ETV Bharat / state

ಸಂಡೂರು ಉಪ ಚುನಾವಣೆಗೆ ಸಕಲ ಸಿದ್ಧತೆ, ಮತದಾನಕ್ಕೆ ಕ್ಷಣಗಣನೆ ಆರಂಭ - SANDUR BY ELECTION

ಸಂಡೂರು ವಿಧಾನಸಭಾ ಕ್ಷೇತ್ರದ ಒಟ್ಟು 253 ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Preparations for Sandur By Election
ಸಂಡೂರು ಉಪ ಚುನಾವಣೆಗೆ ಸಿದ್ಧತೆ (ETV Bharat)
author img

By ETV Bharat Karnataka Team

Published : Nov 13, 2024, 6:39 AM IST

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಂಡೂರು ಕ್ಷೇತ್ರದಲ್ಲಿ ಒಟ್ಟು 2,36,402 ಮತದಾರರಿದ್ದಾರೆ. ಇವರಲ್ಲಿ 1,17,935 ಪುರುಷ, 1,18,438 ಮಹಿಳಾ ಮತದಾರರು ಹಾಗೂ 29 ಇತರೆ ಮತದಾರರು ಇದ್ದಾರೆ. ನಗರ ವ್ಯಾಪ್ತಿಯಲ್ಲಿ 68 ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ 185 ಸೇರಿ ಒಟ್ಟು 253 ಮತಗಟ್ಟೆಗಳಿವೆ. ಸಂಡೂರು 17, ತೋರಣಗಲ್ಲು 27 ಮತ್ತು ಚೋರನೂರು 16 ಮತಗಟ್ಟೆ ಸೇರಿ ಒಟ್ಟು 60 ಸೂಕ್ಷ್ಮ ಮತಗಟ್ಟೆಗಳನ್ನು ಹಾಕಲಾಗಿದೆ.

ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.

ಸಂಡೂರು ಉಪಚುನಾವಣೆಗೆ 324 ಬ್ಯಾಲೆಟ್ ಯುನಿಟ್, 324 ಕಂಟ್ರೋಲ್ ಯುನಿಟ್ ಮತ್ತು 379 ವಿವಿ ಪ್ಯಾಟ್ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಹೆಚ್ಚುವರಿಯಾಗಿ 304 ಬ್ಯಾಲೆಟ್ ಯುನಿಟ್, 304 ಕಂಟ್ರೋಲ್ ಯುನಿಟ್ ಮತ್ತು 329 ವಿವಿ ಪ್ಯಾಟ್ ಮತಯಂತ್ರಗಳನ್ನು ಇರಿಸಲಾಗಿದೆ.

ಉಪಚುನಾವಣೆಗೆ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸುಮಾರು 1,036 ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ.

ಭದ್ರತಾ ವ್ಯವಸ್ಥೆ: ಡಿವೈಎಸ್ಪಿ 3, ಸಿವಿಲ್ ಪೊಲೀಸ್-676, ಪಿಐ 6, ಪಿಎಸ್ಐ 14, ಎಎಸ್ಐ 22, ಹೆಚ್‌ಸಿ 190, ಕಾನ್​ಸ್ಟೇಬಲ್ 281, ಗೃಹರಕ್ಷಕ ದಳ 160, 360 ಕೆಎಸ್ಆರ್​ಪಿ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಒಟ್ಟು 1,036 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 127 ಮತಗಟ್ಟೆ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯವಿದೆ.

ಇದನ್ನೂ ಓದಿ: ಜಾರ್ಖಂಡ್​ ವಿಧಾನಸಭೆ ಚುನಾವಣೆ: 43 ಕ್ಷೇತ್ರಗಳಲ್ಲಿ ಬುಧವಾರ ಮೊದಲ ಹಂತದ ಮತದಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.