ETV Bharat / state

ಕೇಂದ್ರ ಬಜೆಟ್​ ಮೇಲೆ ಹುಬ್ಬಳ್ಳಿ-ಧಾರವಾಡ ಮಂದಿಗಿದೆ ಬೆಟ್ಟದಷ್ಟು ನಿರೀಕ್ಷೆ: ಭರವಸೆ ಬಿಡದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ - EXPECTATIONS ON UNION BUDGET

ಈ ಬಾರಿಯ ಕೇಂದ್ರ ಬಜೆಟ್ ಮೇಲೆ ಅವಳಿ ನಗರದ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರೈಲು ಸಂಪರ್ಕದಿಂದ ಹಿಡಿದು, ಫ್ಲೈ ಓವರ್​ ಕಾಮಗಾರಿಯ ವೇಗ ಹೆಚ್ಚಿಸಲು ಅನುದಾನದ ಅವಶ್ಯಕತೆ ಹುಬ್ಬಳ್ಳಿ-ಧಾರವಾಡಕ್ಕಿದೆ.

UNION BUDGET 2025  HUBBALLI  DHARWAD  ಕೇಂದ್ರ ಬಜೆಟ್
ಕೇಂದ್ರ ಬಜೆಟ್​ ಮೇಲೆ ಹುಬ್ಬಳ್ಳಿ-ಧಾರವಾಡದ ನಿರೀಕ್ಷೆಗಳೇನು? (ETV Bharat)
author img

By ETV Bharat Karnataka Team

Published : Jan 29, 2025, 9:50 AM IST

ಹುಬ್ಬಳ್ಳಿ: ಕೇಂದ್ರ ಬಜೆಟ್​​ ಸಮೀಪಿಸುತ್ತಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ-ಧಾರವಾಡ ಮಂದಿ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಳೆದ ಬಜೆಟ್​ನಲ್ಲಿ ಸಾಕಷ್ಟು ನಿರೀಕ್ಷೆ ಹೊಂದಿತ್ತು. ಆದರೆ ಈಡೇರಿದ್ದು ಬೆರಳಣಿಕೆಯಷ್ಟು ಮಾತ್ರ. ಹೀಗಿದ್ದರೂ ಭರವಸೆ ಬಿಡದ ಸಂಸ್ಥೆ ಈ ಬಾರಿಯೂ ಹಲವು ನಿರೀಕ್ಷೆಗಳನ್ನು ಹೊಂದಿದೆ.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಾರ್ಯದರ್ಶಿ ರವೀಂದ್ರ ಎಸ್​​.ಬಳಿಗೇರ ಪ್ರತಿಕ್ರಿಯೆ (ETV Bharat)

ಈ ಕುರಿತಂತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕಾರ್ಯದರ್ಶಿ ರವೀಂದ್ರ ಎಸ್​​.ಬಳಿಗೇರ ಅವರು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದರು.

"ಕಳೆದ ಬಜೆಟ್​ನಲ್ಲಿ ಧಾರವಾಡ-ಬೆಳಗಾವಿ ನೇರ ರೈಲು ಸಂಪರ್ಕಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು.‌ ಆದರೆ ಎರಡು ವರ್ಷಗಳಾದರೂ ಕೂಡ ಇನ್ನೂ ಆಮೆಗತಿಯಲ್ಲಿ‌ ನಡೆಯುತ್ತಿದೆ. ಇದು ಶೀಘ್ರವಾಗಿ ಕಾರ್ಯರೂಪಕ್ಕೆ ಬರುವುದರ ಜೊತೆಗೆ ಪ್ರಸಕ್ತ ಬಜೆಟ್​ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು ಎಂಬ ಬೇಡಿಕೆ ಇದೆ. ಹಾಗೆಯೇ, ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಫ್ಲೈ ಓವರ್​ ಕಾಮಗಾರಿ ಕೂಡ ನಿಧಾನಗತಿಯಲ್ಲಿ ನಡೆಯುತ್ತಿದೆ. ಆರೇಳು ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.‌ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಕಾಮಗಾರಿ ಅಡೆತಡೆ ಉಂಟು ಮಾಡಿದೆ.‌ ಅಭಿವೃದ್ಧಿಗೆ ಪೂರಕವಾಗಿ ಕಾಮಗಾರಿ ವೇಗ ಹೆಚ್ಚಿಸಲು ಕೇಂದ್ರದ ಅನುದಾನದ ಅವಶ್ಯಕತೆ ಇದೆ. ಇತ್ತೀಚೆಗೆ ಹುಬ್ಬಳ್ಳಿಯ ಧಾರವಾಡ ಮಹಾನಗರ ಪಾಲಿಕೆ ಇಬ್ಭಾಗವಾಗಿ ಧಾರವಾಡ ಪ್ರತ್ಯೇಕ ಪಾಲಿಕೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಆದರೆ ಎರಡು ಮಹಾನಗರ ಪಾಲಿಕೆಗಳಿಗೆ ಕೇಂದ್ರ ಸರ್ಕಾರದ ಪ್ರತ್ಯೇಕ ಅನುದಾನ ‌ಬಿಡುಗಡೆ ಮಾಡಬೇಕು. ಇದರಿಂದ ಎರಡು ನಗರಗಳ ಅಭಿವೃದ್ಧಿ ಅನುಕೂಲವಾಗಲಿದೆ. ರಸ್ತೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಅನುದಾನಕ್ಕೆ ಬಜೆಟ್​ನಲ್ಲಿ ಸಿಗುವ ನಿರೀಕ್ಷೆ ಹೊಂದಲಾಗಿದೆ" ಎಂದರು.

"ಅವಳಿ‌ನಗರ ವೇಗವಾಗಿ ಬೆಳೆಯುತ್ತಿದೆ. ಬೃಹತ್​, ಮಧ್ಯಮ ಹಾಗೂ ಎಂಎಸ್​ಎಂಇ ಕಾರ್ಖಾನೆಗಳಿಗಾಗಿ ವಿಶೇಷ ಕಾರಿಡಾರ್​ ಬೇಡಿಕೆ ಇದೆ. ಕಳೆದ ಬಜೆಟ್​ನಲ್ಲಿ ಜವಳಿ ಪಾರ್ಕ್​ ಬೇಡಿಕೆ ಇಟ್ಟಿದ್ದೆವು. ಅದೂ ಕೂಡ ಈಡೇರಿಲ್ಲ.‌ ಈ ಬಾರಿಯ ಬಜೆಟ್‌ನಲ್ಲಿ ಜವಳಿ ಪಾರ್ಕ್ ನೀಡಬೇಕು. ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್​ ಮಾಡಿದ್ದರು. ಆದರೆ ಹೆಚ್ಚು ಬೆಲೆ ನಿಗದಿಪಡಿಸಿದ್ದಾರೆ‌. 90 ಲಕ್ಷದಿಂದ 1.5 ಕೋಟಿ ಎಕರೆ ಮಾಡಿದ್ದರಿಂದ ಬುಕ್​​ ಮಾಡಿದವರು ಮರಳಿ ಹಣ ವಾಪಸ್ ಪಡೆಯುವಂತಾಯಿತು‌.‌ ಯಾವ ಉದ್ಯಮಿಗಳೂ ಅತ್ತ ಬರಲಿಲ್ಲ. ಹೀಗಾಗಿ ಅದು ವಿಫಲವಾಗಿದೆ. ಈ ರೀತಿ ಆಗದಂತೆ ಬಜೆಟ್​ನಲ್ಲಿ ವಿಶೇಷ ಗಮನ ಹರಿಸಬೇಕಿದೆ. ದೊಡ್ಡದಾದ ಕಾರ್ಖಾನೆಗಳು ಬಂದರೆ ಮಾತ್ರ ಸಣ್ಣ ಕಾರ್ಖಾನೆಗಳು ಬೆಳೆಯಲು ಸಾಧ್ಯ. ಹೀಗಾಗಿ ನೂರು ಎಕರೆ ಖಾಲಿ ಜಾಗವನ್ನು ಬಳಸಿಕೊಳ್ಳಲು ಬಜೆಟ್​ನಲ್ಲಿ ವಿಶೇಷ ಅನುದಾನ ನೀಡಬೇಕು" ಎಂದು ಒತ್ತಾಯಿಸಿದರು.

"ಕೈಗಾರಿಕಾ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ, ಸೋಲಾರ ಇನ್ಸಾಸ್ಟಾಲೆಷನ್​ಗೆ ಸಬ್ಸಿಡಿ ನೀಡಲು ಮುಂದಾಗಬೇಕು. ಇದು ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಲಿದೆ. ಪ್ರಸಕ್ತ ಬಜೆಟ್​ನಲ್ಲಿ ಮೂಲಸೌಕರ್ಯ, ಕೈಗಾರಿಕೆಗಳು, ಕೃಷಿ, ನೀರಾವರಿ ಸೇರಿದಂತೆ ಅನೇಕ ವಲಯಗಳಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳ ಜೊತೆಗೆ ಹಲವಾರು ರೈಲ್ವೆ ಯೋಜನೆಗಳಿಗೂ ಬೇಡಿಕೆಯನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹೊಂದಿದೆ" ಎಂದು ರವೀಂದ್ರ ಎಸ್​​.ಬಳಿಗೇರ ಹೇಳಿದರು.

ಇದನ್ನೂ ಓದಿ: ಕೇಂದ್ರ ಬಜೆಟ್​​ನತ್ತ ರಾಜ್ಯ ಸರ್ಕಾರದ ಚಿತ್ತ: ಬೆಂಗಳೂರು ಅಭಿವೃದ್ಧಿ ಸೇರಿ ಯಾವೆಲ್ಲಾ ಪ್ರಮುಖ ಯೋಜನೆಗಳಿಗೆ ಅನುದಾನದ ಬೇಡಿಕೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.