ETV Bharat / state

ಲೋಕಸಮರದಲ್ಲಿ ಗಡಿ ಗಲಾಟೆ ಗೌಣ: ರಾಷ್ಟ್ರೀಯ ಪಕ್ಷಗಳ ಬಗ್ಗೆ ಕನ್ನಡ ಹೋರಾಟಗಾರರು ಹೇಳುವುದೇನು? - Border Dispute - BORDER DISPUTE

ನಾಳೆ ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಚುನಾವಣೆ ಬಂದರೂ ಯಾವ ಪಕ್ಷದವರೂ ಕೂಡಾ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಮಾತನಾಡುತ್ತಿಲ್ಲ ಎಂದು ಕನ್ನಡ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ
ಬೆಳಗಾವಿ (ETV Bharat)
author img

By ETV Bharat Karnataka Team

Published : May 6, 2024, 10:39 AM IST

Updated : May 6, 2024, 11:26 AM IST

ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ (ETV Bharat)

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿಲ್ಲ. ಮರಾಠಿ ಮತಗಳ ಓಲೈಕೆಗಾಗಿ 'ಬೆಳಗಾವಿ ಕರ್ನಾಟಕದ ಅವಿಭಾಜ್ಯ ಭಾಗ' ಎಂದು ಧೈರ್ಯದಿಂದ ಇಲ್ಲಿನ ರಾಜಕಾರಣಿಗಳು ಹೇಳುತ್ತಿಲ್ಲ ಎಂದು ಗಡಿ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಗಡಿ ವಿವಾದ ಚರ್ಚೆ ಗೌಣವಾಗಿದೆ. ಯಾವ ಪಕ್ಷದವರೂ ಕೂಡ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಆರು ದಶಕಗಳ ವಿವಾದದ ಕುರಿತು ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರ ಜೊತೆಗಿನ ಸಂದರ್ಶನ ಇಲ್ಲಿದೆ.

ಅಶೋಕ ಚಂದರಗಿ ಮಾತು: "ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಕರ್ನಾಟಕದ ಪಾಲಿಗೆ ಮುಗಿದು ಹೋದ ಅಧ್ಯಾಯ. 1956ರಲ್ಲಿ ಫಜಲ್​ ಅಲಿ ಆಯೋಗ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ತೀರ್ಪು ಕೊಟ್ಟಿದೆ. 1966-67ರಲ್ಲಿ ಮೆಹರ್ ಚಂದ್ ಮಹಾಜನ್ ವರದಿ ಕೂಡ ಬೆಳಗಾವಿ ಕರ್ನಾಟಕದ್ದು ಎಂದು ಸ್ಪಷ್ಟವಾಗಿ ಶಿಫಾರಸು ಮಾಡಿದೆ. ಆದರೆ ಮಹಾರಾಷ್ಟ್ರದವರು ಗಡಿ ಕ್ಯಾತೆ ತೆಗೆಯುವುದು ಮಾತ್ರ ನಿಂತಿಲ್ಲ".

"1956ರಿಂದ ಅವರು ಗಡಿ ವಿವಾದವನ್ನು ರಾಜಕೀಯ ಬಂಡವಾಳ ಮಾಡಿಕೊಂಡು ಬಂದಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಕರ್ನಾಟಕದ ಬೇರೆ ಬೇರೆ ವಿಧಾನಸಭೆ ಕ್ಷೇತ್ರಗಳಿಗೆ ಆಯ್ಕೆಯಾಗುತ್ತಿದ್ದರು. ಆದರೆ, 1999ರಲ್ಲಿ ಗಡಿ ಭಾಗದಲ್ಲಿ ಸೋತು ಸುಣ್ಣವಾಗಿ, ಎಂಇಎಸ್ ಸಂಪೂರ್ಣವಾಗಿ ನಿಶಕ್ತಿಯಾಯಿತು. 2013ರಲ್ಲಿ ಕನ್ನಡಿಗರು ಮತ್ತು ರಾಜಕೀಯ ಪಕ್ಷಗಳ ಒಡಕಿನ ಲಾಭದಿಂದ ಬೆಳಗಾವಿ ದಕ್ಷಿಣ ಮತ್ತು ಖಾನಾಪುರದಲ್ಲಿ ಎಂಇಎಸ್ ಗೆದ್ದಿತ್ತು. ಆ ಬಳಿಕ ನಡೆದ 2018 ಮತ್ತು 2023ರ ಚುನಾವಣೆಗಳಲ್ಲಿ ಎಂಇಎಸ್ ನೆಲಕಚ್ಚಿದೆ."

"ಒಂದಿಲ್ಲೊಂದು ಚಟುವಟಿಕೆ ಮೂಲಕ ಗಡಿ ವಿವಾದ ಜೀವಂತವಾಗಿಡುವ ಕೆಲಸವನ್ನು ಎಂಇಎಸ್ ಮಾಡುತ್ತಾ ಬಂದಿದ್ದು, ಕರ್ನಾಟಕದ ನಾಲ್ಕೈದು ಜಿಲ್ಲೆಗಳ 865 ಹಳ್ಳಿ ಮತ್ತು ಪಟ್ಟಣಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು 2004ರಲ್ಲಿ ಸುಪ್ರೀಂ ಕೋರ್ಟ್‌ಗೆ ಒಂದು ದಾವೆ ಹೂಡಿದ್ದಾರೆ. ಆದರೆ, 20 ವರ್ಷ ಆಯ್ತು ಆ ಅರ್ಜಿ ಸ್ವೀಕರಿಸಬೇಕೋ? ಅಥವಾ ತಿರಸ್ಕರಿಸಬೇಕೋ? ಎಂಬ ಬಗ್ಗೆಯೇ ಇನ್ನೂ ವಿಚಾರಣೆ ನಡೆದಿಲ್ಲ".

"ಒಂದೆಡೆ ನ್ಯಾಯ ಕೇಳಿ ಸುಪ್ರೀಂ ಕೋರ್ಟ್​ಗೆ ಹೋಗುತ್ತೀರಿ. ಮತ್ತೊಂದೆಡೆ ಗಡಿಯಲ್ಲಿ ಚಳುವಳಿ ಮಾಡುತ್ತೀರಿ. ಅಲ್ಲದೇ ಮಹಾರಾಷ್ಟ್ರ ನಾಯಕರು ಗಡಿವಿವಾದವನ್ನು ಮುಂದಿಟ್ಟುಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ. ಹಾಗಾಗಿ, ನಿಮಗೆ ಚಳುವಳಿ ಮೇಲೆ ವಿಶ್ವಾಸವಿದ್ದರೆ ಕೋರ್ಟ್ ಕೇಸ್​ ಹಿಂಪಡೆಯಿರಿ. ಇಲ್ಲ ನ್ಯಾಯಾಂಗದ ಮೇಲೆ ಭರವಸೆ ಇದ್ದರೆ, ಹೊರಗೆ ಚಳುವಳಿ ಮಾಡುವುದು ಬಂದ್ ಮಾಡಿ. ಪ್ರಕರಣ ನ್ಯಾಯಾಲಯದಲ್ಲಿದ್ದಾಗ ಅದರ ಬಗ್ಗೆ ಹೊರಗೆ ಚಳುವಳಿ ಮಾಡುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಸುಪ್ರೀಂ ಕೋರ್ಟ್​ಗೆ ಮಹಾರಾಷ್ಟ್ರದವರು, ಎಂಇಎಸ್, ಶಿವಸೇನೆ ಅಪಮಾನ ಮಾಡುತ್ತಿದ್ದು, ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಅನೇಕ ಸಲ‌ ಒತ್ತಾಯಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ."

"ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ಜನರಿಗೆ ಕೊಟ್ಟಿದ್ದಾರೆ. ಆದರೆ, ಹಲವು ದಶಕಗಳಿಂದ ಬಗೆ ಹರಿಯದ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಕುರಿತು ಪ್ರಸ್ತಾಪ ಆಗಿಲ್ಲ. ಇದು ಗಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿ ಬಹು ದೊಡ್ಡ ನಗರವಾಗಿ ಬೆಳೆಯಬೇಕಿತ್ತು. ಬೃಹತ್ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗಿ, ಯುವಕರಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆಯಾಗಬೇಕಿತ್ತು. ಆದರೆ, ಗಡಿ ವಿವಾದ ಹಿನ್ನೆಲೆಯಲ್ಲಿ ಇದು ಸಾಧ್ಯ ಆಗದೇ ಇರುವುದು ಗಡಿಕನ್ನಡಿಗರ ದುರ್ದೈವ ಅಂತಾನೇ ಹೇಳಬಹುದು".

"ಮಹಾರಾಷ್ಟ್ರದ ಜತ್ತ, ಅಕ್ಕಲಕೋಟೆಯಲ್ಲಿ ಶೇ.70ಕ್ಕೂ ಹೆಚ್ಚು ಕನ್ನಡಿಗರಿದ್ದು, ಅಲ್ಲಿನ ರಾಜಕಾರಣಿಗಳು ಯಾವತ್ತೂ ಕನ್ನಡಿಗರ ತುಷ್ಟೀಕರಣ ಮಾಡಿಲ್ಲ. ನಾವು ಮಹಾರಾಷ್ಟ್ರದ ಪರವಾಗಿಯೇ ಇರುತ್ತಾರೆ. ಆದರೆ, ಇಲ್ಲಿನ ರಾಜಕಾರಣಿಗಳಿಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎನ್ನುವ ತಾಕತ್ತು ಯಾಕೆ ಇಲ್ಲ? ಎಲ್ಲಿ ಚುನಾವಣೆಯಲ್ಲಿ ಮರಾಠಾ ಮತಗಳು ನಮ್ಮ ಕೈ ತಪ್ಪಿ ಹೋಗುತ್ತವೆ ಎನ್ನುವ ಭೀತಿಯಿದೆ. ಹಾಗಾಗಿ, ಮರಾಠಿಗರನ್ನು ಓಲೈಸುವ ಕೆಲಸ ಮಾಡುತ್ತಾರೆ" ಎಂದು ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಬೆಳಗಾವಿ ಜನರಲ್ಲಿ ಬೆಟ್ಟದಷ್ಟು ನಿರೀಕ್ಷೆ, ಹೋರಾಟಗಾರರು, ಉದ್ಯಮಿಗಳು ಹೇಳಿದ್ದೇನು? - Belagavi

Last Updated : May 6, 2024, 11:26 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.