ETV Bharat / state

ಶಿಗ್ಗಾಂವ್ ಉಪಚುನಾವಣೆ: ಕಾಂಗ್ರೆಸ್​ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ - ಮಂಜುಳಾ ಪೂಜಾರ್ - Shiggaon Byelection

ಶಿಗ್ಗಾಂವ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಟಿಕೆಟ್ ಕೊಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಮಂಜುಳಾ ಪೂಜಾರ್ ತಿಳಿಸಿದ್ದಾರೆ.

author img

By ETV Bharat Karnataka Team

Published : Jul 22, 2024, 8:12 AM IST

Manjula Pujar
ಮಂಜುಳಾ ಪೂಜಾರ್ (ETV Bharat)
ಮಂಜುಳಾ ಪೂಜಾರ್ (ETV Bharat)

ಹಾವೇರಿ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಚಟುವಟಿಕೆಗಳು ಜೋರಾಗಿವೆ. ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿರುವ ಬೊಮ್ಮಾಯಿ ಅವರಿಗೆ ತಮ್ಮ ಉತ್ತರಾಧಿಕಾರಿಯನ್ನು ಗೆಲ್ಲಿಸುವ ಸವಾಲಿದ್ದರೆ, ಇತ್ತ ಆಡಳಿತಾರೂಢ ಕಾಂಗ್ರೆಸ್‌ ಸಹ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.

ಇನ್ನೊಂದೆಡೆ, ಟಿಕೆಟ್​ಗಾಗಿ ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ರೈತ ಮುಖಂಡೆ ಮಂಜುಳಾ ಪೂಜಾರ್.

ಹಲವು ರೈತ ಹೋರಾಟಗಳಲ್ಲಿ ಪಾಲ್ಗೊಂಡಿರುವ ಇವರು ತನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನಾನು ಸಿಎಂ ಸಿದ್ದರಾಮಯ್ಯನವರ ಪಕ್ಕಾ ಅಭಿಮಾನಿ, ರೈತನ ಮಗಳು. ಕೋಮು ಸಾಮರಸ್ಯ ಹಿನ್ನೆಲೆಯಿಂದ ಬಂದವಳು. ನನಗೆ ಟಿಕೆಟ್ ನೀಡಿದರೆ ಇಲ್ಲಿ ಕಾಂಗ್ರೆಸ್ ಗೆಲುವು ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ದಾರೆ.

ಅಷ್ಟೇ ಅಲ್ಲದೆ, ರೈತರ ಮತ್ತು ಸ್ಥಳೀಯ ಸಮಸ್ಯೆಗಳ ಅರಿವು ನನಗಿದೆ. ಜನಸಾಮಾನ್ಯರ ಕೈಗೆ ನಾನು ಸಿಗುತ್ತೇನೆ. ಗೆದ್ದ ನಂತರ ಬೆಂಗಳೂರು ದೆಹಲಿಗೆ ಹೋಗಿ ಕುಳಿತುಕೊಳ್ಳುವುದಿಲ್ಲ. ನನ್ನ ಸ್ಪರ್ಧೆಗೆ ರೈತರ ಬೆಂಬಲವಿದೆ. ರೈತರು ಯಾವಾಗಲು ರೈತರ ಮಕ್ಕಳಿಗೆ ಬೆಂಬಲ ನೀಡುತ್ತಾರೆ. ಹೀಗಾಗಿ, ಸ್ಥಳೀಯರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಜನರ ಅಭಿಪ್ರಾಯ ಬೇರೆಯದ್ದೇ ಇದೆ ಎಂದು ಮಂಜುಳಾ ಎಚ್ಚರಿಕೆ ನೀಡಿದ್ದಾರೆ.

ದಲಿತರಿಗೆ, ನೊಂದವರಿಗೆ, ಬಡವರಿಗೆ, ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡಿಸಲು ನಾವು ಯಾವುದಾದರೂ ಸ್ಥಾನದಲ್ಲಿ ಇರಬೇಕು. ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಕೇವಲ ಹೋರಾಟ ನಡೆಸಿದರೆ ಸಾಲದು. ಅದರ ಜೊತೆಗೆ ನಮಗೆ ಅಧಿಕಾರವಿದ್ದಾಗ ನಮ್ಮ ಹೋರಾಟ ಯಶಸ್ವಿಯಾಗುತ್ತದೆ. ಏನೂ ಹೋರಾಟವಿಲ್ಲದೆ ಹೊರಗಿನಿಂದ ಬಂದು ಇಲ್ಲಿ ಟಿಕೆಟ್ ಕೇಳುತ್ತಾರೆಂದರೆ, ನಾವು ಇಲ್ಲಿಯವರು ಇಲ್ಲಿಯ ಸಮಸ್ಯೆಗಳಿಗೆ ಹೋರಾಟ ಮಾಡಿದ್ದೇವೆ. ನಮಗೆ ಟಿಕೆಟ್ ಕೇಳಲು ಅಧಿಕಾರವಿದೆ. ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷವನ್ನು ನಾನು ಇಷ್ಟಪಡುವುದಿಲ್ಲ ಎಂದರು.

ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷೇತರವಾಗಿ ನಿಲ್ಲಿ ಎಂದು ನಮ್ಮ ಅಭಿಮಾನಿಗಳು ಹೇಳುತ್ತಿದ್ದಾರೆ. ಪಕ್ಷೇತರವಾಗಿಯಾದರೂ ಈ ಬಾರಿ ಸ್ಪರ್ಧಿಸುತ್ತೇನೆ. ನಮ್ಮೂರಿನ ಯುವಕರು ದುಡಿಯಲು ಬೆಂಗಳೂರು, ಮಂಗಳೂರು, ಗೋವಾಕ್ಕೆ ಹೋಗುತ್ತಾರೆ. ಅವರಿಗೆ ನಮ್ಮ ಕ್ಷೇತ್ರದಲ್ಲಿ ಕೆಲಸ ನೀಡಬೇಕು. ಇಲ್ಲಿಯ ರಾಜಕಾರಣಿಗಳು ಕ್ಷೇತ್ರದ ಜನರ ಮತ ತೆಗೆದುಕೊಂಡು ತಾವು ಬೆಳೆದಿದ್ದಾರೆ. ಆದರೆ ಜನರನ್ನು ಬೆಳೆಸಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ರಂಗೇರಿದ ಶಿಗ್ಗಾಂವ್ ಉಪಚುನಾವಣಾ ಕಣ: ಟಿಕೆಟ್​ಗಾಗಿ ಕೈ ಆಕಾಂಕ್ಷಿಗಳ ಪೈಪೋಟಿ - Shiggaon By Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.