ETV Bharat / state

ಮೈಸೂರು ದಸರಾ: ಅರಮನೆಗೆ ಬಂದ ಗಜ ಪಡೆಗೆ ಅದ್ಧೂರಿ ಸ್ವಾಗತ - DASARA GAJAPADE - DASARA GAJAPADE

ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಬರಮಾಡಿಕೊಳ್ಳಲಾಯಿತು.

ಅರಮನೆಗೆ ಬಂದ ಗಜ ಪಡೆಗೆ ಅದ್ಧೂರಿ ಸ್ವಾಗತ
ಅರಮನೆಗೆ ಬಂದ ಗಜ ಪಡೆಗೆ ಅದ್ಧೂರಿ ಸ್ವಾಗತ (ETV Bharat)
author img

By ETV Bharat Karnataka Team

Published : Aug 23, 2024, 12:23 PM IST

Updated : Aug 23, 2024, 1:28 PM IST

ಅರಮನೆಗೆ ಬಂದ ಗಜ ಪಡೆಗೆ ಅದ್ಧೂರಿ ಸ್ವಾಗತ (ETV Bharat)

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಗಜಪಯಣದ ಮೂಲಕ ಆಗಮಿಸಿದ ಮೊದಲ ಹಂತದ ಅಭಿಮನ್ಯು ನೇತೃತ್ವದ 9 ಗಜಪಡೆಗೆ ಅಂಬಾ ವಿಲಾಸ ಅರಮನೆಯ ಆವರಣದಲ್ಲಿ ವಿಧ್ಯುಕ್ತವಾಗಿ ಸ್ವಾಗತ ನೀಡಲಾಯಿತು.

ಗಜ ಪಡೆಗೆ ಅದ್ಧೂರಿ ಸ್ವಾಗತ
ಗಜ ಪಡೆಗೆ ಅದ್ಧೂರಿ ಸ್ವಾಗತ (ETV Bharat)

ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಸ್ಟ್‌ 21 ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ ಅಭಿಮನ್ಯು ನೇತೃತ್ವದ 9 ಗಜಪಡೆ ಮೈಸೂರಿನ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದವು. ಇಂದು ಬೆಳಗ್ಗೆ ಸಾಂಪ್ರಾದಾಯಿಕ ಪೂಜೆ ಸಲ್ಲಿಸಿ ಅರಣ್ಯ ಭವನದಿಂದ ಬೀಳ್ಕೊಟ್ಟಿದ್ದವು. ಅಲ್ಲಿಂದ ಮೈಸೂರು ನಗರದ ಕೃಷ್ಣಮೂರ್ತಿಪುರಂ, ಡಬ್ಬಲ್‌ ರೋಡ್‌ ಮೂಲಕ ಆಗಮಿಸಿದ ಗಜಪಡೆಯನ್ನು ಅರಮನೆಯ ಮುಖ್ಯದ್ವಾರದಲ್ಲಿ ಸ್ವಾಗತಿಸಲಾಯಿತು.

ಅರಮನೆಗೆ ಆಗಮಿಸಿದ ಗಜ ಪಡೆ
ಅರಮನೆಗೆ ಆಗಮಿಸಿದ ಗಜ ಪಡೆ (ETV Bharat)

ತುಲಾ ಲಗ್ನದಲ್ಲಿ 9 ಗಜಗಳ ಅರಮನೆ ಪ್ರವೇಶ: ಶುಭ ಶುಕ್ರವಾರ ಇಂದು ಬೆಳಗ್ಗೆ 10.10 ರಿಂದ 10.30 ರ ಶುಭ ತುಲಾ ಲಗ್ನದಲ್ಲಿ ಅಭಿಮನ್ಯು ನೇತೃತ್ವದ 9 ಗಜಪಡೆಗೆ ಅರಮನೆ ಮುಂಭಾಗದ ಜಯ ಮಾರ್ತಾಂಡ ದ್ವಾರದ ಬಳಿ ಜಿಲ್ಲಾಡಳಿತದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪುಷ್ಪಾರ್ಚನೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್​ ರೆಡ್ಡಿ ಗಜಪಡೆಯನ್ನು ಅರಮನೆಗೆ ಸ್ವಾಗತಿಸಿದರು.

ಅರಮನೆಗೆ ಆಗಮಿಸಿದ ಗಜ ಪಡೆ
ಅರಮನೆಗೆ ಆಗಮಿಸಿದ ಗಜ ಪಡೆ (ETV Bharat)

ನಂತರ ಅರಮನೆ ಮುಂಭಾಗದ ಆನೆ ಬಾಗಿಲಿನ ಬಳಿ ಗಜಪಡೆಯನ್ನು ಅರಮನೆ ಆಡಳಿತ ಮಂಡಳಿ ಸ್ವಾಗತ ಮಾಡಿದರು. ಅಲ್ಲೂ ಸಹ ವಿಶೇಷ ಪೂಜೆ ಸಲ್ಲಿಸಲಾಯಿತು. ಇಂದು ಗಜಪಡೆ ಅರಮನೆ ಮುಂಭಾಗದ ಕೋಟಿ ಸೋಮೇಶ್ವರ ದೇವಾಲಯದ ಬಳಿ ವಿಶ್ರಾಂತಿ ಪಡೆಯಲಿವೆ. ನಾಳೆಯಿಂದ 50 ದಿನಗಳಿಗೂ ಹೆಚ್ಚು ಕಾಲ ಅರಮನೆ ಆವರಣದಲ್ಲೇ ವಾಸ್ತವ್ಯ ಹೂಡಲಿವೆ. ಇಲ್ಲಿ ತಾಲೀಮು ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಅಭಿಮನ್ಯು ನೇತೃತ್ವದಲ್ಲಿ ತಯಾರಿ ನಡೆಸಲಾಗುತ್ತದೆ.

ಅರಮನೆಗೆ ಆಗಮಿಸಿದ ಗಜ ಪಡೆ
ಅರಮನೆಗೆ ಆಗಮಿಸಿದ ಗಜ ಪಡೆ (ETV Bharat)

ಈ ವೇಳೆ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯ ಮಾತನಾಡಿ, "ಈ ವರ್ಷ ಅದ್ಧೂರಿ ದಸರಾ ಆಚರಣೆ ಮಾಡಲು ನಿರ್ಧಾರಿಸಲಾಗಿದೆ. ಮೊದಲ ಹಂತದಲ್ಲಿ 9 ಆನೆಗಳು ಆಗಮಿಸಿವೆ. ಮುಂದಿನ ವಾರ 2ನೇ ಹಂತದ ಗಜಪಡೆ ಆಗಮಿಸಲಿವೆ. 48 ದಿನಗಳ ಕಾಲ ತಾಲೀಮು ನಡೆಸಿ ಜಂಜೂ ಸವಾರಿಗೆ ಗಜಪಡೆಯನ್ನು ಸಿದ್ಧಗೊಳಿಸಲಾಗುತ್ತದೆ "ಎಂದು ಮಾಹಿತಿ ನೀಡಿದರು.

ಅರಮನೆ ಪ್ರವೇಶಿಸಿದ ಗಜಪಡೆಗಳ ವಿವರ: ಅಭಿಮನ್ಯು (58), ಭೀಮ (24), ಗೋಪಿ(41), ಧನಂಜಯ (43), ಕಂಜನ್​(25), ರೋಹಿಣಿ (22), ಲಕ್ಷ್ಮೀ (53), ವರಲಕ್ಷ್ಮಿ (67), ಏಕಲವ್ಯ (38).

ಇದನ್ನೂ ಓದಿ: ದಸರಾ: ಸಾಂಪ್ರದಾಯಿಕ ಪೂಜೆಯೊಂದಿಗೆ ಇಂದು ಅರಮನೆಗೆ ಗಜಪಡೆ ಪ್ರವೇಶ - dasara 2024

Last Updated : Aug 23, 2024, 1:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.