ETV Bharat / state

ದುಬೈನಿಂದ ಬೆಂಗಳೂರಿಗೆ 25 ಐ-ಫೋನ್​ಗಳ ಕಳ್ಳಸಾಗಣೆ: ಉಡುಪಿ ಮೂಲದ ವ್ಯಕ್ತಿಯಿಂದ 30 ಲಕ್ಷ ಮೌಲ್ಯದ ವಸ್ತುಗಳು ವಶ - Smuggling of 25 iPhones - SMUGGLING OF 25 IPHONES

ದುಬೈನಿಂದ ಬೆಂಗಳೂರಿಗೆ 25 ಐ-ಫೋನ್​ಗಳ ಕಳ್ಳಸಾಗಣೆ ಮಾಡುತ್ತಿದ್ದ ಉಡುಪಿ ಮೂಲದ ವ್ಯಕ್ತಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.

ವಶಪಡಿಸಿಕೊಂಡ ಐ-ಫೋನ್​ ಹಾಗೂ ಆಪಲ್​​ ವಾಚ್
ವಶಪಡಿಸಿಕೊಂಡ ಐ-ಫೋನ್​ ಹಾಗೂ ಆಪಲ್​​ ವಾಚ್ (ETV Bharat)
author img

By ETV Bharat Karnataka Team

Published : Jul 23, 2024, 11:32 AM IST

ದೇವನಹಳ್ಳಿ: ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ 25 ಐ-ಫೋನ್​ ಮತ್ತು 5 ಆಪಲ್​​ ವಾಚ್​ಗಳನ್ನು ಸಾಗಿಸುತ್ತಿದ್ಧ ಉಡುಪಿ ಮೂಲದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್​​​ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಈ ವ್ಯಕ್ತಿಯಿಂದ ಸುಮಾರು 30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಜುಲೈ 20 ಶನಿವಾರ, ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್ (ಇಕೆ-568) ವಿಮಾನದಲ್ಲಿ ಬಂದ ಪ್ರಯಾಣಿಕನನ್ನು ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಕಸ್ಟಮ್ಸ್​ನ ಏರ್​ ಇಂಟೆಲಿಜೆನ್ಸ್ ಯೂನಿಟ್​ನ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ, ಅಕ್ರಮವಾಗಿ ವಿದೇಶದಿಂದ ತಂದಿರುವ ಐ-ಫೋನ್ ಮತ್ತು ಆಪಲ್ ವಾಚ್​ಗಳು ಪತ್ತೆಯಾಗಿವೆ. ಕಸ್ಟಮ್ಸ್ ಮೂಲದ ಪ್ರಕಾರ ಉಡುಪಿ ಮೂಲದ ಕುಂದಾಪುರ ತಾಲೂಕಿನ ತಬ್ರೇಜ್ ಅಹಮದ್ ಗೋಳಿಹೊಳೆ ಎಂಬ ಪ್ರಯಾಣಿಕ ಎಂದು ತಿಳಿದುಬಂದಿದೆ.

ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್​​ ಅಧಿಕಾರಿಗಳು ಬಂಧಿಸಿದ್ದು, ಆತ ತನ್ನ ಬ್ಯಾಗ್​ನಲ್ಲಿ ಮರೆಮಾಚಿ ಅಕ್ರಮವಾಗಿ ವಸ್ತುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಸ್ಟಮ್ಸ್ ಕಾಯ್ದೆಯ 2016ರ ಬ್ಯಾಗೇಜ್ ನಿಯಮಗಳ ಪ್ರಕಾರ ಒಬ್ಬ ಪ್ರಯಾಣಿಕನಿಗೆ ಗರಿಷ್ಠ 50 ಸಾವಿರ ಮೌಲ್ಯದ ವಸ್ತುಗಳನ್ನು ಸಾಗಿಸಲು ಅವಕಾಶ ಇದೆ. ಆದರೆ ಆತ 25 ಐ-ಫೋನ್ ಮತ್ತು 5 ಆಪಲ್ ವಾಚ್​ಗಳನ್ನು ಅಕ್ರಮವಾಗಿ ಸಾಗಿಸುವ ಯತ್ನ ನಡೆದಿದ್ದು, ಪ್ರತಿಯೊಂದರ ಐ-ಫೋನ್ ಬೆಲೆ 1 ಲಕ್ಷ ಇದೆ. ಪ್ರತಿಯೊಂದು ಐ-ಫೋನ್​ಗೆ 50 ಸಾವಿರ ಕಸ್ಟಮ್ಸ್​ ಸುಂಕವನ್ನು ಪಡೆಯುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಗೋಲ್ಡ್ ಫ್ಲೇಕ್ ಬ್ರ್ಯಾಂಡ್​ನ 52 ಸಾವಿರ ವಿದೇಶಿ ಸಿಗರೇಟ್ ಜಪ್ತಿ ಮಾಡಿದ ಕಸ್ಟಮ್ಸ್ ಅಧಿಕಾರಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.