ETV Bharat / state

ಯುವನಿಧಿ ಫಲಾನುಭವಿಗಳ ಉದ್ಯೋಗ ಸ್ಥಿತಿಯ ದತ್ತಾಂಶ ಹಂಚಲು EPFO ನಿರಾಕರಣೆ: ರಾಜ್ಯ ಸರ್ಕಾರಕ್ಕೆ ತಲೆನೋವು - YUVANIDHI EMPLOYMENT STATUS

ನೌಕರರ ಭವಿಷ್ಯ ನಿಧಿ ಸಂಸ್ಥೆಯು ದತ್ತಾಂಶ ಹಂಚಲು ನಿರಾಕರಿಸುತ್ತಿರುವುದರಿಂದ ಯುವನಿಧಿ ಫಲಾನುಭವಿಗಳ ಉದ್ಯೋಗ ಸ್ಥಿತಿಯ ನಿಖರ ಪರಿಶೀಲನೆ ಕಷ್ಟ ಆಗುತ್ತಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ವೆಂಕಟ್​ ಪೊಳಲಿ ಅವರ ವರದಿ.

YUVANIDHI EMPLOYMENT STATUS
ವಿಧಾನಸೌಧ (ETV Bharat)
author img

By ETV Bharat Karnataka Team

Published : Dec 7, 2024, 7:23 PM IST

ಬೆಂಗಳೂರು: ನಿರುದ್ಯೋಗ ದಿಂದ ಬಳಲುತ್ತಿರುವ ರಾಜ್ಯದ ಯುವ ಜನಾಂಗಕ್ಕೆ ಪರಿಹಾರ ನೀಡುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಯುವನಿಧಿ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದೆ. ಪದವೀಧರ ಹಾಗೂ ಡಿಪ್ಲೋಮಾ ಪಡೆದ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಇದಾಗಿದೆ. ಆದರೆ, ಯುವನಿಧಿ ಫಲಾನುಭವಿಗಳ ಉದ್ಯೋಗ ಸ್ಥಿತಿಯ ಅಧಿಕೃತ ಮಾಹಿತಿ ಸಂಗ್ರಹಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದೆ ಪರದಾಡುವಂತಾಗಿದೆ.

ಯುವನಿಧಿ ಕಾಂಗ್ರೆಸ್ ಸರ್ಕಾರದ ಐದನೇ ಹಾಗೂ ಕೊನೆಯ ಗ್ಯಾರಂಟಿ. 2023, ಡಿ.26ರಂದು ಸಿಎಂ ಸಿದ್ದರಾಮಯ್ಯ ಯುವನಿಧಿ ಯೋಜನೆ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಈ ಯೋಜನೆಯಡಿ ಪದವಿ, ಡಿಪ್ಲೋಮಾ ಶಿಕ್ಷಣ ಪಡೆದು ಆರು ತಿಂಗಳಾದರೂ ಉದ್ಯೋಗ ದೊರೆಯದಿದ್ದರೆ, ಗರಿಷ್ಠ ಎರಡು ವರ್ಷದವರೆಗೆ ಪದವೀಧರರಿಗೆ 3,000 ರೂ. ಹಾಗೂ ಡಿಪ್ಲೋಮಾ ಪಡೆದವರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡುವುದು. ಅದರಂತೆ ರಾಜ್ಯದಲ್ಲಿ 2022-23ರಲ್ಲಿ ತೇರ್ಗಡೆಯಾದವರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯವಾಗಿದೆ.

ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ್ಯ ಪರಿಶೀಲನೆ ಇರುತ್ತದೆ. ಉದ್ಯೋಗ ಪಡೆದ ನಂತರ ಫಲಾನುಭವಿಗಳು ಆ ಬಗ್ಗೆ ಸ್ವಯಂ ಘೋಷಣೆ ಮಾಡಬೇಕೆಂಬ ಷರತ್ತಿನೊಂದಿಗೆ ಯುವನಿಧಿ ಯೋಜನೆ ಜಾರಿಯಾಗಿದೆ. ಒಂದು ವೇಳೆ ತಪ್ಪು ಘೋಷಣೆ ಅಥವಾ ಉದ್ಯೋಗ ಲಭಿಸಿರುವುದನ್ನು ಘೋಷಿಸಲು ವಿಫಲರಾದರೆ ದಂಡ ವಿಧಿಸುವ ಷರತ್ತನ್ನೂ ಹಾಕಲಾಗಿದೆ. ಆದರೆ, ಯುವನಿಧಿ ಅನುಷ್ಠಾನ ಮಾಡಿ ಒಂದು ವರ್ಷ ಸಮೀಪಿಸುತ್ತಿದ್ದು, ಸರ್ಕಾರಕ್ಕೆ ಇದೀಗ ಹೊಸ ತಲೆನೋವು ಎದುರಾಗಿದೆ.

ಎಷ್ಟು ನಿರುದ್ಯೋಗಿಗಳಿಗೆ ಯುವನಿಧಿ ಭಾಗ್ಯ?: ಕಳೆದ ವರ್ಷ ಡಿಸೆಂಬರ್​​ನಲ್ಲಿ ಆರಂಭವಾದ ಯುವನಿಧಿ ಯೋಜನೆ ಒಂದು ವರ್ಷ ಪೂರೈಸುವ ಸನಿಹದಲ್ಲಿದೆ. ಯೋಜನೆಯಡಿ ಪದವೀಧರರಿಗೆ/ಸ್ನಾತಕೋತ್ತರ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ಮತ್ತು ಡಿಪ್ಲೋಮಾ (6 ಬೋರ್ಡ್​ಗಳಿಂದ) ತೇರ್ಗಡೆಯಾದವರಿಗೆ ಪ್ರತಿ ತಿಂಗಳು 1,500 ರೂ. ನಿರುದ್ಯೋಗ ಭತ್ಯೆಯನ್ನು ಗರಿಷ್ಠ 2 ವರ್ಷದ ಅವಧಿಗೆ ಅಥವಾ ಉದ್ಯೋಗ ಸಿಗುವವರೆಗೆ (ಇವುಗಳಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ) ನೇರ ನಗದು ವರ್ಗಾವಣೆ ಮೂಲಕ (ಡಿಬಿಟಿ) ಪಾವತಿಸಲಾಗುತ್ತಿದೆ.

ಯುವನಿಧಿ ಯೋಜನೆಗಾಗಿ ನವೆಂಬರ್ ಅಂತ್ಯಕ್ಕೆ ಒಟ್ಟು 1,83,710 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅಕ್ಟೋಬರ್ 2024 ಅಂತ್ಯಕ್ಕೆ ಒಟ್ಟು 1,48,231 ಫಲಾನುಭವಿಗಳಿದ್ದು, ನೇರ ನಗದು ವರ್ಗಾವಣೆ ಮೂಲಕ 172.78 ಕೋಟಿ ರೂಪಾಯಿಗಳಷ್ಟು ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಮಾಹಿತಿ ನೀಡಿದೆ.

2023-24 ಸಾಲಿನ ಮೊದಲ ವರ್ಷದ ಯುವನಿಧಿ ಅನುಷ್ಠಾನ ಸಂಬಂಧ 250 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಒಟ್ಟು 89 ಕೋಟಿ ರೂ. ವೆಚ್ಚ ಮಾಡಲಾಗಿತ್ತು. 2024-25 ಸಾಲಿನಲ್ಲಿ ಯುವನಿಧಿಗಾಗಿ ಸರ್ಕಾರ 650 ಕೋಟಿ ರೂ. ಹಂಚಿಕೆ ಮಾಡಿದೆ. ಈ ಪೈಕಿ ನವೆಂಬರ್​ವರೆಗೆ 132 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸದ್ಯ ಯುವನಿಧಿ ಯೋಜನೆಯಡಿ ಸುಮಾರು 1.85 ಲಕ್ಷ ಫಲಾನುಭವಿಗಳಿದ್ದಾರೆ.

ಲಭ್ಯವಾಗದ ನಿಖರ ಉದ್ಯೋಗ ಸ್ಥಿತಿಯ ಮಾಹಿತಿ: ಈ ಯೋಜನೆಯ ಪ್ರಯೋಜನ ಪಡೆಯಲು ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಯೋಜನೆಯ ಅರ್ಹ ಫಲಾನುಭವಿಗಳು ನಿರಂತರವಾಗಿ ಯೋಜನೆಯ ಪ್ರಯೋಜನ ಪಡೆಯಲು ತಮ್ಮ ನಿರುದ್ಯೋಗ ಸ್ಥಿತಿಯ ಬಗ್ಗೆ ಪ್ರತಿ ತಿಂಗಳು 1ರಿಂದ 25ನೇ ದಿನಾಂಕದೊಳಗೆ ಕಡ್ಡಾಯವಾಗಿ ಮಾಸಿಕ ಸ್ವಯಂ ಘೋಷಣೆ ನೀಡಬೇಕಾಗಿರುತ್ತದೆ. ರಾಜ್ಯ ಸರ್ಕಾರಕ್ಕೆ ಇದೀಗ ಫಲಾನುಭವಿಗಳು ನಿಖರ ಉದ್ಯೋಗ ಸ್ಥಿತಿಯ ಮಾಹಿತಿ ಪಡೆಯುವುದೇ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಫಲಾನುಭವಿಗಳು ನಿರುದ್ಯೋಗ ಸ್ಥಿತಿಯ ಸ್ವಯಂ ಘೋಷಣೆ ಮಾಡುತ್ತಿದ್ದರೂ, ಅದರ ವಾಸ್ತವತೆ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ.

ಇತ್ತ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಯಲ್ಲಿನ ಮಾಹಿತಿ ನೀಡಲು ನಿರಾಕರಿಸುತ್ತಿರುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧಿಕಾರಿ ತಿಳಿಸಿದ್ದಾರೆ. ಕೇಂದ್ರ ಸಚಿವಾಲಯದ ಜೊತೆ ದತ್ತಾಂಶ ಕೋರಿ ಅನೇಕ ಬಾರಿ ಪತ್ರ ವ್ಯವಹಾರ ಮಾಡಿದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂದಿದ್ದಾರೆ.

ಮೊನ್ನೆ ನಡೆದ ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸಲಾಯಿತು. ಉದ್ಯೋಗ ಸ್ಥಿತಿಯ ನಿಖರ ಮಾಹಿತಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಬಳಿ ಮಾತ್ರ ಲಭ್ಯವಿದೆ. ಆದರೆ, ಭವಿಷ್ಯ ನಿಧಿ ಸಂಸ್ಥೆ ದತ್ತಾಂಶ ಹಂಚಲು ನಿರಾಕರಿಸುತ್ತಿರುವುದರಿಂದ ಯುವನಿಧಿ ಫಲಾನುಭವಿಗಳ ಉದ್ಯೋಗ ಸ್ಥಿತಿಯ ನಿಖರ ಪರಿಶೀಲನೆ ಕಷ್ಟ ಆಗುತ್ತಿದೆ. ಇದರಿಂದ ಯುವನಿಧಿ ಅರ್ಹರಿಗೇ ತಲುಪುತ್ತಿದೆಯೋ, ಅಥವಾ ಉದ್ಯೋಗ ಸಿಕ್ಕರೂ ಅದನ್ನು ಮರೆಮಾಚಿ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದಾರೋ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಉದ್ಯೋಗ ಸ್ಥಿತಿಯ ದತ್ತಾಂಶ ಹಂಚಲು EPFO ನಿರಾಕರಣೆ: ಕರ್ನಾಟಕ ಸರ್ಕಾರದ ಕುಟುಂಬ ಯೋಜನೆ ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಡುವೆ ದತ್ತಾಂಶ ವರ್ಗಾವಣೆ ವ್ಯವಸ್ಥೆ ಜಾರಿಗೊಳಿಸುವ ಅವಶ್ಯಕತೆ ಇದೆ. ಈ ಕುರಿತು EPFOಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೇ 3, 2023ರಂದು ಪತ್ರ ಬರೆದು ಕೋರಿದ್ದರು. ಜೊತೆಗೆ ಆ.12, 2023ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯು ದತ್ತಾಂಶ ವರ್ಗಾವಣೆ ವ್ಯವಸ್ಥೆ ಅನುಷ್ಠಾನಗೊಳಿಸಲು EPFOಗೆ ನಿರ್ದೇಶನ ನೀಡುವಂತೆ ಕೇಂದ್ರ ಭವಿಷ್ಯ ನಿಧಿ ಆಯುಕ್ತರಿಗೆ ಪತ್ರ ಬರೆದಿದ್ದರು.

ಭವಿಷ್ಯ ನಿಧಿ ಖಾತೆಗಳು ವಿಶ್ವಾಸರ್ಹ ಒಪ್ಪಂದದಡಿ ನಡೆಯುತ್ತಿದ್ದು, ವೈಯಕ್ತಿಕ ಸ್ವರೂಪದ ಮಾಹಿತಿಯಾಗಿದೆ. ಆದ್ದರಿಂದ, EPF ಸದಸ್ಯರ ವೈಯಕ್ತಿಕ ಡೇಟಾಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಭವಿಷ್ಯ ನಿಧಿ ಆಯುಕ್ತರು ಪತ್ರ ಬರೆದು ತಿಳಿಸಿದ್ದಾರೆ.

ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಕರ್ನಾಟಕದ ಯೋಜನೆ, ಕಾರ್ಯಕ್ರಮ ಮತ್ತು ಸಾಂಖ್ಯಿಕ ಇಲಾಖೆಗೆ EPF ಕೊಡುಗೆ ನೀಡಿದ ಸದಸ್ಯರ ಒಟ್ಟು ಸಂಖ್ಯೆ ಮತ್ತು ನೋಂದಾಯಿತ ಸಂಸ್ಥೆಗಳ ಸಂಖ್ಯೆಯನ್ನು ಒದಗಿಸಲಾಗಿತ್ತು. ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ- ಆಡಳಿತ) (ಕುಟುಂಬ) ದತ್ತಾಂಶ ವರ್ಗಾವಣೆ ವ್ಯವಸ್ಥೆ ಅನುಷ್ಠಾನಗೊಳಿಸಲು EPFOಗೆ ನಿರ್ದೇಶನ ನೀಡುವಂತೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಮತ್ತೆ ಪತ್ರ ಬರೆಯಲು ಮುಂದಾಗಿದೆ.

ಇದನ್ನೂ ಓದಿ:

ಈವರೆಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗೆ ಬಳಸಿದ ಎಸ್​​ಸಿ - ಎಸ್​ಟಿ ಹಣವೆಷ್ಟು?

2024-25 ಸಾಲಿನಲ್ಲಿ ಅಕ್ಟೋಬರ್​ವರೆಗೆ ಪಂಚ ಗ್ಯಾರಂಟಿಗಳಿಗೆ ಬಿಡುಗಡೆಯಾದ ಹಣವೆಷ್ಟು?

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ, ಶಾಸಕ ಗವಿಯಪ್ಪಗೆ ನೋಟಿಸ್ ನೀಡುತ್ತೇವೆ: ಡಿಸಿಎಂ ಶಿವಕುಮಾರ್

ಪಂಚ ಗ್ಯಾರಂಟಿ, ಬದ್ಧ ವೆಚ್ಚದ ಎಫೆಕ್ಟ್​: ₹60,000 ಕೋಟಿ ಸಾಲದ ಮೊರೆ ಹೋದ ರಾಜ್ಯ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.