ETV Bharat / state

ಕೇತಗಾನಹಳ್ಳಿ ಗ್ರಾಮದಲ್ಲಿನ 14 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಎಸ್ಐಟಿ ರಚನೆ - SIT FORMED TO CLEAR ENCROACHMENT

ಕೇತಗಾನಹಳ್ಳಿ ಗ್ರಾಮದಲ್ಲಿನ 14 ಎಕರೆ ಸರ್ಕಾರಿ ಜಮೀನುಗಳಲ್ಲಿ ಮಾಡಿರುವ ಅನಧಿಕೃತ ಒತ್ತುವರಿ ತೆರವಿಗೆ ರಾಜ್ಯ ಸರ್ಕಾರ ಎಸ್​ಐಟಿ ರಚನೆ ಮಾಡಿದೆ.

vidhana soudha
ವಿಧಾನಸೌಧ (ETV Bharat)
author img

By ETV Bharat Karnataka Team

Published : Feb 1, 2025, 7:44 PM IST

ಬೆಂಗಳೂರು : ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿನ 14 ಎಕರೆ ಸರ್ಕಾರಿ ಜಮೀನುಗಳಲ್ಲಿ ಮಾಡಿರುವ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸುವ ಕುರಿತು ತನಿಖೆ ನಡೆಸಲು ಎಸ್​ಐಟಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕೇತಗಾನಹಳ್ಳಿ ಸರ್ಕಾರಿ ಜಮೀನನ್ನು ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ, ಮತ್ತಿತರರಿಂದ ಒತ್ತುವರಿ ಮಾಡಿದ ಆರೋಪ ಪ್ರಕರಣದಲ್ಲಿ ಪ್ರತಿವಾದಿಗಳು ಉನ್ನತ ಸ್ಥಾನದಲ್ಲಿದ್ದಾರೆ ಎಂಬ ಕಾರಣದಿಂದ ಕಳೆದ ಐದು ವರ್ಷಗಳಿಂದ ತೆರವು ಕಾರ್ಯಕ್ಕೆ ಮುಂದಾಗಿಲ್ಲವೇ? ಎಂದು ಕಂದಾಯ ಇಲಾಖೆ ಅಧಿಕಾರಿಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪ ಸಂಬಂಧ ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.

ರಾಮನಗರ ಜಿಲ್ಲೆ, ರಾಮನಗರ ತಾಲೂಕು, ಬಿಡದಿ ಹೋಬಳಿ, ಕೇತಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 8,9,10,16, ಮತ್ತು 79 ರ ಜಮೀನುಗಳಲ್ಲಿ ಒತ್ತುವರಿ ಆಗಿರುವ 14-04 ಎಕರೆ/ಗುಂಟೆ ಜಮೀನಿನ ಒತ್ತುವರಿಯಾಗಿರುವ ಆರೋಪ ಕೇಳಿ ಬಂದಿತ್ತು. ಈ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸುವ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರು ಅಮ್ಲಾನ್​ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ನಾಲ್ವರು ಸದಸ್ಯರ ಎಸ್ಐಟಿ ರಚಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಎಸ್ಐಟಿ ಪರಿಶೀಲಿಸಬೇಕಾದ ಅಂಶಗಳು :

  • ರಾಮನಗರ ಜಿಲ್ಲೆ, ರಾಮನಗರ ತಾಲೂಕು, ಬಿಡದಿ ಹೋಬಳಿ, ಕೇತಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 8,9,10,16,17 ಮತ್ತು 79 ರ ಸರ್ವೆ ನಂಬರ್​ನಲ್ಲಿ ಮಂಜೂರಾತಿಯಾಗಿರುವ ಜಮೀನುಗಳ ಸಂಪೂರ್ಣ ದಾಖಲೆಗಳ ನೈಜತೆಯನ್ನು ಪರಿಶೀಲಿಸಬೇಕು.
  • ದಾಖಲೆಗಳ ನೈಜತೆಯನ್ನು ಪರಿಶೀಲಿಸುವ ಸಲುವಾಗಿ ಅವಶ್ಯವಿದ್ದಲ್ಲಿ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮವಹಿಸುವುದು.
  • ಮಂಜೂರಾತಿಯಾಗಿರುವ ಜಮೀನುಗಳಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ -1964, ಕಂದಾಯ ಭೂ ಕಂದಾಯ ನಿಯಮಗಳು -1966 ಮತ್ತು ಕರ್ನಾಟಕ ಭೂ ಮಂಜೂರಾತಿ ನಿಯಮಗಳು-1969 ಮತ್ತು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವೊಂದು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆ -1978 ಉಲ್ಲಂಘನೆಯಾಗಿದೆಯೇ? ಎಂಬ ವರದಿ ನೀಡುವುದು.
  • ಈ ಸರ್ವೆ ನಂಬರ್​ನಲ್ಲಿ ಮಂಜೂರಾತಿಯಾಗಿರುವ ಜಮೀನುಗಳಲ್ಲಿ ಸರ್ಕಾರಿ ಜಮೀನುಗಳು ಅನಧಿಕೃತವಾಗಿ ಒತ್ತುವರಿಯಾಗಿದ್ದಲ್ಲಿ ನಿಯಮಾನುಸಾರ ಒತ್ತುವರಿಯನ್ನು ತೆರವುಗೊಳಿಸಲು ಕ್ರಮವಹಿಸುವುದು.
  • ಮೇಲ್ಕಂಡ ಸರ್ವೆ ನಂಬರ್​ನಲ್ಲಿರುವ ಮೂಲ ಸರ್ವೆ ದಾಖಲೆಗಳಂತೆ ಇರುವ ಸಾರ್ವಜನಿಕ ರಸ್ತೆ, ಜಲಕಾಯ ಮತ್ತು ಜಲಮೂಲ ಪ್ರದೇಶಗಳ ಯಥಾಸ್ಥಿತಿಯನ್ನು ಕಾಪಾಡಿಕೊಂಡಿರುವ ಬಗ್ಗೆ ಪರಿಶೀಲಿಸುವುದು.
  • ವಿಶೇಷ ತನಿಖಾ ತಂಡವು ಮೂರು ತಿಂಗಳೊಳಗಾಗಿ ತನಿಖಾ ಕಾರ್ಯವನ್ನು ಪೂರ್ಣಗೊಳಿಸಿ, ಸ್ಪಷ್ಟ ಶಿಫಾರಸ್ಸಿನೊಂದಿಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

ಇದನ್ನೂ ಓದಿ : ಹೆಚ್​ಡಿಕೆ ಮತ್ತು ಸಂಬಂಧಿಕರಿಂದ ಸರ್ಕಾರಿ ಜಮೀನು ಒತ್ತುವರಿ ಆರೋಪ: ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ - LAND ENCROACHMENT CASE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.