ETV Bharat / state

ವರ್ಗಾವಣೆಗೊಂಡ ಶಿಕ್ಷಕಿಯ ಮೆರವಣಿಗೆ; ಶಾಲಾ ಮಕ್ಕಳಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ - Farewell To Teacher

author img

By ETV Bharat Karnataka Team

Published : Aug 16, 2024, 1:33 PM IST

Updated : Aug 16, 2024, 3:11 PM IST

30 ವರ್ಷದಿಂದ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಬೇರೆ ಶಾಲೆಗೆ ವರ್ಗಾವಣೆಯಾದ ಹಿನ್ನೆಲೆ ಅಲ್ಲಿನ ಮಕ್ಕಳು ಕಣ್ಣೀರಿಡುತ್ತಾ ಮೆರವಣಿಗೆ ಮಾಡಿ ಬೀಳ್ಕೊಟ್ಟಿದ್ದಾರೆ.

ವರ್ಗಾವಣೆಗೊಂಡ ಶಿಕ್ಷಕಿಗೆ ಕಣ್ಣೀರಿನಿಂದ ಬೀಳ್ಕೊಟ್ಟ ವಿದ್ಯಾರ್ಥಿನಿಯರು
ವರ್ಗಾವಣೆಗೊಂಡ ಶಿಕ್ಷಕಿಗೆ ಕಣ್ಣೀರಿನಿಂದ ಬೀಳ್ಕೊಟ್ಟ ವಿದ್ಯಾರ್ಥಿನಿಯರು (ETV Bharat)

ಧಾರವಾಡ: ವರ್ಗಾವಣೆಗೊಂಡ ಶಿಕ್ಷಕಿಗೆ ವಿದ್ಯಾರ್ಥಿನಿಯರು ಕಣ್ಣೀರಿನಿಂದ ಬೀಳ್ಕೊಟ್ಟು, ಬಿಟ್ಟು ಹೋಗಬೇಡಿ ಎಂದು ಗಳಗಳನೆ ಅತ್ತಿರುವ ಘಟನೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ‌ ನಡೆದಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೀತಾ ಸುರೇಶ್​ ಬೆಟಗೇರಿ 30 ವರ್ಷದಿಂದ ಮುಮ್ಮಿಗಟ್ಟಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮುಮ್ಮಿಗಟ್ಟಿಯಿಂದ ಈಗ ಧಾರವಾಡದ ಗಾಂಧಿನಗರ ಬಡಾವಣೆಯ ಶಾಲೆಗೆ ವರ್ಗಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕಿ ಬೀಳ್ಕೊಡುಗೆಯಲ್ಲಿ ಮಕ್ಕಳು ಭಾವುಕರಾದರು.

ಶಿಕ್ಷಕಿ ಗೀತಾ ಅವರು ಶಾಲೆ ಮತ್ತು ಮಕ್ಕಳ ಸುಧಾರಣೆಗೆ ಸಾಕಷ್ಟು ಕೊಡುಗೆ ನೀಡಿದ್ದರು. ಗ್ರಾಮಸ್ಥರ ಮತ್ತು ಮಕ್ಕಳ ಮೆಚ್ಚಿನ ಶಿಕ್ಷಕಿಯಾಗಿದ್ದರು. ಹೀಗಾಗಿ, ಅವರನ್ನು ಬಿಟ್ಟುಕೊಡಲಾಗದೇ, ತಬ್ಬಿಕೊಂಡು ಬಿಟ್ಟು ಹೋಗಬೇಡಿ ಎಂದು ವಿದ್ಯಾರ್ಥಿನಿಯರು ಅಂಗಲಾಚಿದ್ದಾರೆ. ಮಕ್ಕಳ ಕಣ್ಣೀರು ನೋಡಿ ಶಿಕ್ಷಕಿ ಗೀತಾ ಕೂಡ ಭಾವುಕಗೊಂಡರು. ಗ್ರಾಮದಲ್ಲಿ ಶಿಕ್ಷಕಿಯನ್ನು ಸಾರೋಟದ ಮೇಲೆ ಅದ್ಧೂರಿ ಮೆರವಣಿಗೆ ಮಾಡಿ, ಬೀಳ್ಕೊಡುಗೆ ನೀಡಲಾಗಿದೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದು 2 ಲಕ್ಷ ಜನರಿಂದ ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ ವೀಕ್ಷಣೆ - Lalbagh Flower Show

Last Updated : Aug 16, 2024, 3:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.