ETV Bharat / state

ಕಲಬುರಗಿ - ಬೆಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿ: ಗೌರಿ - ಗಣೇಶ ಹಬ್ಬಕ್ಕೆ ವಿಶೇಷ ರೈಲು ಸಂಚಾರ - Special Train for Ganesha festival

ಗೌರಿ ಗಣೇಶದ ಹಬ್ಬದ ಹಿನ್ನೆಲೆ ಪ್ರಯಾಣಿಕರ ಹೆಚ್ಚಿನ ದಟ್ಟಣೆ ನಿವಾರಿಸುವ ದೃಷ್ಟಿಯಿಂದ ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ನಡೆಸಲಾಗಿದೆ

special-train-between-bengaluru-kalaburagi-for-ganesha-festival
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Aug 26, 2024, 1:43 PM IST

ಹುಬ್ಬಳ್ಳಿ: ಕಲಬುರಗಿ- ಎಸ್​ಎಂವಿಟಿ ಬೆಂಗಳೂರು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಗೌರಿ ಗಣೇಶದ ಹಬ್ಬದ ಸಾಲು ಸಾಲು ರಜೆ ಹಿನ್ನೆಲೆ ಪ್ರಯಾಣಿಕರ ಹೆಚ್ಚಿನ ದಟ್ಟಣೆ ನಿವಾರಿಸುವ ದೃಷ್ಟಿಯಿಂದ ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲು ಸಂಖ್ಯೆ 06589/ 06590 ಎಸ್.ಎಂ.ವಿ.ಟಿ ಬೆಂಗಳೂರು- ಕಲಬುರಗಿ ಹಾಗೂ ಎಸ್.ಎಂ.ವಿ.ಟಿ ಬೆಂಗಳೂರು ಎಕ್ಸ್​ಪ್ರೆಸ್​ ವಿಶೇಷ ರೈಲು ಸಂಚಾರಕ್ಕೆ ನೈಋತ್ಯ ರೈಲ್ವೆ ಹಸಿರು ನಿಶಾನೆ ತೋರಿದೆ

ದಿನಕ್ಕೆ ಮೂರು ಬಾರಿ ಪ್ರಯಾಣ: ರೈಲು ಸಂಖ್ಯೆ 06589 ಎಸ್.ಎಂ.ವಿ.ಟಿ ಬೆಂಗಳೂರು - ಕಲಬುರಗಿ ಎಕ್ಸ್ಪ್ರೆಸ್ ವಿಶೇಷ ರೈಲು ಸೆಪ್ಟೆಂಬರ್​ 5, 6 ಮತ್ತು 7ರಂದು ರಾತ್ರಿ 9.15 ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 07.40 ಕ್ಕೆ ಕಲಬುರಗಿ ತಲುಪಲಿದೆ.

ರೈಲು ಸಂಖ್ಯೆ 06590 ಕಲಬುರಗಿ - ಎಸ್.ಎಂ.ವಿ.ಟಿ ಬೆಂಗಳೂರು ಎಕ್ಸ್​ಪ್ರೆಸ್​​ ವಿಶೇಷ ರೈಲು ಸೆಪ್ಟೆಂಬರ್​ 6, 7 ಮತ್ತು 8ರಂದು ಕಲಬುರಗಿಯಿಂದ ಬೆಳಗ್ಗೆ 09.35 ಕ್ಕೆ ಹೊರಟು ಅದೇ ದಿನ ರಾತ್ರಿ 08.00 ಗಂಟೆಗೆ ಎಸ್.ಎಂ.ವಿ.ಟಿ ಬೆಂಗಳೂರು ನಿಲ್ದಾಣ ತಲುಪಲಿದೆ.

ನಿಲುಗಡೆ ಸ್ಥಳ: ಈ ವಿಶೇಷ ರೈಲುಗಳು ಯಲಹಂಕ, ಧರ್ಮವರಂ ಜಂಕ್ಷನ್​, ಅನಂತಪುರಂ, ಗುಂತಕಲ್ ಜಂಕ್ಷನ್​., ಆದೋನಿ, ಮಂತ್ರಾಲಯಂ ರೋಡ್, ರಾಯಚೂರು ಜಂ., ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ.

ಈ ವಿಶೇಷ ರೈಲುಗಳು 02 ಎಸಿ 3-ಟೈರ್ ಕೋಚ್​ಗಳು, 10 ಸ್ಲೀಪರ್ ಕ್ಲಾಸ್ ಕೋಚ್​ಗಳು, 04 ಸೆಕೆಂಡ್ ಕ್ಲಾಸ್ ಕೋಚ್​ಗಳು ಮತ್ತು 02 ಲಗೇಜ್ ಕಮ್ ಬ್ರೇಕ್ ವ್ಯಾನ್ (ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್ನೊಂದಿಗೆ) ಕೋಚ್​ಗಳನ್ನು ಒಳಗೊಂಡಿರುತ್ತವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಇದನ್ನೂ ಓದಿ: ಗಂಗಾವತಿ: ಒಂದು ತಿಂಗಳ ಬಳಿಕ ಕಂಪ್ಲಿ ಸೇತುವೆ ವಾಹನ ಸಂಚಾರಕ್ಕೆ ಮುಕ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.