ETV Bharat / state

"ರಾಮೋಜಿ ರಾವ್ ದೂರದೃಷ್ಟಿತ್ವವುಳ್ಳವರು": ಹಿರಿಯ ಪತ್ರಕರ್ತ ಯುಕೆ ಕುಮಾರ್​​ನಾಥ್ - TRIBUTE TO RAMOJI RAO - TRIBUTE TO RAMOJI RAO

ಮಂಗಳೂರಿನಲ್ಲಿ ಇಂದು ರಾಮೋಜಿ ರಾವ್​ ಅವರಿಗೆ ಶ್ರದ್ಧಾಂಜಲಿ ಸಭೆ ನಡೆದಿದ್ದು, ಅಕ್ಷರ ಯೋಧ ರಾಮೋಜಿ ರಾವ್ ಅವರನ್ನು ಹಿರಿಯ ಪತ್ರಕರ್ತರು ಸೇರಿದಂತೆ ಗಣ್ಯರು ಸ್ಮರಿಸಿದರು.

ರಾಮೋಜಿ ರಾವ್​ ಅವರ ಶ್ರದ್ಧಾಂಜಲಿ ಸಭೆ
ರಾಮೋಜಿ ರಾವ್​ ಅವರ ಶ್ರದ್ಧಾಂಜಲಿ ಸಭೆ (ETV Bharat)
author img

By ETV Bharat Karnataka Team

Published : Jun 20, 2024, 7:49 PM IST

Updated : Jun 20, 2024, 10:19 PM IST

ಹಿರಿಯ ಪತ್ರಕರ್ತ ಯು ಕೆ ಕುಮಾರ್​ನಾಥ್ (ETV Bharat)

ಮಂಗಳೂರು: "ರಾಮೋಜಿ ರಾವ್​​ ಅವರು ದೂರದೃಷ್ಟಿತ್ವವುಳ್ಳವರು. ಉಪ್ಪಿನಕಾಯಿ ಮೂಲಕ ಒಂದು ಬೃಹತ್​​ ಉದ್ಯಮ ಆರಂಭಿಸಬಹುದು ಎಂದು ಬಹಳಷ್ಟು ವರ್ಷಗಳ ಹಿಂದೆಯೇ ಆಲೋಚನೆ ಮಾಡಿದವರು" ಎಂದು ವಿಜಯಕರ್ನಾಟಕ ದಿನಪತ್ರಿಕೆಯ ನಿವೃತ್ತ ಸ್ಥಾನೀಯ ಸಂಪಾದಕ, ಹಿರಿಯ ಪತ್ರಕರ್ತ ಕುಮಾರನಾಥ್ ಹೇಳಿದರು.

ನಗರದ ಎ.ಬಿ. ಶೆಟ್ಟಿ ವೃತ್ತದ ಬಳಿಯಿರುವ ಮಾರ್ಗದರ್ಶಿ ಚಿಟ್ಸ್ ಪ್ರೈ. ಲಿಮಿಟೆಡ್ ಕಚೇರಿಯಲ್ಲಿ ನಡೆದ ರಾಮೋಜಿ ರಾವ್​ ಅವರ ಶ್ರದ್ಧಾಂಜಲಿ ಸಭೆಯಲ್ಲಿ ರಾಮೋಜಿ ರಾವ್​ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, "ಈನಾಡು ಪತ್ರಿಕೆಯನ್ನು ರಾಮೋಜಿ ಅವರು ಆರಂಭಿಸಿದರು. ಈನಾಡು ಪತ್ರಿಕೆ ಆಂಧ್ರಪ್ರದೇಶದ ಮೇಲ್ಮನೆಯನ್ನೇ ರದ್ದುಮಾಡುವ ಮಟ್ಟಿಗೆ ಸುದ್ದಿ ಮಾಡಿ ಗಮನಸೆಳೆದಿತ್ತು. ಆ ಬಳಿಕ ರಾಮೋಜಿ ರಾವ್ 13 ಪ್ರಾದೇಶಿಕ ಚ್ಯಾನಲ್​ಗಳನ್ನು​ ಕಟ್ಟಿದರು. ಅವರು ಆರಂಭಿಸಿದ ಮಾರ್ಗದರ್ಶಿ ಚಿಟ್ಸ್ ಫಂಡ್ 60 ವರ್ಷಗಳ ಬಳಿಕವೂ ಇದೆಯೆಂದರೆ ನಂಬಿಕೆ ವಿಶ್ವಾಸಾರ್ಹತೆಯೇ ಕಾರಣ" ಎಂದು ಬಣ್ಣಿಸಿದರು.

ಬಳಿಕ ಚಿತ್ರನಟ ಮೈಮ್ ರಾಮದಾಸ್ ಮಾತನಾಡಿ, "ರಾಮೋಜಿ ರಾವ್ ಅವರು ನಮ್ಮ ಅನ್ನದಾತರು. ನಮ್ಮ ಭವಿಷ್ಯ ರೂಪಿಸಿದವರು. ಅವರು ಬದುಕಿದ್ದಾಗಲೇ ದಂತಕತೆಯಾದವರು. ಬಹಳ ಹಿಂದೆಯೇ ಅವರು ರಾಮೋಜಿ ಫಿಲ್ಮ್ ಸಿಟಿ ಎಂಬ ಬೃಹತ್ ವಿಸ್ಮಯವೊಂದನ್ನು ಕಟ್ಟುವ ಧೈರ್ಯ ಮಾಡಿದವರು‌. ಕನ್ನಡ ಚಾನಲ್​ ಬಗ್ಗೆ ನಿರೀಕ್ಷೆಯಿತ್ತು. ಅಂದು ಈಟಿವಿಯಲ್ಲಿ 120 ಮಂದಿಯ ಡೆಸ್ಕ್​ನಲ್ಲಿ 40 ಮಂದಿ ಕರಾವಳಿಯವರಿದ್ದರು. ಯಾರೆಲ್ಲಾ ಅಂದು ಈಟಿವಿ ಕನ್ನಡದಲ್ಲಿ ದುಡಿದವರು ಈಗ ಎಲ್ಲರಿಗೂ ಮಾರ್ಗದರ್ಶಿಗಳಾದವರು. ಇಲ್ಲಿ ಕೆಲಸ ಮಾಡಿದವರು ಪ್ರಬುದ್ಧರು ಎಂಬ ಭಾವನೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾನೂನು ಸೇವಾ ಪ್ರಾಧಿಕಾರದ ಪ್ಯಾನೆಲ್​ ಅಡ್ವೋಕೇಟ್​​ ಸುಕೇಶ್​ ಕುಮಾರ್​ ಶೆಟ್ಟಿ ಮಾತನಾಡಿ, "ರಾಮೋಜಿ ರಾವ್ ಕರ್ನಾಟಕದ ಪತ್ರಿಕೋದ್ಯಮಕ್ಕೆ ದೊಡ್ಡ ಕೊಡುಗೆ ನೀಡಿದವರು. ಪತ್ರಿಕೋದ್ಯಮದಲ್ಲಿ ಪ್ರೊಫೆಷನಲ್ ಆಗಿ ದುಡಿಯಲು ಅವಕಾಶ ನೀಡಿದವರು. ಅವರು ಪತ್ರಕರ್ತರ ಧ್ವನಿಯಾಗಿದ್ದರು. ಜರ್ನಲಿಸಂಗೆ ಹೊಸ ಹೊಳಪು ಮತ್ತು ಹುರುಪು ಕೊಟ್ಟವರು. ಈಟಿವಿ ಕನ್ನಡದಂತಹ ನಿಖರವಾದ ವೇತನ ಪಾವತಿ ವ್ಯವಸ್ಥೆ ಬೇರೆಲ್ಲೂ ಕಂಡಿಲ್ಲ. ಪತ್ರಿಕೋದ್ಯಮ ಹೊರತುಪಡಿಸಿ ಹಲವಾರು ವಿಚಾರಗಳಲ್ಲಿ ಅವರು ಕಣ್ಣಾಡಿಸಿದವರು‌. ಅವರ ಕೊಡುಗೆ ಬೇರೆಬೇರೆ ಕಡೆಗೆ ಪಸರಿಸಿದೆ" ಎಂದು ಹೊಗಳಿದರು.

ಹಾಗೇ, ಉದ್ಯಮಿ ಗೋಪಿನಾಥ್ ಭಟ್ ಮುನಿಯಾಲು ಮಾತನಾಡಿ, "ಮಾರ್ಗದರ್ಶಿ ವಿಶ್ವಾಸಾರ್ಹ ಸಂಸ್ಥೆ. ಈ ಸಂಸ್ಥೆಯನ್ನು 60 ವರ್ಷಗಳ ಹಿಂದೆಯೇ ಕಟ್ಟಿ ಬೆಳೆಸಿದ ರಾಮೋಜಿ ರಾವ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಯಶಸ್ವಿಯಾದವರು ಎಂದರು. ಈಟಿವಿ ಭಾರತ ಹಿರಿಯ ವರದಿಗಾರ ವಿನೋದ್ ಪುದು ಅವರು ಚೇರ್ಮನ್​ ಸಂದೇಶವನ್ನು ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಮಾರ್ಗದರ್ಶಿ ಚಿಟ್​ ಪ್ರೈ ಲಿಮಿಟೆಡ್​ನ ಮಂಗಳೂರು ವಿಭಾಗದ ಮ್ಯಾನೇಜರ್​ ನಿತಿನ್​ ಕುಮಾರ್, ಮಾರ್ಗದರ್ಶಿ ಸಂಸ್ಥೆಯ ಪ್ಯಾನಲ್ ಅಡ್ವೋಕೇಟ್ ಪ್ರಫುಲ್ಲ ಪ್ರೇಮ್ ಉಪಸ್ಥಿತರಿದ್ದರು. ಮಾರ್ಗದರ್ಶಿ ಸಿಬ್ಬಂದಿ ಸ್ವಪ್ನ ಸ್ವಾಗತಿಸಿದರು.

ಇದನ್ನೂ ಓದಿ: ರಾಮೋಜಿ ರಾವ್‌ ಅವರಿಗೆ ಉತ್ತರ ಕರ್ನಾಟಕ ಈಟಿವಿ ಭಾರತ್​ ವರದಿಗಾರರಿಂದ ನುಡಿ ನಮನ - Tribute To Ramoji Rao

Last Updated : Jun 20, 2024, 10:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.