ETV Bharat / state

ಮೇ 31 ರಿಂದ ಜೂನ್ 2ರ ವರೆಗೆ ಮಂಗಳೂರಿನ ಸಸಿಹಿತ್ಲು ಬೀಚ್​ನಲ್ಲಿ ಸರ್ಫಿಂಗ್ ಸ್ಪರ್ಧೆ - Surfing Competition - SURFING COMPETITION

ಮೇ 31 ರಿಂದ ಜೂನ್​ 2 ವರೆಗೆ ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ಓಪನ್​ ಆಫ್​ ಸರ್ಫಿಂಗ್‌ನ 5 ನೇ ಆವೃತ್ತಿ ನಡೆಯಲಿದೆ ಎಂದು ಸರ್ಫಿಂಗ್​ ಫೆಡರೇಶನ್​ ಆಫ್​ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಗ್ರಹ
ಸಂಗ್ರಹ (ETV Bharat)
author img

By ETV Bharat Karnataka Team

Published : May 21, 2024, 8:52 AM IST

Updated : May 21, 2024, 9:04 AM IST

ಮಂಗಳೂರು: ಸರ್ಫಿಂಗ್​ ಫೆಡರೇಶನ್​ ಆಫ್​ ಇಂಡಿಯಾವು 'ಇಂಡಿಯನ್​ ಓಪನ್​ ಆಫ್​ ಸರ್ಫಿಂಗ್‌'ನ 5 ನೇ ಆವೃತ್ತಿಯನ್ನು ಪ್ರಕಟಿಸಿದ್ದು, ಮೇ 31 ರಿಂದ ಜೂನ್ 2ರ ವರೆಗೆ ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ಆಯೋಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂಡಿಯನ್​ ಓಪನ್​​ ಆಫ್​ ಸರ್ಫಿಂಗ್​ 2024ರ ರಾಷ್ಟ್ರೀಯ ಸರ್ಫಿಂಗ್​ ಮತ್ತು ಸ್ಟ್ಯಾಂಡ್-ಅಪ್​​ ಪೆಡ್ಲಿಂಗ್​ ಕ್ರೀಡೆಗಳ ಆಡಳಿತ ಮಂಡಳಿಯಾದ ಸರ್ಫಿಂಗ್​ ಫೆಡರೇಶನ್​ ಆಫ್​ ಇಂಡಿಯಾ (ಎಸ್‌ಎಫ್‌ಐ) ಇಂಡಿಯನ್ ಓಪನ್ ಸರ್ಫಿಂಗ್ (ಐಒಎಸ್) ಐದನೇ ಆವೃತ್ತಿಯನ್ನು ಪ್ರಕಟಿಸಿದೆ. ಇಂಟರ್‌ನ್ಯಾಶನಲ್ ಸರ್ಫಿಂಗ್ ಅಸೋಸಿಯೇಷನ್‌ನಿಂದ ಮಾನ್ಯತೆ ಪಡೆದಿರುವ ಈ ಪ್ರೀಮಿಯರ್ ಸರ್ಫಿಂಗ್ ಸ್ಪರ್ಧೆಯನ್ನು ಮಂತ್ರ ಸರ್ಫ್ ಕ್ಲಬ್ ಕರ್ನಾಟಕದ ಮಂಗಳೂರಿನ ಸಸಿಹಿತ್ಲು ಬೀಚ್‌ನಲ್ಲಿ ಆಯೋಜಿಸುತ್ತದೆ. ಭಾರತದಲ್ಲಿ ಅಗ್ರ ಶ್ರೇಯಾಂಕದ ಸರ್ಫರ್‌ಗಳು ಈ ಸ್ಪರ್ಧೆಯಲ್ಲಿ‌‌ ಭಾಗವಹಿಸಲಿದ್ದಾರೆ.

ಸ್ಪರ್ಧೆಯು ನಾಲ್ಕು ವಿಭಾಗಗಳನ್ನು ಒಳಗೊಂಡಿರುತ್ತದೆ. ಪುರುಷರ ಓಪನ್, ಮಹಿಳಾ ಓಪನ್, 16 ವಯಸ್ಸಿನೊಳಗಿನ ಹುಡುಗರು ಮತ್ತು 16 ವಯಸ್ಸಿನೊಳಗಿನ ಹುಡುಗಿಯರು ವಿಭಾಗ ಹೊಂದಿದೆ.

“ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ ಇಂಡಿಯನ್ ಓಪನ್ ಆಫ್ ಸರ್ಫಿಂಗ್​-ಸರ್ಫಿಂಗ್ ಸ್ವಾಮಿ ಫೌಂಡೇಶನ್​ ಮತ್ತು ಮಂತ್ರ ಸರ್ಫ್​​ ಕ್ಲಬ್‌ನ ಸಂಘಟಕರಿಗೆ ನಮ್ಮ ಬೆಂಬಲವನ್ನು ನೀಡಲು ನಾವು ಸಂತೋಷಪಡುತ್ತೇವೆ. ಅವರು ನಮ್ಮ ರಾಜ್ಯದ ಕರಾವಳಿಯನ್ನು ಉತ್ತೇಜಿಸುವ ಮತ್ತು ನಮ್ಮ ಪ್ರವಾಸೋದ್ಯಮ ಆರ್ಥಿಕತೆಯನ್ನು ಹೆಚ್ಚಿಸುವ ಅಸಾಧಾರಣ ಕೆಲಸವನ್ನು ಮಾಡುತ್ತಿದ್ದಾರೆ. ರಾಜ್ಯದ ಇಂತಹ ಸುಂದರ ಮತ್ತು ಪ್ರಶಾಂತ ಜಾಗದಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸುವುದರಿಂದ ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ”ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಫಿಂಗ್​ ಫೆಡರೇಶನ್​ ಆಫ್​ ಇಂಡಿಯಾದ ಅಧ್ಯಕ್ಷ ಅರುಣ್​ ವಾಸು ಅವರು ಪ್ರಕಟಣೆಯಲ್ಲಿ, “ನಾವು ಭಾರತವನ್ನು ಸರ್ಫಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಿಸಲು ಬಯಸುತ್ತೇವೆ. ಕೇರಳದಲ್ಲಿ ರಾಷ್ಟ್ರೀಯ ಸರಣಿಯನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ, ಚಾಂಪಿಯನ್‌ಶಿಪ್ ಪ್ರವಾಸವು ಪೂರ್ವ ಕರಾವಳಿಗೆ ತೆರಳುವ ಮೊದಲು ಮಂಗಳೂರಿನಲ್ಲಿ ಚಾಂಪಿಯನ್‌ ಶಿಪ್‌ಗಳನ್ನು ನಡೆಸಲು ನಮಗೆ ಸಂತೋಷವಾಗಿದೆ" ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಕೇರಳದಲ್ಲಿ ನಡೆದ ಕೊನೆಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ರಮೇಶ್ ಬೂದಿಹಾಳ್​, ಹರೀಶ್ ಎಂ, ಶ್ರೀಕಾಂತ್ ಡಿ, ಮತ್ತು ಮಣಿಕಂದನ್ ಎಂ, ಮಹಿಳಾ ವಿಭಾಗದಲ್ಲಿ ಕಮಲಿ ಮೂರ್ತಿ, ಸೃಷ್ಠಿ ಸೆಲ್ವಂ ಮತ್ತು ಸಂಧ್ಯಾ ಅರುಣ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ನಾಳೆ ಪ್ರಕಟ: ರಿಸಲ್ಟ್​ಗಾಗಿ ಈ ಲಿಂಕ್ ಕ್ಲಿಕ್ ಮಾಡಿ - Second PUC Exam result

Last Updated : May 21, 2024, 9:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.