ETV Bharat / state

ಔಷಧಗಳ ಮಾದರಿಗಳ ಪರೀಕ್ಷಾ ವರದಿ 60 ದಿನಗಳಲ್ಲಿ ಲಭ್ಯವಾಗಬೇಕು: ಡಿಸಿಜಿಐಗೆ ಹೈಕೋರ್ಟ್ ನಿರ್ದೇಶನ - High Court On Medicines Test - HIGH COURT ON MEDICINES TEST

ಔಷಧಿಗಳ ಮಾದರಿಗಳ ಪರೀಕ್ಷೆ ಸಂಬಂಧ ತುರ್ತಾಗಿ ವರದಿಯು ಆನ್​ಲೈನ್​ನಲ್ಲಿ ಲಭ್ಯವಾಗಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಡ್ರಗ್ ಕಂಟ್ರೋಲರ್ ಆಫ್ ಜನರಲ್ ಇಂಡಿಯಾಗೆ ಹೈಕೋರ್ಟ್ ಸೂಚಿಸಿದೆ. ಪ್ರಕರಣವೊಂದರ ಸಂಬಂಧ ಮೆಸ್ ಜಿಮ್ ಲ್ಯಾಬೊರೇಟರೀಸ್ ಲಿಮಿಟೆಡ್ ಮತ್ತು ಅದರ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಮತ್ತಿತರರು ಅರ್ಜಿ ಸಲ್ಲಿಸಿದ್ದರು.

high court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Sep 6, 2024, 8:14 PM IST

ಬೆಂಗಳೂರು: ಔಷಧಿಗಳ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಿದ 60 ದಿನಗಳಲ್ಲಿ ಅದರ ಪರೀಕ್ಷೆ ಮತ್ತು ವಿಶ್ಲೇಷಣಾ ವರದಿ ಆನ್​ಲೈನ್​ನಲ್ಲಿ ಲಭ್ಯವಾಗುವಂತೆ ಮಾಡುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಸಂಬಂಧ ಕ್ರಮ ಕೈಗೊಳ್ಳುವಂತೆ ಡ್ರಗ್ ಕಂಟ್ರೋಲರ್ ಆಫ್ ಜನರಲ್ (ಡಿಸಿಜಿ) ಇಂಡಿಯಾಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಅಲ್ಲದೆ, ಮಾದರಿಗಳ ಪರೀಕ್ಷೆಯ ಎಲ್ಲ ಪ್ರಕ್ರಿಯೆ ಆನ್​ಲೈನ್​ನಲ್ಲಿ ಲಭ್ಯವಾಗುವಂತೆ ಮಾಡಬೇಕಾಗಿದೆ. ಇದರಿಂದ ಪರೀಕ್ಷೆ ಫಲಿತಾಂಶ ಮತ್ತು ಪ್ರಕ್ರಿಯೆಯ ಕುರಿತ ಪಾರದರ್ಶಕತೆ ಕಾಯ್ದಿಟ್ಟುಕೊಳ್ಳುವುದು ಮತ್ತು ಈ ಕುರಿತ ವಿವರಣೆ ಸಂಬಂಧಪಟ್ಟ ಎಲ್ಲ ಪಾಲುದಾರರಿಗೂ ಲಭ್ಯವಾಗಲಿದೆ ಎಂದು ಪೀಠ ತಿಳಿಸಿದೆ.

ನಿಯಮಗಳ 45ರ ಅನುಸಾರ ಪರೀಕ್ಷೆಗಾಗಿ ಸರ್ಕಾರದ ಪ್ರಯೋಗಾಲಯಕ್ಕೆ ರವಾನಿಸಿದ ಬಳಿಕ 60 ದಿನಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ, ಒಂದು ಪರೀಕ್ಷೆ ನಡೆಸುವುದಕ್ಕಾಗಿ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ತೆಗೆದುಕೊಂಡರೆ ಅದರಿಂದ ಔಷಧಗಳು ಮಾರುಕಟ್ಟೆಗೆ ಚಲಾವಣೆಗೆ ಬರುವ ಸಾಧ್ಯತೆಯಿದ್ದು, ಅದರ ದುಷ್ಪರಿಣಾಮ ಸಾಮಾನ್ಯ ಜನರ ಮೇಲೆ ಬೀಳಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಮೆಸ್ ಜಿಮ್ ಲ್ಯಾಬೊರೇಟರೀಸ್ ಲಿಮಿಟೆಡ್ ಮತ್ತು ಅದರ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.

ಔಷಧ ತಯಾರಿಸಿದ ಸ್ಥಳ, ಔಷಧ ಮಾದರಿ ಪರೀಕ್ಷೆ, ವಿಶ್ಲೇಷಣೆಗಾಗಿ ಸರ್ಕಾರಿ ವಿಶ್ಲೇಷಗೆ ಕಳುಹಿಸಿರುವುದು ಗೊತ್ತಾಗಲಿದೆ. ವರದಿ ಸ್ವೀಕರಿಸಿದ ನಂತರ ಕಾಯ್ದೆಯ ಸೆಕ್ಷನ್ 18ಎ ಅಡಿ ವಿವರಗಳನ್ನು ಒದಗಿಸಲಾದ ಔಷಧದ ತಯಾರಕರಿಗೆ ತಕ್ಷಣ ರವಾನಿಸಬೇಕು. ಹೀಗಾಗಿ, ಪರೀಕ್ಷಾ ವರದಿಯ ಪ್ರತಿಯನ್ನು ಒದಗಿಸುವವರೆಗೂ ತನಿಖಾಧಿಕಾರಿ ಅಂತಹ ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಅಲ್ಲದೇ, ಅರ್ಜಿದಾರರು ಔಷಧದ ತಯಾರಿಕೆಗೆ ಮತ್ತು ಅವರು ಹೊಂದಿದ್ದ ಹುದ್ದೆಗೆ ಜವಾಬ್ದಾರರಾಗಿರುವುದಿಲ್ಲ ಮತ್ತು ಅವರ ನಡವಳಿಕೆಗೆ ಅವರು ಸ್ವತಃ ಜವಾಬ್ದಾರರು ಎಂದು ಭಾವಿಸಲಾಗುವುದಿಲ್ಲ. ಔಷಧದ ಉತ್ಪಾದನೆಯ ವಿಷಯದಲ್ಲಿ ಕಂಪನಿಯ ವ್ಯವಹಾರವಾಗಿದೆ. ಹೀಗಾಗಿ, ಅರ್ಜಿದಾರರ ವಿರುದ್ಧ ಕ್ರಮ ಮುಂದುವರೆಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಕರ್ನಾಟಕ ವಿಭಾಗದ ಔಷಧ ಗುಣಮಟ್ಟ ನಿಯಂತ್ರಣಾ ಇಲಾಖೆ ಇನ್ಸ್​ಪೆಕ್ಟರ್ ಅವರು 2013ರ ಫೆಬ್ರವರಿ 28ರಂದು ಮಂಗಳೂರಿನ ಇಎಸ್​ಐ ಆಸ್ಪತ್ರೆಯಿಂದ ಒಂದು ಔಷಧದ ಮಾದರಿ ಮತ್ತು 2014ರ ಜೂನ್​ 12ರಂದು ಬೆಂಗಳೂರಿನ ರಾಜಾಜಿನಗರದ ಇಎಸ್​ಐ ಆಸ್ಪತ್ರೆಯಲ್ಲಿ ಮತ್ತೊಂದು ಮಾದರಿ ಸಂಗ್ರಹಿಸಿದ್ದರು. ಈ ಔಷಧ ತಯಾರಿಸಿರುವುದು 2012ರಲ್ಲಿ ಮತ್ತು ಅದರ ಕಾಲಾವಧಿ 2015 ಆಗಿತ್ತು. ಇದರಲ್ಲಿ ಒಂದು ಭಾಗವನ್ನು ಇಎಸ್​ಐ ಆಸ್ಪತ್ರೆಗೆ ಮತ್ತೊಂದು ಭಾಗವನ್ನು ಕೊಲ್ಕತ್ತದಲ್ಲಿರುವ ಸರ್ಕಾರಿ ಪ್ರಯೋಗಾಲಯಕ್ಕೆ 2013ರ ಮಾರ್ಚ್ 4ರಂದು ರವಾನಿಸಲಾಗಿತ್ತು.

ಈ ಔಷದವನ್ನು ಸುಮಾರು 20 ತಿಂಗಳ ಬಳಿಕ ಪರೀಕ್ಷೆಗೊಳಪಡಿಸಲಾಗಿತ್ತು. ಬಳಿಕ 6 ತಿಂಗಳ ನಂತರ ಈ ಔಷಧದ ಪರೀಕ್ಷಾ ವರದಿಯನ್ನು ಸಲ್ಲಿಸಿ ಔಷಧವು ಪ್ರಾಮಾಣಿತ ಗುಣಮಟ್ಟ ಹೊಂದಿಲ್ಲ ಎಂಬುದಾಗಿ ತಿಳಿಸಲಾಗಿತ್ತು.

ಈ ಅಂಶದ ಆಧಾರರಲ್ಲಿ ಮಂಗಳೂರು ಇಎಸ್​ಐ ಆಸ್ಪತ್ರೆಯ ಔಷಧ ಖರೀದಿ ವಿಭಾಗಕ್ಕೆ ಸೂಚಿಸಿ ಯಾವ ಕಂಪನಿಯಿಂದ ಈ ಔಷಧ ಪಡೆದುಕೊಳ್ಳಲಾಗಿದೆ ಎಂಬ ವಿವರವನ್ನು ಕೋರಿದ್ದರು. ಅದರಂತೆ ಅರ್ಜಿದಾರರ ಮೆಸ್ ಜಿಮ್ ಲ್ಯಾಬೊರೇಟರೀಸ್ ಲಿಮಿಟೆಡ್ ಎಂಬ ಅಂಶ ಗೊತ್ತಾಗಿತ್ತು. ಈ ಸಂಬಂಧ ಮುಂಬೈನ ಡ್ರಗ್​ ಕಂಟ್ರೋಲ್​ ವಿಭಾಗಕ್ಕೆ ಪತ್ರ ಬರೆದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೋರಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ತಾ.ಪಂ, ಜಿ.ಪಂ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಗೆ ಮತ್ತೆ ಕಾಲಾವಕಾಶ ಕೋರಿದ ಸರ್ಕಾರ - Panchayat Reservation

ETV Bharat Logo

Copyright © 2025 Ushodaya Enterprises Pvt. Ltd., All Rights Reserved.