ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ದರ್ಶನ್ ಅಂಡ್ ಗ್ಯಾಂಗ್ ನಡೆಸಿದ ಹೀನ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಕೃತ್ಯದಲ್ಲಿ ಬಂಧಿತನಾಗಿರುವ ಧನರಾಜ್ ಜೊತೆಗೆ ಆತನ ಸಹಚರರು ಎಲೆಕ್ಟ್ರಿಕಲ್ ಶಾಕ್ ನೀಡಿದ್ದರು ಎಂಬ ಸತ್ಯ ಸಂಗತಿಯೂ ಈಗ ಹೊರಬಿದ್ದಿದೆ.
ಪ್ರಕರಣದಲ್ಲಿ 9ನೇ ಆರೋಪಿಯಾಗಿರುವ ಧನರಾಜ್, ನಟ ದರ್ಶನ್ ಮನೆಯಲ್ಲಿ ಸಾಕು ನಾಯಿಗಳನ್ನ ನೋಡಿಕೊಳ್ಳುತ್ತಿದ್ದ. ಇದಕ್ಕೂ ಮೊದಲು ಧನರಾಜ್ ಡಾಗ್ ಬ್ರೀಡಿಂಗ್ ಆಗಿದ್ದ. ದರ್ಶನ್ ಜೊತೆ ಆಪ್ತನಾದ ಬಳಿಕ ಇವರ ಮನೆಯಲ್ಲೇ ಕೆಲಸ ಮಾಡಿಕೊಂಡಿದ್ದ. ಧನರಾಜ್ನನ್ನು ಬಂಧಿಸಿದ ಪೊಲೀಸರು ವಿಚಾರಣೆಯಲ್ಲಿ ಹಲವಾರು ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಧನರಾಜ್ ಎಲೆಕ್ಟ್ರಿಕ್ ಶಾಕ್ ನೀಡುವ ಮೆಗ್ಗಾರ್ ಅನ್ನು ಹಲವಾರು ತಿಂಗಳಿಂದ ಇಟ್ಟುಕೊಂಡಿದ್ದ. ಫೈನಾನ್ಸ್ ಸರಿಯಾಗಿ ಕಟ್ಟದ ಹಲವರಿಗೆ ಬಂಧಿತ ಆರೋಪಿಯಾಗಿರುವ ವಿನಯ್ ಶೆಡ್ನಲ್ಲಿ ಹಲ್ಲೆ ಮಾಡುತ್ತಿದ್ದ. ಈ ವೇಳೆ ಹಲ್ಲೆ ಮಾಡುವಾಗೆಲ್ಲಾ ಈ ಧನರಾಜ್ ಜೊತೆಗೆ ಇರುತ್ತಿದ್ದ. ಈ ಹಿಂದೆ ಹಲವಾರು ಜನರಿಗೆ ಹಲ್ಲೆ ಮಾಡುವಾಗ ಇದೇ ಮೆಗ್ಗಾರ್ನಿಂದ ಶಾಕ್ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿನಿಮಾದಲ್ಲಿ ನಡೆಯುವ ರೀತಿ ಚೇರ್ಗೆ ಕಟ್ಟಿ ಕೂರಿಸಿ ನಂತರ ಶಾಕ್ ನೀಡುತ್ತಿದ್ದರು. ಆರ್.ಆರ್ ನಗರ ಪೊಲೀಸ್ ಠಾಣೆ ಹಿಂಭಾಗದ ರಸ್ತೆಯಲ್ಲಿ ವಾಸವಾಗಿದ್ದ ಆರೋಪಿಯನ್ನ ಬಂಧಿಸಲಾಗಿದೆ.
ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು : ಕಿಚ್ಚ ಸುದೀಪ್ - ACTOR SUDEEP REACTION