ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕೆೆ ಹೊಸ ಯೋಜನೆ ಹಾಕಿಕೊಂಡಿದ್ದು, ತೆರಿಗೆ ಪಾವತಿಯಲ್ಲಿ ರಿಯಾಯಿತಿ ನೀಡುವ ಮೂಲಕ ಅರ್ಧದಷ್ಟನ್ನಾದರೂ ಸಂಗ್ರಹಿಸಲು ಮುಂದಾಗಿದೆ. ನಗರದ ಹಲವು ಭಾಗಗಳಲ್ಲಿ ಕಟ್ಟಡ ಮಾಲೀಕರು ತೆರಿಗೆ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದು, ಶೇ.50ರಷ್ಟು ತೆರಿಗೆ ಪಾವತಿ ಮಾಡಿದರೆ ಸಾಕು ಎಂದು ರಿಯಾಯಿತಿ ನೀಡುವ ಮೂಲಕ ಅರ್ಧದಷ್ಟಾದರೂ ತೆರಿಗೆ ಸಂಗ್ರಹಿಸುವ ಮೂಲಕ ಆಸ್ತಿ ತೆರಿಗೆ ಸಂಗ್ರಹದ ಗುರಿ ತಲುಪಲು ಪಾಲಿಕೆ ಯೋಜನೆ ಹಾಕಿಕೊಂಡಿದೆ. ಈ ಆರ್ಥಿಕ ವರ್ಷ ಮುಗಿಯುವುದರೊಳಗೆ ಆದಾಯದ ಗುರಿ ತಲುಪಲು ಸಿದ್ಧತೆ ನಡೆಸಿದ್ದು, ಬಾಕಿ ಉಳಿದಿರುವ ತೆರಿಗೆಯಲ್ಲಿ ಅರ್ಧದಷ್ಟು ಪಾವತಿಸಲು ಅಪೀಲು ಮಾಡಿದವರಿಗೆ ಈ ವಿನಾಯಿತಿ ದೊರೆಯಲಿದೆ.
ವಿನಾಯಿತಿ ಕೊಟ್ಟು ಅರ್ಧದಷ್ಟಾದರೂ ತೆರಿಗೆ ಸಂಗ್ರಹಕ್ಕೆೆ ಪಾಲಿಕೆ ಪ್ಲಾನ್: ಈ ಹಿಂದೆ ತೆರಿಗೆ ರಿಯಾಯಿತಿ ಬಗ್ಗೆೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸುಳಿವು ನೀಡಿದ್ದರು. ಸದ್ಯ ರಿಯಾಯಿತಿಯ ಬಗ್ಗೆ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಮತ್ತೊಂದು ಮಾರ್ಗದಲ್ಲಿ ತೆರಿಗೆ ವಸೂಲಿಗೆ ಪಾಲಿಕೆ ಸಿದ್ಧತೆ ನಡೆಸಿದೆ. ರಿಯಾಯಿತಿ ಮೂಲಕ ವಿನಾಯಿತಿ ಕೊಟ್ಟು ಅರ್ಧದಷ್ಟಾದರೂ ತೆರಿಗೆ ಸಂಗ್ರಹಕ್ಕೆೆ ಪಾಲಿಕೆ ಮುಂದಾಗಿದೆ.
ಮುಖ್ಯ ಆಯುಕ್ತ ತುಷಾರ್‌ಗಿರಿನಾಥ್ ಮಾಹಿತಿ: ಮುಖ್ಯ ಆಯುಕ್ತ ತುಷಾರ್‌ಗಿರಿನಾಥ್ ಈ ಕುರಿತು ಮಾತನಾಡಿ, ''ಪಾಲಿಕೆ ರಿಯಾಯಿತಿ ನೀಡುವ ಮೂಲಕ ಬಾಕಿ ಉಳಿದಿರುವ ತೆರಿಗೆಯಲ್ಲಿ ಅರ್ಧದಷ್ಟನ್ನಾದರೂ ಸಂಗ್ರಹ ಮಾಡಲು ಮುಂದಾಗಿದ್ದೇವೆ. ಈ ಕುರಿತಂತೆ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಲಾಗುತ್ತದೆ. ಉಳಿದವರು ಈ ಹಿಂದಿನಂತೆ ಪೂರ್ಣ ತೆರಿಗೆ ಪಾವತಿ ಮಾಡಬೇಕಾಗುತ್ತದೆ'' ಎಂದು ತಿಳಿಸಿದ್ದಾರೆ.
ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ: ಸ್ಥಳೀಯ ಪಾಲಿಕೆ ಕಂದಾಯ ಕಚೇರಿಯಲ್ಲಿ ಅರ್ಧ ತೆರಿಗೆ ಕಟ್ಟಿ, ಉಳಿದ ಅರ್ಧ ತೆರಿಗೆ ಮನ್ನಾ ಮಾಡುವಂತೆ ಮನವಿ ಸಲ್ಲಿಸಬೇಕು. ನೋಟಿಸ್ ಪಡೆದ ತೆರಿಗೆದಾರರು ಅರ್ಧದಷ್ಟು ತೆರಿಗೆ ಪಾವತಿಸಿ ನಂತರ ಪಾಲಿಕೆಗೆ ಅಪೀಲು ಸಲ್ಲಿಸಬೇಕು. ಸರಕಾರ ಆಸ್ತಿ ತೆರಿಗೆ ಸಂಗ್ರಹದಲ್ಲಿ ತಿದ್ದುಪಡಿ ಮಾಡಿದರೆ ಅರ್ಧದಷ್ಟು ತೆರಿಗೆ ವಿನಾಯಿತಿಯಾಗುವ ಸಾಧ್ಯತೆ ಇದೆ. ಸದ್ಯ ಬಾಕಿಯಿರುವ ತೆರಿಗೆಯಲ್ಲಿ ಅರ್ಧದಷ್ಟು ತೆರಿಗೆ ಪಾವತಿ ಮಾಡಿ ಅಪೀಲು ಸಲ್ಲಿಸಿದವರಿಗೆ ಮಾತ್ರ ತೆರಿಗೆ ರಿಯಾಯಿತಿ ನೀಡಲಾಗುತ್ತದೆ'' ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶನ