (ಸಂಗ್ರ ಚಿತ್ರ ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ಪಟಾಕಿ ಅವಘಡಗಳಿಂದ ಕಣ್ಣಿಗೆ ಹಾನಿಯಾಗುತ್ತಿರುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಲೆ ಇದೆ. ಶುಕ್ರವಾರ ಒಂದೇ ದಿನ ಕಣ್ಣಿನ ತೊಂದರೆಗೆ ಒಳಗಾದ ಪ್ರಕರಣ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಬಹುತೇಕರು ಬೇರೆಯವರು ಸಿಡಿಸಿರುವ ಪಟಾಕಿಯಿಂದ ಕಣ್ಣಿನ ಗಾಯಕ್ಕೊಳಗಾಗಿದ್ದಾರೆ ಎನ್ನುವುದು ಕಳವಳಕಾರಿ ಸಂಗತಿ.

ರಾಜ್ಯ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆಗಳು ಸಂಘ ಸಂಸ್ಥೆಗಳು ಪಟಾಕಿ ಹಚ್ಚುವ ವೇಳೆ ಮುಂಜಾಗೃತಾ ಕ್ರಮ ವಹಿಸುವಂತೆ ಜಾಗೃತಿ ಮೂಡಿಸಿದ್ದರೂ ಪಟಾಕಿ ದುರಂತಗಳು ಸಂಭವಿಸುತ್ತಲೇ ಇವೆ.

ವರದಿಯಂತೆ ಓರ್ವ ವಯಸ್ಕ ಸೇರಿದಂತೆ 10 ಮಕ್ಕಳು ಪಟಾಕಿ ಅವಘಡಗಳಿಗೆ ತುತ್ತಾಗಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 6 ಮಂದಿ ಒಪಿಡಿ ಹಾಗೂ 4 ಮಂದಿ ನಾನ್ ಒಪಿಡಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಒಂದು ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಇನ್ನು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಶುಕ್ರವಾರ ಪಟಾಕಿ ಅವಘಡಕ್ಕೆ ಸಂಬಂಧಿಸಿದಂತೆ 12 ಪ್ರಕರಣ ವರದಿಯಾಗಿದೆ. ಅದರಲ್ಲಿ 8 ಮಕ್ಕಳು ಹಾಗೂ 4 ವಯಸ್ಕರು ಇದ್ದಾರೆ. ಕಾರ್ನಿಯಾ ಗಾಯ ಸೇರಿದಂತೆ ಇತರ ಗಂಭೀರ ಗಾಯಗಳಾಗಿರುವುದು ವರದಿಯಾಗಿದೆ.

ಉಳಿದಂತೆ ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ 9 ಹಾಗೂ ನಾರಾಯಣ ನೇತ್ರಾಲಯದ ರಾಜಾಜಿನಗರ ಶಾಖೆಯಲ್ಲಿ 11, ಬೊಮ್ಮಸಂದ್ರ ಶಾಖೆಯಲ್ಲಿ 4, ಇಂದಿರಾನಗರದಲ್ಲಿ 5 ಮತ್ತು ಬನ್ನೇರುಗಟ್ಟ ಶಾಖೆಯಲ್ಲಿ 3 ಪ್ರಕರಣಗಳು ಸೇರಿದಂತೆ ಒಟ್ಟು 23 ಪ್ರಕರಣಗಳು ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಟಾಕಿ ಅವಘಡಗಳು: ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ 7 ಮಕ್ಕಳು ಚಿಕಿತ್ಸೆಗೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.