ಕಲಬುರಗಿ: ''ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಒಟ್ಟು 26 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಪಿಎಸ್ಐ ಸಿವಿಲ್-402 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಯಿತು. ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಪರೀಕ್ಷೆ ಪೂರ್ಣಗೊಂಡಿತು'' ಎಂದು ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
''ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ತಪಾಸಣೆಗೆ Door Frame Metal Detectorಗಳನ್ನು ಅಳವಡಿಸಲಾಗಿತ್ತು. Hand Held Metal Detectorಗಳ ಮೂಲಕ ಅಭ್ಯರ್ಥಿಗಳ ಸಂಪೂರ್ಣ ವೈಯಕ್ತಿಕ ತಪಾಸಣೆ ಕೈಗೊಳ್ಳಲಾಯಿತು. ಸೂಕ್ಷ್ಮ ತಪಾಸಣೆಗೆ ENT ತಜ್ಞ ವೈದ್ಯರನ್ನು ನೇಮಿಸಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ದೇಶಿಸಿದ ನಿಯಮಗಳ ಅಡಿಯಲ್ಲಿ ಪರೀಕ್ಷೆ ಕೈಗೊಂಡು ಯಾವುದೇ ಅಕ್ರಮ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಕೈಗೊಳ್ಳುವ ಮೂಲಕ ಪರೀಕ್ಷೆಯನ್ನು ಶಾಂತ ಹಾಗೂ ಶಿಸ್ತಿನಿಂದ ಮುಕ್ತಾಯಗೊಳಿಸಲಾಯಿತು'' ಎಂದು ಹೇಳಿದ್ದಾರೆ.
ಕಳೆದ ಬಾರಿಯ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಸೇರಿದಂತೆ ವಿವಿಧ ರೀತಿಯಲ್ಲಿ ಅಕ್ರಮ ಎಸಗಲಾಗಿತ್ತು. ಇದೇ ಕಲಬುರಗಿಯಿಂದಲೇ ಅಕ್ರಮ ಎಸಗಿರುವುದು ತನಿಖೆಯಲ್ಲಿ ಬಯಲಾಗಿತ್ತು. ಪ್ರಕರಣ ಸಂಬಂಧ ಅನೇಕರು ಜೈಪಾಲಾಗಿದ್ದಾರೆ. ಹೀಗಾಗಿ ಈ ಸಲ ಭಾರಿ ಬಂದೋಬಸ್ತ್‌ನಲ್ಲಿ ಪರೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ: PSI ನೇರ ನೇಮಕಾತಿ ಆಯ್ಕೆ ಪಟ್ಟಿ ತಡೆಹಿಡಿಯಲು ಸಚಿವ ಪ್ರಿಯಾಂಕ್ ಖರ್ಗೆ ಪತ್ರ - PSI Recruitment