ETV Bharat / state

ಆಸ್ತಿ ವಿವಾದ : ರಾಯಬಾಗ ತಾಲೂಕಿನಲ್ಲಿ ಗುಂಡಿನ ದಾಳಿ, ಯುವಕನಿಗೆ ಗಂಭೀರ ಗಾಯ - firing over asset issue

ರಾಯಬಾಗ ತಾಲೂಕಿನ ಬಡಬ್ಯಾಕುಡ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಎರಡು ಸುತ್ತಿನ ಗುಂಡಿನ ದಾಳಿ ನಡೆದಿದೆ.

ಚಿಕ್ಕೋಡಿ
ಚಿಕ್ಕೋಡಿ
author img

By ETV Bharat Karnataka Team

Published : Mar 18, 2024, 6:04 PM IST

Updated : Mar 19, 2024, 12:54 PM IST

ಚಿಕ್ಕೋಡಿ (ಬೆಳಗಾವಿ): ಆಸ್ತಿ ವಿವಾದದ ಹಿನ್ನೆಲೆ ರಾಯಬಾಗ ತಾಲೂಕಿನ ಬಡಬ್ಯಾಕುಡ ಗ್ರಾಮದ ಹೊರವಲಯದಲ್ಲಿ ಎರಡು ಸುತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿರುವ ಪ್ರಕರಣ ಸೋಮವಾರ ನಡೆದಿದೆ.

30 ಗುಂಟೆ ಜಮೀನಿಗೋಸ್ಕರ ಅಕ್ಕಪಕ್ಕದ ಜಮೀನು ಮಾಲೀಕರ ನಡುವೆ ನಡೆದ ಜಗಳ ತಾರಕಕ್ಕೇರಿದೆ. ಈ ವೇಳೆ ಆರೋಪಿ ದನಪಾಲ ಆಸಂಗಿ ತನ್ನ ಸ್ವಂತ ರಿವಾಲ್ವರ್​ನಿಂದ ಎರಡು ಸುತ್ತು ಗುಂಡು ಹಾರಿಸಿದ ಪರಿಣಾಮ ಶಾಂತಿನಾಥ ಹೊಟ್ಟೆ ಭಾಗಕ್ಕೆ ಗುಂಡು ತಗುಲಿ, ತೀವ್ರವಾಗಿ ಗಾಯಗೊಂಡಿದ್ದಾರೆ. ಅವರೀಗ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫೈರಿಂಗ್ ಮಾಡಿದ ಆರೋಪಿ ದನಪಾಲನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಚಿಕ್ಕೋಡಿ: ಆಸ್ತಿ ವಿವಾದ ಹಿನ್ನೆಲೆ ಪತಿಯ ಶವ ಇಟ್ಟು ಪತ್ನಿ, ಮಗನಿಂದ ಪ್ರತಿಭಟನೆ

Last Updated : Mar 19, 2024, 12:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.