ETV Bharat / state

ಕೈಕೊಟ್ಟ ಜಂಬೂನೇರಳೆ: ಸಾಂಪ್ರದಾಯಿಕ ಕೃಷಿ ಬಿಟ್ಟು ತೋಟಗಾರಿಕೆ ಕೃಷಿ ನಂಬಿದ್ದ ಹಾವೇರಿ ರೈತ ಕಂಗಾಲು - Jambu purple crop

author img

By ETV Bharat Karnataka Team

Published : Jun 2, 2024, 10:09 AM IST

Updated : Jun 2, 2024, 11:46 AM IST

ಹಾವೇರಿ ರೈತರೊಬ್ಬರು ತೋಟಗಾರಿಕೆ ಕೃಷಿ ನಂಬಿ ಜಂಬೂನೇರಳೆ ಹಣ್ಣಿನ ಗಿಡ ನೆಟ್ಟು ಕೆಲ ವರ್ಷ ಲಾಭ ಪಡೆದಿದ್ದರು. ಆದರೆ ಈ ಬಾರಿ ನೇರಳೆ ಹಣ್ಣು ಕೈಕೊಟ್ಟಿದ್ದು ರೈತ ನಷ್ಟದಿಂದ ಪರಿಹಾರಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ರೈತ ರಾಮಪ್ಪ ಕುಲಕರ್ಣಿ
ರೈತ ರಾಮಪ್ಪ ಕುಲಕರ್ಣಿ (ETV Bharat)
ರೈತ ರಾಮಪ್ಪ ಕುಲಕರ್ಣಿ ಮಾಹಿತಿ (ETV Bharat)

ಹಾವೇರಿ: ಸಾಂಪ್ರದಾಯಿಕ ಕೃಷಿ ಬಿಟ್ಟು ತೋಟಗಾರಿಕೆ ಕೃಷಿಗೆ ಇಳಿದು ಯಶಸ್ಸು ಕಂಡಿದ್ದ ಜಿಲ್ಲೆಯ ರೈತರೊಬ್ಬರು ಈ ಬಾರಿ ನಷ್ಟಕ್ಕೊಳಗಾಗಿದ್ದಾರೆ.

ಹೌದು, ಸವಣೂರು ತಾಲೂಕು ಮೆಳ್ಳಾಗಟ್ಟಿ ಗ್ರಾಮದ ಸಾಮಾನ್ಯ ರೈತ ರಾಮಪ್ಪ ಕುಲಕರ್ಣಿ ಅವರು ಕಳೆದ ಹಲವು ವರ್ಷಗಳಿಂದ ಸಾಂಪ್ರದಾಯಿಕ ಕೃಷಿ ಮಾಡಿಕೊಂಡು ಬಂದಿದ್ದರು. ಸಾಂಪ್ರದಾಯಿಕ ಬೆಳೆಗಳಾದ ಮೆಕ್ಕೆಜೋಳ, ಹತ್ತಿ ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಸಾಂಪ್ರದಾಯಿಕ ಬೆಳೆಗಳಿಂದ ಕಡಿಮೆ ಆದಾಯ ಗಳಿಸಿದ್ದ ರಾಮಪ್ಪ ಮತ್ತೆ ಕೈ ಹಾಕಿದ್ದು ತೋಟಗಾರಿಕೆ ಬೆಳೆಗಳತ್ತ.

ಆರಂಭದಲ್ಲಿ ಲಾಭ ಗಳಿಸಿದ್ದ ರಾಮಪ್ಪ: ತಮಗೆ ಇದ್ದ ಆರೂವರೆ ಎಕರೆ ಜಮೀನಿನಲ್ಲಿ ನಾಲ್ಕೂವರೆ ಎಕರೆ ಪೇರಲ ಮತ್ತು ಎರಡು ಎಕರೆಯಲ್ಲಿ ಜಂಬೂನೇರಳೆ ಹಣ್ಣಿನ ಗಿಡ ನೆಟ್ಟಿದ್ದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೂರದ ತಮಿಳುನಾಡಿನಿಂದ ಸಸಿಗಳನ್ನು ತಂದು ನೆಟ್ಟು ಬೆಳೆಸಿದ್ದರು. ಅದರಂತೆ ಪೇರಲ ಮತ್ತು ನೇರಳೆ ಸಸಿಗಳು ಬೆಳೆದು ಮರಗಳಾಗಿ ರಾಮಪ್ಪನಿಗೆ ಆದಾಯ ತಂದಿದ್ದವು. ಅದರಲ್ಲೂ ಜಂಬೂ ನೇರಳೆ ತೋಟದಲ್ಲಿ ಅದ್ಭುತ ಆದಾಯದ ಕನಸನ್ನು ರಾಮಪ್ಪ ಗಳಿಸಿದ್ದರು. ಎರಡು ಎಕರೆ ಪ್ರದೇಶದಲ್ಲಿ ಸುಮಾರು ಎರಡುನೂರು ನೇರಳೆ ಸಸಿ ನೆಟ್ಟು ತೋಟ ಮಾಡಿದ್ದ ರಾಮಪ್ಪನಿಗೆ ಸಸಿ ನೆಟ್ಟು ಮೂರೇ ವರ್ಷಕ್ಕೆ ಆದಾಯ ಬರಲಾರಂಭಿಸಿತ್ತು.

ಹುಸಿಯಾದ ನಿರೀಕ್ಷೆ; ಸಸಿ ನೆಟ್ಟು ನಾಲ್ಕು ಮತ್ತು ಐದನೇ ವರ್ಷವಂತೂ ರಾಮಣ್ಣನ ತೋಟಕ್ಕೆ ಬಂದ ವ್ಯಾಪಾರಿಗಳು ನೇರಳೆ ಹಣ್ಣುಗಳನ್ನು ಕೆಜಿಗೆ 130 ರೂಪಾಯಿ ನೀಡಿ ಖರೀದಿ ಮಾಡಿದ್ದರು. ಜಮೀನಿಗೆ ಪ್ರತಿವರ್ಷದಂತೆ ಈ ವರ್ಷ ಸಹ ರಾಮಪ್ಪ ಕೊಟ್ಟಿಗೆ ಗೊಬ್ಬರ ಮತ್ತು ಕೋಳಿಗೊಬ್ಬರ ತಂದು ಹಾಕಿ ಪೋಷಣೆ ಮಾಡಿದ್ದರು ಅಷ್ಟೇ. ಅಲ್ಲದೆ ಈ ವರ್ಷ ಗಿಡ ದೊಡ್ಡದಾಗಿವೆ ಒಂದೊಂದು ಗಿಡದಿಂದ ಕನಿಷ್ಠ 10 ಕೆಜಿ ನೇರಳೆ ಹಣ್ಣು ಸಿಗುತ್ತವೆ ಅಂತಾ ನಿರೀಕ್ಷೆ ಹೊಂದಿದ್ದರು. ಆದರೆ ಇವರ ತೋಟದಲ್ಲಿ ಎರಡು ನೂರು ಮರಗಳಲ್ಲಿ ಈ ವರ್ಷ ಹಣ್ಣುಬಿಟ್ಟಿದ್ದು ಕೇವಲ ಒಂದೇ ಒಂದು ಗಿಡ. ಆರಂಭದಲ್ಲಿ ಕಳೆದ ವರ್ಷದ ಬರಗಾಲದ ಪರಿಣಾಮ ಇರಬಹುದು ಎಂದು ರಾಮಪ್ಪ ತಿಳಿದುಕೊಂಡಿದ್ದರು.

ಆದರೆ ಈ ವರ್ಷ ಮುಂಗಾರು ಪೂರ್ವ ಮಳೆಯಾದರು ಸಹ ನೇರಳೆ ಗಿಡಗಳು ಹಣ್ಣುಬಿಟ್ಟಿಲ್ಲಾ. ಎಲ್ಲ ರೀತಿಯ ಉಪಚಾರ ಮಾಡಿದರೂ ಸಹ ನೇರಳೆ ಗಿಡಗಳು ಹಣ್ಣು ಬಿಡದಿರುವದು ರಾಮಪ್ಪನಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ. ಈ ಗಿಡಗಳಿಂದ ಬರುವ ಲಾಭದಿಂದ ಹಲವು ಕನಸು ಕಂಡಿದ್ದ ರಾಮಪ್ಪನಿಗೆ ಇದೀಗ ದಿಕ್ಕುದೋಚದಂತಾಗಿದೆ. ನೇರಳೆ ಹಣ್ಣಿನ ಗಿಡಗಳ ಫಲ ಬಿಡದೆ ರಾಮಪ್ಪನಿಗೆ ತೀವ್ರ ನಿರಾಸೆಯಾಗಿದೆ. ಒಂದೊಂದು ಗಿಡ ಕೇವಲ 10 ಕೆಜಿ ಹಣ್ಣು ಬಿಟ್ಟಿದ್ದರೆ ಎರಡು ಲಕ್ಷ ರೂಪಾಯಿಗೂ ಅಧಿಕ ಆದಾಯ ಬರುತ್ತಿತ್ತು.

ತೋಟದ ಆದಾಯ ಇರಲಿ ಬಿಡಲಿ ವರ್ಷ ತೋಟ ನಿರ್ವಹಣೆಗೆ ಎಕರೆಗೆ 40 ಸಾವಿರ ರೂಪಾಯಿ ಖರ್ಚಾಗುತ್ತೆ. ಕಳೆದ ವರ್ಷ ಖರ್ಚು ತೆಗೆದು ಸ್ವಲ್ಪ ಆದಾಯ ಬಂದಿತ್ತು. ಈ ವರ್ಷ ನೇರಳೆ ಕೈಹಿಡಿಯುತ್ತೆ ಎಂದರೇ ಈ ರೀತಿಯಾಗಿರುವುದಕ್ಕೆ ರಾಮಪ್ಪ ಕಂಗಾಲಾಗಿದ್ದಾರೆ.

ಈ ಕುರಿತಂತೆ ತೋಟಗಾರಿಕಾ ಅಧಿಕಾರಿಗಳನ್ನು ಕೇಳಿದರೆ ತೋಟಕ್ಕೆ ಬರುತ್ತೇವೆ ಎಂದು ಹೇಳುವ ಅಧಿಕಾರಿಗಳು ತೋಟಕ್ಕೆ ಬಂದಿಲ್ಲಾ. ಇತ್ತ ಸಸಿ ತಂದವರನ್ನು ಕೇಳಿದರೆ ಅವರು ಹವಾಮಾನ ವೈಪರೀತ್ಯದಿಂದ ಈ ರೀತಿಯಾಗಿದೆ ಎಂದು ತಿಳಿಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಬಹುತೇಕ ಕಡೆ ಜಂಬೂ ನೇರಳೆ ಹಣ್ಣುಗಳು ಬಿಟ್ಟಿದ್ದು ಮಾರುಕಟ್ಟೆಗೆ ಬಂದಿವೆ. ಕೆಜಿಗೆ 200 ರೂಪಾಯಿಯಂತೆ ಮಾರಾಟವಾಗುತ್ತಿವೆ. ನನ್ನ ತೋಟದಲ್ಲೇಕೆ ಹೀಗಾಯಿತು ಎಂದು ರಾಮಪ್ಪ ಅಳಲು ತೋಡಿಕೊಳ್ಳುತ್ತಿದ್ದಾರೆ.

"ಸಂಬಂಧಪಟ್ಟ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಇದಕ್ಕೆ ಪರಿಹಾರ ಸೂಚಿಸಲಿ. ಅವರು ಹೇಳಿದಂತೆ ಗಿಡಗಳಿಗೆ ನಾನು ಔಷಧೋಪಚಾರ ಮಾಡಲು ಸಿದ್ಧವಾಗಿದ್ದೇನೆ. ಆದರೆ ಅಧಿಕಾರಿಗಳು ತೋಟದ ಕಡೆ ಬರುತ್ತಿಲ್ಲಾ. ಇನ್ನು ಸಸಿ ನೀಡಿದವರಾದರೂ ನನ್ನ ಸಹಾಯಕ್ಕೆ ಬರಲಿ ಎಂದರೆ ಅವರು ಬರುತ್ತಿಲ್ಲಾ. ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ನನಗೆ ಯಾರಾದರೂ ಬಂದು ಸಹಾಯ ಮಾಡಲಿ" ಎಂದು ರೈತ ರಾಮಪ್ಪ ಪರದಾಡುತ್ತಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ಮುಂಗಾರು ಸಿದ್ಧತೆ: ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ವಿತರಣೆಗೆ ಜಿಲ್ಲಾಡಳಿತ ಸಜ್ಜು - Monsoon Preparation

Last Updated : Jun 2, 2024, 11:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.