ರಾಯಚೂರು: ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಪಟ್ಟ ಮಾಡಿದ ಆರೋಪದಡಿ ತಹಶೀಲ್ದಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕನನ್ನು ಲಿಂಗಸೂಗೂರು ಸಹಾಯಕ ಆಯುಕ್ತ ಅಮಾನತುಗೊಳಿಸಿ ಆದೇಶಿಸಿದ್ದಾರೆ. ತಹಶೀಲ್ದಾರ್ ಅರಮನೆ ಸುಧಾ ಹಾಗೂ ದ್ವಿತೀಯ ದರ್ಜೆ ಸಹಾಯಕ ಅರುಣಕುಮಾರ ಅಮಾನತಾದವರು.
ಮಸ್ಕಿ ತಾಲೂಕಿನ ಬಗ್ಗಲಗುಡ್ಡದ ಗ್ರಾಮದ ಅರಣ್ಯ ಇಲಾಖೆಗೆ ಸೇರಿದ 16 ಎಕರೆ ಭೂಮಿಯನ್ನು 8 ಜನ ಖಾಸಗಿಯವರಿಗೆ ಪಟ್ಟ ಮಾಡಿದ ಆರೋಪದ ಮೇಲೆ ಸಹಾಯ ಆಯುಕ್ತ ಅವಿನಾಶ ಶಿಂಧೆ ಶನಿವಾರ ಕ್ರಮ ಜರುಗಿಸಿದ್ದಾರೆ.
ಬಗ್ಗಲಗುಡ್ಡದ ಗ್ರಾಮದ ಅರಣ್ಯ ಇಲಾಖೆಯ ಸರ್ವೇ ನಂಬರ್ 28ರ 16 ಎಕರೆ ಭೂಮಿಯನ್ನು ಖಾಸಗಿಯವರಿಗೆ ಪಟ್ಟ ಮಾಡಿರುವ ಕುರಿತು ಲಿಂಗಸೂಗೂರು ವಲಯ ಅರಣ್ಯಾಧಿಕಾರಿ ವಿದ್ಯಾಶ್ರೀ ದೊಡ್ಡಮನಿ ಅವರು ಲಿಂಗಸೂಗೂರಿನ ಸಹಾಯಕ ಆಯುಕ್ತರ ಕಚೇರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸಹಾಯಕ ಆಯುಕ್ತ ಅವಿನಾಶ ಶಿಂಧೆ, ತಹಸೀಲ್ದಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಕರ್ತವ್ಯ ಲೋಪವೆಸಗಿಸುವ ಮೂಲಕ ಅರಣ್ಯ ಸಂರಕ್ಷಿತ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪಟ್ಟಮಾಡಿರುವುದನ್ನು ಪತ್ತೆ ಹಚ್ಚಿದ್ದರು.
ಇದನ್ನೂ ಓದಿ: ರಾಮನಗರ: ಹಲ್ಲೆ ನಡೆಸಿ ಪರಾರಿ ಯತ್ನ; ರೌಡಿಶೀಟರ್ಗಳಿಗೆ ಪೊಲೀಸ್ ಗುಂಡೇಟು - Police Firing