ETV Bharat / state

ಗದಗ-ಬೆಂಗಳೂರು ವೋಲ್ವೊ ಬಸ್ ಸೇವೆ ಪುನಾರಂಭಗೊಳಿಸಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಮನವಿ - Sunil Joshi Appeal

ರದ್ದುಗೊಳಿಸಲಾಗಿರುವ ಗದಗ-ಬೆಂಗಳೂರು ವೋಲ್ವೊ ಬಸ್ ಸೇವೆಯನ್ನು ಪುನಾರಂಭಗೊಳಿಸುವಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಮನವಿ ಮಾಡಿದ್ದಾರೆ.

SUNIL JOSHI APPEAL
ಸುನೀಲ್ ಜೋಶಿ (ETV Bharat)
author img

By ETV Bharat Karnataka Team

Published : Aug 20, 2024, 9:07 PM IST

ಗದಗ: ಗದಗ-ಬೆಂಗಳೂರು ವೋಲ್ವೋ ಬಸ್ ಸೇವೆ ಪುನಾರಂಭಗೊಳಿಸುವಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್​ ಮಾಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್​ ಅವರಿಗೆ ಮನವಿ ಮಾಡಿದ್ದಾರೆ.

ನಿರೀಕ್ಷೆಯಿಲ್ಲದೆ ಬೆಂಗಳೂರಿನಿಂದ ಗದಗಕ್ಕೆ ಸಂಚರಿಸುವ ವೋಲ್ವೋ ಬಸ್ ಸೇವೆ ರದ್ದುಗೊಳಿಸಲಾಗಿದೆ. ಇದಕ್ಕೆ ಯಾವುದೇ ವಿವರ ನೀಡಿಲ್ಲ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ವಿಷಯದಲ್ಲಿ ತಕ್ಷಣವೇ ಚರ್ಚಿಸಬೇಕೆಂದು ವಿನಂತಿಸುತ್ತೇನೆ. ನಿಮ್ಮ ಸಹಕಾರ ತುಂಬಾ ಮೆಚ್ಚುಗೆಯಾಗುತ್ತದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ್​ ಅವರು ದಯವಿಟ್ಟು ಈ ಬಸ್ ಅನ್ನು ಮತ್ತೆ ಶುರುಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸುನೀಲ್ ಜೋಶಿ ಈ ಹಿಂದೆಯೂ ಟ್ವೀಟ್ ಮೂಲಕ ವೋಲ್ವೋ ಬಸ್​ ಸೇವೆಗೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ್ದ ಆಗಿನ ಸಾರಿಗೆ ಸಚಿವ ಬಿ.ಶ್ರೀರಾಮುಲು ಬಸ್ ಸೇವೆ ಕಲ್ಪಿಸಿದ್ದರು. ಆದರೆ, ಕೆಲ ತಿಂಗಳ ನಂತರ ಸ್ಥಗಿತಗೊಂಡಿದೆ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ನಗರಕ್ಕೆ ಅತ್ಯಾಧುನಿಕ ಬಸ್​ಗಳ​ ವ್ಯವಸ್ಥೆ: ಪ್ರಾಯೋಗಿಕವಾಗಿ 10 ಬಸ್‌ಗಳ ಸಂಚಾರ ಆರಂಭ - advanced bus to twin cities

ETV Bharat Logo

Copyright © 2024 Ushodaya Enterprises Pvt. Ltd., All Rights Reserved.