ಬೆಂಗಳೂರು : ಸಂಚಾರ ನಿಯಮಗಳನ್ನು ಲೆಕ್ಕಿಸದೆ ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರೇ ಎಚ್ಚರ! ನಗರದಲ್ಲಿ ಇನ್ಮುಂದೆ ಇಂತಹ ದುಸ್ಸಾಹಸಕ್ಕೆ ಮುಂದಾದರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕೂಡ ಅಮಾನತುಗೊಳ್ಳಬಹುದು.
ಪೊಲೀಸರು ಸಂಚಾರ ನಿಯಮ ಪಾಲನೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ವಿಶೇಷ ಕಾರ್ಯಾಚರಣೆ ಕೈಗೊಂಡರೂ ಸಹ ನಗರದಲ್ಲಿ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲಿಯೂ ಟ್ರಾಫಿಕ್ ಜಾಮ್ ಇದ್ದಾಗ ಫುಟ್‌ಪಾತ್ ಮೇಲೆ ದ್ವಿಚಕ್ರ ವಾಹನ ಓಡಿಸುವವರನ್ನು ನಿತ್ಯವೂ ಕಾಣಬಹುದು.
Follow Traffic Rules #BengaluruTrafficPolice #DcpTrafficwest @CPBlr @Jointcptraffic @blrcitytraffic @BlrCityPolice pic.twitter.com/1AfjUooV0h
— DCP TRAFFIC WEST (@DCPTrWestBCP) February 2, 2025
ಅಂಥವರ ವಿರುದ್ಧ ಸಂಚಾರ ಪೊಲೀಸರು ದಂಡ ವಿಧಿಸುತ್ತಲೇ ಇದ್ದಾರೆ. ಆದರೆ ದಂಡಕ್ಕೂ ಬಗ್ಗದ ವಾಹನ ಸವಾರರ ವಿರುದ್ಧ ಲೈಸೆನ್ಸ್ ಅಮಾನತು ಮಾಡುವ ಅಸ್ತ್ರ ಪ್ರಯೋಗಿಸಲು ಬೆಂಗಳೂರು ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ. ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ಇದೇ ಮೊದಲ ಬಾರಿಗೆ ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: 800 ಚಾಲಕರ ವಿರುದ್ಧ ಡ್ರಿಂಕ್ & ಡ್ರೈವ್, ಅತಿವೇಗದ ಚಾಲನೆಗೆ 2.30 ಲಕ್ಷ ರೂ. ದಂಡ
ಇದುವರೆಗೂ ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ವಿರುದ್ಧ ದಂಡ ವಿಧಿಸಲಾಗುತ್ತಿತ್ತು. ಆದರೆ ನೂತನ ನಿಯಮದ ಅನುಸಾರ ಇನ್ಮುಂದೆ ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದರೆ ಮೊದಲ ಬಾರಿಗೆ ದಂಡ ವಿಧಿಸಲಾಗುತ್ತದೆ. ಆದರೆ ಮತ್ತೆ ಮತ್ತೆ ನಿಯಮ ಉಲ್ಲಂಘನೆ ಮುಂದುವರೆದರೆ ಅಂಥವರ ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡುತ್ತೇವೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವಾಹನ ಚಲಾಯಿಸಿದ ಅಪ್ರಾಪ್ತ ಬಾಲಕ: ಮಾಲೀಕರಿಗೆ 25 ಸಾವಿರ ದಂಡ ವಿಧಿಸಿದ ಕೋರ್ಟ್