ETV Bharat / state

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಕೇಂದ್ರದಿಂದ ಬರುವ ಹಣ ಅತ್ಯಲ್ಪ: ಇದಕ್ಕಿಂತ ದೊಡ್ಡ ಮೋಸ ಇದ್ಯಾ: ಸಿಎಂ ಪ್ರಶ್ನೆ - ಪ್ರಧಾನಮಂತ್ರಿ ಆವಾಸ್ ಯೋಜನೆ

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಕೇಂದ್ರದಿಂದ ಬರುವ ಹಣ ಅತ್ಯಲ್ಪ. ಇದಕ್ಕಿಂತ ದೊಡ್ಡ ಮೋಸ ಇದ್ಯಾ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Pradhan Mantri Awas Yojana  low money  ಪ್ರಧಾನಮಂತ್ರಿ ಆವಾಸ್ ಯೋಜನೆ  ಕೇಂದ್ರದಿಂದ ಬರುವ ಹಣ ಅತ್ಯಲ್ಪ
ಇದಕ್ಕಿಂತ ದೊಡ್ಡ ಮೋಸ ಇದ್ಯಾ: ಸಿಎಂ
author img

By ETV Bharat Karnataka Team

Published : Mar 2, 2024, 8:24 PM IST

ಬೆಂಗಳೂರು‌: ಇದು ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸರ್ವರಿಗೂ ಸೂರು. ಆದರೆ, ಕೇಂದ್ರದಿಂದ 1.50 ಲಕ್ಷ ರೂ. ಮಾತ್ರ ಬರುತ್ತೆ. ಇದಕ್ಕಿಂತ ದೊಡ್ಡ ಮೋಸ ಯಾವುದಾದರೂ ಇದ್ಯಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಕೆ.ಆರ್.ಪುರಂನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಇದು ಪ್ರಧಾನಿ ಮಂತ್ರಿ ಆವಾಸ್ ಯೋಜನೆ, ಸರ್ವರಿಗೂ ಸೂರು. ಆದರೆ, ಕೇಂದ್ರದಿಂದ ಬರೋದು‌ 1.50 ಲಕ್ಷ ರೂ. ಮಾತ್ರ. ಒಂದು ಮನೆಗೆ 6 ರಿಂದ 7.5 ಲಕ್ಷ ರೂ. ಖರ್ಚು ಆಗುತ್ತೆ.‌ ಇದಕ್ಕಿಂತ ದೊಡ್ಡ ಮೋಸ ಯಾವುದಾದ್ರೂ ಇದ್ಯಾ?. ಇದರ ಜೊತೆಗೆ 1.50 ಲಕ್ಷ ರೂ. ಜಿಎಸ್​ಟಿ ಸಂಗ್ರಹ ಮಾಡ್ತಾರೆ. ಬಾಕಿ ಉಳಿದದ್ದು ಎಷ್ಟು 12 ಸಾವಿರ ರೂ. ಎಂದು ಟೀಕಿಸಿದರು.

ಯಾರಾದ್ರೂ ಫ್ರೀ ಬಸ್ ಕೊಟ್ಟಿದ್ರಾ?. ಪೂರ್ಣಿಮಾ ಕೂಡ ತಿರುಗಾಡಬಹುದು. ಹಿಂದೆ ಯಾರಾದ್ರೂ ಈ‌ ಯೋಜನೆ ಕೊಟ್ಟಿದ್ರೇನಮ್ಮಾ?. ಬಿಜೆಪಿಯವರಿಗೆ ನಮ್ಮ ಯೋಜನೆಯಿಂದ ಹೊಟ್ಟೆ ಉರಿ. ಬಿಜೆಪಿಯವರು ಬಡವರ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿ. ಅವರು ಇರೋದೇ ಶ್ರೀಮಂತರ ಪರವಾಗಿ. ಮೋದಿ‌ ಕಾರ್ಪೊರೇಟ್ ಟ್ಯಾಕ್ಸ್ 22.5ಕ್ಕೆ ಇಳಿಕೆ ಮಾಡಿದ್ದಾರೆ. ಮಧ್ಯಮ ವರ್ಗ ಹಾಗೂ ಬಡವರಿಗೆ ಹೊರೆ ಹಾಕಿ ಕಾರ್ಪೊರೇಟ್ ಟ್ಯಾಕ್ಸ್ ಕಡಿಮೆ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ನೀವು ಅವರಿಗೆ ಪಾಠ ಕಲಿಸಿದ್ದೀರಿ. ಮುಂದಿನ ಲೋಕಸಭೆಯಲ್ಲೂ ಇದೇ ರೀತಿ ಆಶೀರ್ವಾದ ಮಾಡಿ. ನಮ್ಮ‌ ಅಭ್ಯರ್ಥಿಗಳಿಗೆ ಬೆಂಬಲ‌ ಕೊಡಿ ಎಂದರು.

28 ಜಿಲ್ಲೆಗಳಲ್ಲಿ 36,789 ಮನೆಗಳನ್ನ ಮೊದಲ ಹಂತದಲ್ಲಿ ಹಂಚಿಕೆ ಮಾಡ್ತಾ ಇದ್ದೇವೆ. ಒಂದೇ ದಿನ ಎಲ್ಲ ಜಿಲ್ಲೆಗಳಲ್ಲೂ ಹಂಚಿಕೆ ಆಗ್ತಿದೆ. ಬೆಂಗಳೂರಿನಲ್ಲಿ ನಾನು, ಬೇರೆ ಜಿಲ್ಲೆಗಳಲ್ಲಿ ಸ್ಥಳೀಯ ಶಾಸಕರಿಂದ ಮನೆ ಹಂಚಿಕೆ ಆಗ್ತಾ ಇದೆ. 1,80, 253 ಮನೆಗಳನ್ನ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡ್ತಾ ಇದ್ದೇವೆ. ನಮ್ಮ‌ ಸರ್ಕಾರ 2013-18ರವರೆಗೆ ಇದ್ದಾಗ ರಾಜ್ಯದಲ್ಲಿ ವಸತಿ ಹೀನರಿಗೆ ಪ್ರತಿ ವರ್ಷ 3 ಲಕ್ಷ ಮನೆ ಕೊಡ್ಬೇಕು ಅಂತ ತೀರ್ಮಾನ ಮಾಡಿದ್ವಿ. 5 ವರ್ಷದಲ್ಲಿ 14.54 ಲಕ್ಷ ಮನೆಗಳನ್ನು ಬಡವರಿಗೆ ನೀಡಿದ್ದೇವೆ ಎಂದರು.

ಅನ್ನ, ಆರೋಗ್ಯ, ಅಕ್ಷರ, ಆಶ್ರಯ ನಮ್ಮ ಮೂಲಮಂತ್ರ: ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅನ್ನ, ಆರೋಗ್ಯ, ಅಕ್ಷರ, ಆಶ್ರಯ ಇವು ನಮ್ಮ ಸರ್ಕಾರದ ಮೂಲಮಂತ್ರ. ಅಸಹಾಯಕರ, ಬಡವರ ಏಳಿಗೆಯೇ ನಮ್ಮ ಆದ್ಯತೆ. ಉದ್ಯೋಗ, ಕುಡಿಯುವ ನೀರಿಗೆ ಮೊದಲು ಪ್ರಾಶಸ್ತ್ಯ ನೀಡುತ್ತೇವೆ. ಈ ದೇಶದ ಬಡವರಿಗೆ ಮನೆ ನೀಡಬೇಕು ಎಂದು ಮೊದಲು ಕಾನೂನು ತಂದಿದ್ದು, ಇಂದಿರಾಗಾಂಧಿ ಅವರು. ಮನೆ ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ರಾಜೀವ್ ಗಾಂಧಿ ವಸತಿ ನಿಗಮದ ಮನೆಗಳಿಗೆ ಸರ್ಕಾರ ನಿಗದಿ ಮಾಡಿರುವಷ್ಟು ಹಣ ನೀಡಲು ಆಗುವುದಿಲ್ಲ ಎಂದು ಮನವಿ ಸಲ್ಲಿಸಿದ್ದರು. ವಸತಿ ಸಚಿವರಾದ ಜಮೀರ್ ಅವರು ಕ್ಯಾಬಿನೆಟ್ ಮುಂದೆ ಇಟ್ಟು 5 ಲಕ್ಷ ರೂಗಳನ್ನು ಸರ್ಕಾರವೇ ನೀಡಿ ಬಡವರಿಗೆ ಮನೆ ನೀಡುವಂತೆ ಮಾಡಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲೇ ಐತಿಹಾಸಿಕ ತೀರ್ಮಾನ ಎಂದರು.

ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಸದೃಡ ಎಂದು ಗ್ಯಾರಂಟಿ ಸಮಾವೇಶದಲ್ಲಿ ಮಾಜಿ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ. ಬಿಜೆಪಿಯವರಿಗೂ ಸತ್ಯ ಅರ್ಥವಾಗಿದೆ. ಬಿಜೆಪಿಯವರು ಸಹ ಗ್ಯಾರಂಟಿ ಯೋಜನೆಗಳನ್ನು ಒಪ್ಪಿದ್ದಾರೆ. ಜ್ಞಾನ ಇಲ್ಲದ ಅರಗ ಜ್ಞಾನೇಂದ್ರ ಅವರು ಮಾತ್ರ ಡೂಪ್ಲಿಕೇಟ್ ಎಂದು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳು ಡೂಪ್ಲಿಕೇಟ್ ಎಂದು ನೀವು ಒಪ್ಪುತ್ತೀರಾ? ಎಂದು ಪ್ರಶ್ನಿಸಿದರು.

ಸಿಎಂಗೆ ಬೆಳ್ಳಿ ಕಿರೀಟ, ಗದೆ ನೀಡಿ ಸನ್ಮಾನ: ಇದೇ ವೇಳೆ ಸಿಎಂ ಸಿದ್ದರಾಮಯ್ಯಗೆ ವಸತಿ ಸಚಿವ ಜಮೀರ್ ಅಹ್ಮದ್ ಅವರು ಬೆಳ್ಳಿಯ ಕಿರೀಟ ಮತ್ತು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.

ಓದಿ: ಪಕ್ಷದ ವರಿಷ್ಠರು ತೀರ್ಮಾನಿಸಿದರೆ ಶಿವಮೊಗ್ಗದಿಂದ ಸ್ಪರ್ಧಿಸುವೆ: ಗೀತಾ ಶಿವರಾಜಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.