ಬೆಳಗಾವಿ: ಬೆಳಗಾವಿ ಜಿಲ್ಲೆಗೆ ರಾಜ್ಯ ಸರ್ಕಾರ 247 ಕೋಟಿ ರೂ. ಬರ ಪರಿಹಾರ ಘೋಷಣೆ ಮಾಡಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಈಗ ಜಿಲ್ಲೆಯ 2,68,077 ರೈತರ ಖಾತೆಗಳಿಗೆ ಬೆಳೆ ಪರಿಹಾರ ಜಮೆ ಮಾಡಿದೆ. ಈ ಹಿಂದೆ 69.52 ಕೋಟಿ ಪರಿಹಾರದ ಮೊತ್ತ ಬಿಡುಗಡೆ ಆಗಿತ್ತು. ಈಗ ಮತ್ತೆ 247 ಕೋಟಿ ಬರ ಪರಿಹಾರ ಬಿಡುಗಡೆ ಆಗಿದೆ ಎಂದು ಮಾಹಿತಿ ನೀಡಿದರು.
ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ವ್ಯತ್ಯಾಸ ಆಗಿರುವ, ಬ್ಯಾಂಕ್ ಖಾತೆಗಳಿಗೆ ಆಧಾರ್ ಮತ್ತು ಎನ್.ಪಿ.ಸಿ.ಐ ಜೋಡಣೆ ಆಗದ, ಅದೇ ರೀತಿ ಹಲವರ ಖಾತೆಗಳು ಸಕ್ರಿಯ ಇಲ್ಲ ಮತ್ತು ಬಂದ್ ಆಗಿವೆ. ಅಂಥ ರೈತರಿಗೆ ಪರಿಹಾರ ಬಂದಿಲ್ಲ. ಹಾಗಾಗಿ, ಈ ರೈತರು ಬ್ಯಾಂಕ್ಗಳಿಗೆ ಹೋಗಿ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಆಗ, ಅವರ ಖಾತೆಗಳಿಗೆ ನೇರವಾಗಿ ಬರ ಪರಿಹಾರದ ಹಣ ಜಮೆ ಆಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಬರಗಾಲದಿಂದ ತತ್ತರಿಸಿ ಹೋಗಿದ್ದ ಬೆಳಗಾವಿ ಜಿಲ್ಲೆ ರೈತರಿಗೆ ರಾಜ್ಯ ಸರ್ಕಾರ 247 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದೆ. ಇಲ್ಲಿಯವರೆಗೆ ಜಿಲ್ಲೆಯ ಒಟ್ಟು 3,74,000 ಸಾವಿರ ರೈತರಿಗೆ ಬರ ಪರಿಹಾರ ನೀಡಲಾಗಿದೆ. ಬಿತ್ತನೆ ಮಾಡಿದ ರೈತರಿಗೆ ಮಾತ್ರ ಪರಿಹಾರ ವಿತರಿಸಲಾಗುತ್ತಿದೆ. ಆದ್ದರಿಂದ ಫ್ರೂಟ್ಸ್ ಐಡಿ, ಆಧಾರ್ ಲಿಂಕ್ ಸೇರಿ ಮತ್ತಿತರ ತಾಂತ್ರಿಕ ಸಮಸ್ಯೆ ಇದ್ದ ರೈತರು ಬ್ಯಾಂಕ್ಗಳಿಗೆ ಹೋಗಿ ಸರಿಪಡಿಸಿದರೆ, ಅವರಿಗೂ ಬರ ಪರಿಹಾರ ಶೀಘ್ರವೇ ಜಮೆ ಆಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇದನ್ನೂ ಓದಿ: ಕೇಂದ್ರ ಬರ ಪರಿಹಾರದ ಪೈಕಿ 32.12 ಲಕ್ಷ ರೈತರ ಖಾತೆಗಳಿಗೆ ಹಣ ಜಮೆ: ಸಚಿವ ಕೃಷ್ಣ ಬೈರೇಗೌಡ - Minister Krishna Byre Gowda