ETV Bharat / state

ಡಾ.ಕೆ.ಸುಧಾಕರ್ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಎಸ್.ಆರ್.ವಿಶ್ವನಾಥ್ - S R Vishwanath - S R VISHWANATH

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಮತ್ತೆ ಶಾಸಕ ಎಸ್.ಆರ್ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಸ್.ಆರ್ ವಿಶ್ವನಾಥ್
ಎಸ್.ಆರ್ ವಿಶ್ವನಾಥ್
author img

By ETV Bharat Karnataka Team

Published : Apr 7, 2024, 10:13 PM IST

ಮೊದಲು ಚಿಕ್ಕಬಳ್ಳಾಪುರದಲ್ಲಿ ಲೀಡ್ ತಗೊಳ್ಳಿ

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತ್ತು ಶಾಸಕ ಎಸ್.ಆರ್.ವಿಶ್ವನಾಥ್ ನಡುವಿನ ವೈಮನಸ್ಸು ಮರೆಯಾಗುವಂತೆ ಕಾಣುತ್ತಿಲ್ಲ. ತಮ್ಮ ಕ್ಷೇತ್ರದಲ್ಲಿನ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಿ ಮಾತನಾಡಿರುವ ವಿಚಾರದಿಂದ ಕೆರಳಿರುವ ವಿಶ್ವನಾಥ್ ಅವರು ಸುಧಾಕರ್​ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು.

ಯಲಹಂಕದ ಕೇಸರಿವನದಲ್ಲಿ ಇಂದು ವಿಶ್ವನಾಥ್ ಮತ್ತು ಸುಧಾಕರ್ ನಡುವೆ ಸಂಬಂಧ ಬೆಸೆಯುವ ಕಾರಣಕ್ಕಾಗಿಯೇ ಸಭೆ ಆಯೋಜನೆ ಮಾಡಲಾಗಿತ್ತು. ಆದರೆ ಮತ್ತೆ ಇಬ್ಬರ ನಡುವಿನ ಮುನಿಸು ಮತ್ತಷ್ಟು ಹೆಚ್ಚಾಗಿದೆ. ಇದೇ ಮುನಿಸು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಎಸ್.ಆರ್.ವಿಶ್ವನಾಥ್, ಡಾ.ಕೆ.ಸುಧಾಕರ್ ಅವರಿಗೆ ನನ್ನ ಮೇಲೆ ಅನುಮಾನ. ಅನುಮಾನಪಟ್ಟು ನನ್ನ ಬಗ್ಗೆ ಬೇರೆಯವರ ಜತೆ ಮಾತನಾಡಿದ್ದಾರೆ. ಅನುಮಾನ ಇದ್ದಾರೆ ಯಾರನ್ನಾದರೂ ಕರೆದುಕೊಂಡು ಬಂದು ಪ್ರಚಾರ ಮಾಡಲಿ. ಯಲಹಂಕದಲ್ಲಿ ಒಂದು ಲಕ್ಷ ಲೀಡ್ ಕೊಡುವುದು ಅಷ್ಟು ಸುಲಭವಲ್ಲ. ಚಿಕ್ಕಬಳ್ಳಾಪುರದಲ್ಲಿ ಮೊದಲು ಲೀಡ್ ತೆಗೆದುಕೊಳ್ಳಲಿ. ಅವರು ತೆಗೆದುಕೊಳ್ಳುವ ಲೀಡ್ ಮೇಲೆ ಎರಡು ಪಟ್ಟು ಲೀಡ್ ಯಲಹಂಕದಲ್ಲಿ ಕೊಡುತ್ತೇವೆ. ಅವರು ನಮ್ಮ ಮೇಲೆ ಡಿಪೆಂಡ್ ಆಗಬಾರದು ಎಂದರು.

ಪ್ರಧಾನಿ ನರೇಂದ್ರ ಮೋದಿ ಜತೆ ವ್ಯಕ್ತಿಯನ್ನು ನೋಡಿಯೂ ಜನ ಮತ ಹಾಕುತ್ತಾರೆ. ನಾನು ಅದನ್ನೇ ಹೇಳಿರುವುದು. ಸುಧಾಕರ್ ತಮ್ಮ ಸ್ವಭಾವವನ್ನು ತಿದ್ದಿಕೊಳ್ಳಬೇಕು. ಸಚಿವ ಸ್ಥಾನ, ಸೀಟ್ ಸಿಗಲಿಲ್ಲ ಎಂದು ಬೇರೆಯವರ ಮನೆ ಕದ ತಟ್ಟಿದವನು ನಾನಲ್ಲ. ಬಕೆಟ್ ಹಿಡಿಯೋನು ನಾನಲ್ಲ. ಹೊಂದಾಣಿಕೆ ಗಿರಾಕಿಗಳು ನಾವಲ್ಲ. ರಾತ್ರಿ ಹೊತ್ತು ಕಾಂಗ್ರೆಸ್‌ನವರ ಜತೆ ಮಾತನಾಡಿ ಬೆಳಗ್ಗೆ ಬಿಜೆಪಿಯವರ ಜತೆ ಮಾತನಾಡುವ ಜಾಯಮಾನವೇ ನನ್ನದಲ್ಲ ಎಂದು ನೇರವಾಗಿ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ, ಕಾಂಗ್ರೆಸ್​ಗೆ ಒಳ್ಳೆಯ ಜನಸ್ಪಂದನೆ ಇದೆ: ಪ್ರಿಯಾಂಕಾ ಜಾರಕಿಹೊಳಿ - Priyanka Jarakiholi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.