ETV Bharat / state

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ತುಮಕೂರಲ್ಲಿ ಶಂಕಿತನ ಕುರಿತು ರಾತ್ರಿಯಿಡೀ ಮಾಹಿತಿ ಕಲೆಹಾಕಿದ ಪೊಲೀಸ್ ತಂಡ - rameshwaram cafe blast case

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಗ್ಗೆ ಪೊಲೀಸರು ತುಮಕೂರಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

rameshwaram cafe blast case
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ
author img

By ETV Bharat Karnataka Team

Published : Mar 7, 2024, 8:15 AM IST

Updated : Mar 7, 2024, 9:39 AM IST

ತುಮಕೂರು: ಬೆಂಗಳೂರಿನ ರಾಮೇಶ್ವರಂ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯು ತುಮಕೂರು ನಗರದಲ್ಲಿ ಓಡಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಬೆಂಗಳೂರು ಪೊಲೀಸ್​ ಅಧಿಕಾರಿಗಳ ತಂಡ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳ ಟೀಂ ನಗರದ ಪ್ರಮುಖ ಸಿಸಿಟಿವಿಗಳ ಪರಿಶೀಲನೆಯಲ್ಲಿ ತೊಡಗಿವೆ.

ಬುಧವಾರ ರಾತ್ರಿ ದಿಢೀರ್ ಬೆಂಗಳೂರು ಪೊಲೀಸರ ತಂಡ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರ ಅವರ ಜೊತೆ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿರುವ ಸ್ಮಾರ್ಟ್ ಸಿಟಿಯ ಸಿಸಿಟಿವಿ ಕಂಟ್ರೋಲ್ ರೂಮ್ ಗೆ ತೆರಳಿ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದೆ. ಈ ನಡುವೆ ತುಮಕೂರು ನಗರದ ಹಾಗೂ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿರುವ ಸಿಸಿಟಿವಿಗಳ ವಿಡಿಯೋಗಳನ್ನು ಪಡೆದುಕೊಂಡಿದೆ. ಅಲ್ಲದೆ ತಡ ರಾತ್ರಿಯವರೆಗೂ ಪೊಲೀಸರ ತಂಡ ಸುದೀರ್ಘ ಪರಿಶೀಲನೆ ನಡೆಸಿತು ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣ ಹಿನ್ನೆಲೆ: ಮಾರ್ಚ್ 1 ರಂದು ಮಧ್ಯಾಹ್ನದ ಒಂದು ಗಂಟೆ ಸಮಯಕ್ಕೆ ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ದಿಢೀರನೇ​ ಭಾರಿ ಶಬ್ಧವೊಂದು ಕೇಳಿಬಂದಿತ್ತು. ಜನರಿಂದ ತುಂಬಿದ್ದ ಕೆಫೆಯಲ್ಲಿ ಇದ್ದಕ್ಕಿದ್ದಂತೆ ಈ ಸದ್ದು ಇಡೀ ನಗರ, ರಾಜ್ಯ ಅಷ್ಟೇ ಅಲ್ಲದೆ ದೇಶಾದ್ಯಂತ ಸುದ್ದಿಯಾಯಿತು. ಅಲ್ಲಿಗೆ ಆಗಮಿಸಿದ್ದ ಆಗುಂತಕನೊಬ್ಬ ಬ್ಯಾಗ್​ನೊಂದಿಗೆ ಬಂದಿದ್ದ. ಇಡ್ಲಿ ತಿಂದ ಬಳಿಕ ಬ್ಯಾಗನ್ನು ಅಲ್ಲೇ ಬಿಟ್ಟು ತೆರಳಿದ್ದ. ಕೆಲವೇ ಕ್ಷಣಗಳಲ್ಲಿ ಅದರಲ್ಲಿದ್ದ ಬಾಂಬ್​ ಸ್ಫೋಟಗೊಂಡಿತ್ತು. ಇದರಿಂದ 9 ಜನರು ಗಾಯಗೊಂಡಿದ್ದರು.

ದುರಂತ ಸಂಭವಿಸುತ್ತಿದ್ದಂತೆ ಹೊಟೇಲ್​ನಲ್ಲಿದ್ದ ಸುಮಾರು 30 ಜನರು ಹೊರಗೆ ಓಡಿ ಬಂದಿದ್ದರು. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಎಸಿಪಿ ರೀನಾ ಸುವರ್ಣ ಹಾಗೂ ಮಾರತ್ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು. ಸ್ಫೋಟದಿಂದ ಹೋಟೆಲ್​ನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಘಟನಾ ಸ್ಥಳದಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಕಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ಬಳಿಕ ಎಫ್ಎಸ್​ಎಲ್​ ತಂಡದವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಆಗ ಇಲ್ಲಿ ಸ್ಫೋಟಗೊಂಡಿದ್ದು, ಐಇಡಿ ಬಾಂಬ್​ ಅನ್ನೋದು ಗೊತ್ತಾಗಿತ್ತು.

ಆರೋಪಿ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ: ರಾಜ್ಯ ಪೊಲೀಸ್​ ತನಿಖಾ ತಂಡಗಳು ಸ್ಫೋಟ ಸಂಭವಿಸಿದ ದಿನದಿಂದ ತನಿಖೆ ಆರಂಭಿಸಿವೆ. ಅವರೊಂದಿಗೆ ಎನ್​ಐಎ ತಂಡಗಳು ಸಹ ಕೈಜೋಡಿಸಿದ್ದು, ಕಾರ್ಯಾಚರಣೆ ಚುರುಕುಗೊಂಡಿದೆ. ಆರೋಪಿ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಎನ್​ಐಎ ಬುಧವಾರ ಘೋಷಿಸಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಆರೋಪಿಯ ಸುಳಿವು ನೀಡಿದ್ರೆ ₹ 10 ಲಕ್ಷ ನಗದು ಬಹುಮಾನ - ಎನ್ಐಎ ಘೋಷಣೆ

Last Updated : Mar 7, 2024, 9:39 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.