ETV Bharat / state

ಬೆಳಗಾವಿಯಲ್ಲಿ ಮಂಗಳವಾರ ಸೌರ ಸ್ವ- ಉದ್ಯೋಗ ಮೇಳ ಆಯೋಜನೆ: ಸ್ಥಳ, ಸಮಯದ ಮಾಹಿತಿ ಹೀಗಿದೆ - employment Mela

ಬೆಳಗಾವಿಯಲ್ಲಿ ಮಂಗಳವಾರ ಸೌರ ಉದ್ಯೋಗ ಮೇಳ ಆಯೋಜಿಸಲಾಗಿದೆ. ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬೆಳಗ್ಗೆ 10.30 ರಿಂದ ಸಂಜೆ 5ರವರೆಗೆ ಜಿಲ್ಲೆಯ ನಾಲ್ಕು ತಾಲೂಕುಗಳ ಮಹಿಳೆಯರು ಭಾಗವಹಿಸಲಿದ್ದಾರೆ.

ಬೆಳಗಾವಿಯಲ್ಲಿ ಮಂಗಳವಾರ ಸೌರ ಸ್ವ ಉದ್ಯೋಗ ಮೇಳ ಆಯೋಜನೆ
ಬೆಳಗಾವಿಯಲ್ಲಿ ಮಂಗಳವಾರ ಸೌರ ಸ್ವ ಉದ್ಯೋಗ ಮೇಳ ಆಯೋಜನೆ (ETV Bharat)
author img

By ETV Bharat Karnataka Team

Published : Sep 2, 2024, 9:18 PM IST

ಸೆಲ್ಕೋ ಫೌಂಡೇಶನ್ ಬೆಳಗಾವಿ ವಿಭಾಗದ ಮ್ಯಾನೇಜರ್ ವಿನಾಯಕ ಹೆಗಡೆ (ETV Bharat)

ಬೆಳಗಾವಿ: ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸೌರ ಸ್ವ - ಉದ್ಯೋಗ ಮೇಳ ಕಾರ್ಯಕ್ರಮವನ್ನು ಸೆ.3 ರಂದು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ ಎಂದು ಸೆಲ್ಕೋ ಫೌಂಡೇಶನ್ ಬೆಳಗಾವಿ ವಿಭಾಗದ ಮ್ಯಾನೇಜರ್ ವಿನಾಯಕ ಹೆಗಡೆ ತಿಳಿಸಿದರು.

ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ಸೆಲ್ಕೋ ಫೌಂಡೇಶನ್ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಮಂಗಳವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬೆಳಗ್ಗೆ 10.30 ರಿಂದ ಸಂಜೆ 5 ರವರೆಗೆ ನಡೆಯಲಿರುವ ಸೌರ ಉದ್ಯೋಗ ಮೇಳದಲ್ಲಿ ಬೆಳಗಾವಿ ಜಿಲ್ಲೆಯ ನಾಲ್ಕು ತಾಲೂಕುಗಳ ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಲಿದ್ದಾರೆ. ಸ್ವಸಹಾಯ ಗುಂಪಿನ ಮಹಿಳೆಯರಿಗಾಗಿ, ಮಹಿಳಾ ಸ್ನೇಹಿ ತಂತ್ರಜ್ಞಾನಗಳ ಕುರಿತು ತಿಳಿವಳಿಕೆ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ಮಹಿಳೆಯರು ಉದ್ಯೋಗ ಅರಸಿ ಬೇರೆಡೆ ಹೋದರೂ ಬದುಕು ಕಟ್ಟಿಕೊಳ್ಳವುದು ವಿರಳ. ತಮ್ಮ ಊರಲ್ಲಿ ಮಹಿಳೆಯರು ಬೆಳೆದು ಕುಟುಂಬಕ್ಕೆ ಬೆಳಕಾಗಬೇಕು ಎಂಬ ಉದ್ದೇಶದಿಂದ ಮಹಿಳೆಯರಿಗಾಗಿ ಸೌರ ಸ್ವ- ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸ್ವ- ಉದ್ಯೋಗ ಮಹಿಳೆಯರಿಗೆ ಜೀವನಕ್ಕೆ ಆಸರೆಯಾಗಲಿದೆ. ಆರೋಗ್ಯ, ಜೀವನೋಪಾಯ ಮತ್ತು ಮಕ್ಕಳಿಗೆ ಶಿಕ್ಷಣ ಒದಗಿಸಲು ಬಹಳಷ್ಟು ಸಹಕಾರಿಯಾಗಿದೆ. ಅದಕ್ಕಾಗಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಸೌರ ಸ್ವ- ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ಸೆಲ್ಕೋ ಫೌಂಡೇಶನ್ ಸಂಸ್ಥಾಪಕ ಡಾ.ಹರೀಶ ಹಂದೆ ಅವರು 1995 ರಲ್ಲಿ ಸೋಲ್ಕೊ ಇಂಡಿಯಾ ಆರಂಭಿಸಿ, 2010ರಲ್ಲಿ ಸೆಲ್ಕೋ ಫೌಂಡೇಶನ್ ಹುಟ್ಟುಹಾಕಿದರು. ಕಳೆದ 14 ವರ್ಷಗಳಿಂದ ದೇಶಾದ್ಯಂತ ಸುಸ್ಥಿರ ಅಭಿವೃದ್ಧಿ ಹಾಗೂ ಸೌರ ವಿದ್ಯುತ್ ವಿಭಾಗದಲ್ಲಿ ಸೆಲ್ಕೋ ಫೌಂಡೇಶನ್ ಹೊಸ ಆವಿಷ್ಕಾರಗಳನ್ನು ತಂದಿದೆ. ನಿರುದ್ಯೋಗಿ ಮಹಿಳೆಯರು ಬದುಕು ರೂಪಿಸಿಕೊಳ್ಳಲು ಸೆಲ್ಕೋ ಫೌಂಡೇಶನ್ ಸಹಕಾರ ನೀಡುತ್ತಾ ಬಂದಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ ಉದ್ಯೋಗವನ್ನು ಹಾಗೂ ಸೌರ ವಿದ್ಯುತ್ ಮುಖಾಂತರ ಜೀವನೋಪಾಯ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿದೆ. ಜಿಲ್ಲಾದ್ಯಂತ 200ಕ್ಕೂ ಹೆಚ್ಚು ವಿಶೇಷಚೇತನರಿಗೆ ಸ್ವಾವಲಂಬನೆಯ ಜೀವನವನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದೆ ಎಂದು ವಿನಾಯಕ ಹೆಗಡೆ ತಿಳಿಸಿದರು.

ಇದನ್ನೂ ಓದಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ - Guest Lecturers Recruitment

ETV Bharat Logo

Copyright © 2024 Ushodaya Enterprises Pvt. Ltd., All Rights Reserved.