ETV Bharat / state

ಹಾವೇರಿಯಲ್ಲಿ ದನಬೆದರಿಸುವ ಸ್ಪರ್ಧೆ : ಪ್ರಥಮ ಬಹುಮಾನ ₹ 80 ಸಾವಿರ ಮೌಲ್ಯದ ಹೆಚ್ಎಫ್ ತಳಿ ಹಸು

author img

By ETV Bharat Karnataka Team

Published : Mar 3, 2024, 10:28 PM IST

Updated : Mar 3, 2024, 10:45 PM IST

ಹಾವೇರಿಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮಸ್ತರು ರಾಜ್ಯಮಟ್ಟದ ದನಬೆದರಿಸುವ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.

ಹಾವೇರಿಯಲ್ಲಿ ದನಬೆದರಿಸುವ ಸ್ಪರ್ಧೆ
ಹಾವೇರಿಯಲ್ಲಿ ದನಬೆದರಿಸುವ ಸ್ಪರ್ಧೆ
ಸ್ಪರ್ಧೆ ಆಯೋಜಕ ಮುತ್ತ

ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಜಾನಪದ ಸೊಗಡಿನ ಕ್ರೀಡೆಯೆಂದರೆ ದನಬೆದರಿಸುವ ಸ್ಪರ್ಧೆ. ಉಳಿದಂತೆ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಮತ್ತು ಟಗರು ಕಾಳಗವಿದ್ದರೂ ಸಹ ಹೆಚ್ಚಿನ ಮಹತ್ವ ನೀಡುವುದು ದನಬೆದರಿಸುವ ಸ್ಪರ್ಧೆಗೆ. ಇದಕ್ಕೆ ಸ್ಥಳೀಯವಾಗಿ ಹೋರಿ ಹಬ್ಬ, ಕೊಬ್ಬರಿ ಹೋರಿ ಹಬ್ಬ ಅಂತಲೂ ಕರೆಯುತ್ತಾರೆ. ಈ ರೀತಿ ಕೊಬ್ಬರಿ ಹೋರಿ ಸಾಕುವುದು ಹಾವೇರಿ ಜಿಲ್ಲೆಯ ರೈತರಿಗೆ ಪ್ರತಿಷ್ಠೆಯ ವಿಷಯ.

ಈ ತರದ ಹೋರಿಗಳನ್ನು ಸಾಕಲು ಹೆಮ್ಮೆಪಡುವ ರೈತರು ಅವುಗಳಿಗೆ ಜಾನಪದ ಸೊಗಡಿನ ಹೆಸರು, ಸಿನಿಮಾ ನಟರ ಹೆಸರು, ಸಿನಿಮಾದ ಹೆಸರು ಇಟ್ಟು ಕರೆಯುವುದು ಇತ್ತೀಚಿನ ಫ್ಯಾಷನ್. ಇನ್ನು ಇದರಲ್ಲಿ ಎರಡು ವಿಭಾಗ ಮಾಡುವ ರೈತರು ಗಗ್ಗರಿ ಹೋರಿ ಮತ್ತು ಪೀಪಿ ಹೋರಿ ಎಂದು ವಿಭಾಗ ಮಾಡುತ್ತಾರೆ. ಈ ರೀತಿಯ ಸ್ಪರ್ಧೆಗಳಲ್ಲಿ ಹೋರಿಗಳನ್ನ ಪ್ರತ್ಯೇಕವಾಗಿ ಸಿಂಗರಿಸಲಾಗುತ್ತದೆ.

ಗಗ್ಗರಿ ಹೋರಿಗೆ ಮತ್ತು ಪೀಪಿ ಹೋರಿಗೆ ಅದರದ್ದೇ ಸ್ಟೈಲ್‌ಗಳಿರುತ್ತವೆ. ಇಂತಹ ಕೊಬ್ಬರಿ ಹೋರಿ ಸಾಕಿದ ರೈತರು ವರ್ಷಪೂರ್ತಿ ಜಮೀನಿನಲ್ಲಿ ಹೋರಿಗಳನ್ನು ಕೃಷಿ ಚಟುವಟಿಕೆಗಳಿಗೆ ಬಳಸುತ್ತಾರೆ. ದೀಪಾವಳಿ ನಂತರ ನಡೆಯುವ ಹೋರಿ ಸ್ಪರ್ಧೆಗಳಲ್ಲಿ ಹೋರಿಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡು ರೈತರು ಸಂಭ್ರಮಿಸುತ್ತಾರೆ. ಇನ್ನೂ ಕೆಲ ರೈತರು ಹೋರಿ ಹಬ್ಬಕ್ಕಾಗಿಯೇ ಎತ್ತುಗಳನ್ನು ಸಾಕುತ್ತಾರೆ. ಇವುಗಳನ್ನು ಕೃಷಿ ಚಟುವಟಿಕೆಗೆ ಬಳಸುವುದಿಲ್ಲ.

ರೈತ ವಿಜಯ್

ಅವುಗಳಿಗೆ ಅದರದ್ದೇ ಆದ ತಾಲೀಮುಗಳಿರುತ್ತವೆ. ಹೋರಿ ಹಬ್ಬ ಸಮೀಪ ಇದ್ದಾಗ ಹೋರಿಗಳನ್ನು ಮುಂಜಾನೆ ನಾಲ್ಕು ಗಂಟೆಗೆ ಕರೆದುಕೊಂಡು ವಾಕ್ ಮಾಡಿಸಲಾಗುತ್ತದೆ. ನಂತರ ಬೈಕ್ ತೆಗೆದುಕೊಂಡು ಹೋರಿ ಓಡಿಸಲಾಗುತ್ತದೆ. ನಂತರ 10 ರಿಂದ 20 ನಿಮಿಷ ಕೆರೆಯ ನೀರಿನಲ್ಲಿ ಈಜು ಮಾಡಿಸಲಾಗುತ್ತದೆ. ಇದರಿಂದ ಹೋರಿಗಳು ದಮ್ಮು ಕಳೆಯುತ್ತವೆ. ಹೆಚ್ಚು ಹೊತ್ತು ಓಡಿಸಿದರೂ ಎತ್ತಿಗೆ ಸುಸ್ತಾಗುವುದಿಲ್ಲ ಎನ್ನುತ್ತಾರೆ ರೈತರು.

ಇನ್ನು ಈ ರೀತಿಯ ಕೊಬ್ಬರಿ ಹೋರಿ ಓಡಿಸುವ ಅಖಾಡಗಳನ್ನು ನಿರ್ಮಿಸುವುದು ಸಹ ಒಂದು ಕಲೆ. ಇದನ್ನು ಅರಿತಿರುವ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮಸ್ಥರು ಗ್ರಾಮದ ಪಕ್ಕದಲ್ಲಿರುವ ಕೆರೆಯ ಅಂಗಳದಲ್ಲಿ ಸುಮಾರು ಎಂಟು ದಿನಗಳವರೆಗೆ ವೈಜ್ಞಾನಿಕವಾಗಿ ಅಖಾಡ ಸಿದ್ಧಪಡಿಸಿದ್ದಾರೆ.

80 ಸಾವಿರ ರೂಪಾಯಿ ಮೌಲ್ಯದ ಹೆಚ್ಎಫ್ ತಳಿ ಹಸು ಬಹುಮಾನ: ಅಖಾಡ ನಿರ್ಮಿಸಿದ್ದಲ್ಲದೆ ರಾಜ್ಯಮಟ್ಟದ ದನಬೆದರಿಸುವ ಸ್ಪರ್ಧೆಯನ್ನೂ ಸಹ ಗ್ರಾಮಸ್ಥರು ಆಯೋಜಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಕೇವಲ ಮುನ್ನೂರು ಹೋರಿಗಳಿಗೆ ಮಾತ್ರ ಸ್ಪರ್ಧೆ ಮಾಡಲು ಅವಕಾಶವಿದೆ. ಅದರಲ್ಲಿ 176 ಹೋರಿಗಳಿಗೆ ಬಹುಮಾನ ಇಡಲಾಗಿದೆ. ಪ್ರಥಮ ಬಹುಮಾನ 80 ಸಾವಿರ ರೂಪಾಯಿ ಮೌಲ್ಯದ ಹೆಚ್ಎಫ್ ತಳಿಯ ಹಸುವನ್ನು ಇಟ್ಟಿರುವುದು ಈ ಗ್ರಾಮಸ್ಥರ ವಿಶೇಷ.

ಇನ್ನು 6 ಜನರಿಗೆ ಬೈಕ್ ಸೇರಿದಂತೆ 20 ಟಿವಿ, 20 ಫ್ರಿಡ್ಜ್​, 40 ತಿಜೂರಿ, 40 ದಿವಾನ್ ಕಾಟ್, 20 ಮೇಕಪ್ ಟೇಬಲ್ ಸೇರಿದಂತೆ 176 ಬಹುಮಾನಗಳನ್ನು ಸಹ ಇಟ್ಟಿದ್ದಾರೆ. ಈ ಗ್ರಾಮದ ಮತ್ತೊಂದು ವಿಶೇಷ ಅಂದರೆ ಯಾವುದೇ ಆಮಿಷಗಳಿಗೆ ಒಳಗಾಗದೆ ಸ್ಪರ್ಧೆಯಲ್ಲಿ ಹೋರಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುತ್ತದೆ.

ಮುಂಜಾನೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಈ ಸ್ಪರ್ಧೆ: ಹಬ್ಬದ ಕೊನೆಯವರೆಗೆ ಯಾರು ನಿರ್ಣಾಯಕರು ಎನ್ನುವುದನ್ನು ಸಹ ಈ ಗ್ರಾಮಸ್ಥರು ಗೌಪ್ಯತೆ ಕಾಪಾಡುತ್ತಾರೆ. ಈ ಸ್ಪರ್ಧೆ ರೈತರ ಮನರಂಜನೆಗಾಗಿ ಆಯೋಜಿಸಲಾಗಿದ್ದು, ಸೋಮವಾರ ಮುಂಜಾನೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆಯಲಿದೆ. ಸ್ಪರ್ಧೆಗಾಗಿ ಸುತ್ತಮುತ್ತಲ ಗ್ರಾಮಸ್ಥರು ತಮಿಳುನಾಡಿನಿಂದ ಹೋರಿಗಳನ್ನು ತಂದಿದ್ದಾರೆ.

ಇನ್ನು ಕೆಲವು ಫೈಲ್ವಾನರು ಪ್ರತಿಷ್ಠಿತ ಹೋರಿ ಹಿಡಿಯಲು ಬರುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ನಾನಾ ಕಾರಣಗಳಿಂದ ಬಂದ್​ ಆಗಿದ್ದ ಹಂಸಭಾವಿ ದನಬೆದರಿಸುವ ಸ್ಪರ್ಧೆ ಈ ವರ್ಷ ಮತ್ತೆ ಆರಂಭವಾಗಲಿದ್ದು, ರೈತರಿಗೆ ಸಂತಸ ತಂದಿದೆ.

ಇದನ್ನೂ ಓದಿ : ಅದ್ಧೂರಿಯಾಗ ಜರುಗಿದ ದನಬೆದರಿಸುವ ಸ್ಪರ್ಧೆ: 500ಕ್ಕೂ ಹೆಚ್ಚು ಹೋರಿಗಳು ಭಾಗಿ

Last Updated : Mar 3, 2024, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.