ETV Bharat / state

ಚಾರ್ ಸೌ ಪಾರ್ ದಾಟಿ ಮುಂದಕ್ಕೆ ಹೋಗುತ್ತೇವೆ: ಪ್ರಲ್ಹಾದ್ ಜೋಶಿ ವಿಶ್ವಾಸ - pralhad joshi - PRALHAD JOSHI

ಈ ಬಾರಿ ಬಿಜೆಪಿ 400ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಮೋದಿ ನೇತೃತ್ವದ ಸರ್ಕಾರ 3ನೇ ಬಾರಿಗೆ ಅಧಿಕಾರಕ್ಕೇರಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ (ETV Bharat)
author img

By ETV Bharat Karnataka Team

Published : Jun 2, 2024, 7:12 AM IST

Updated : Jun 2, 2024, 7:50 AM IST

ಬೆಳಗಾವಿ: ಎಲ್ಲಾ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಒಟ್ಟಾಗಿ ಸೇರಿಸಿ ಸರಾಸರಿ ತೆಗೆದು ನೋಡಿದ್ರೂ ಕನಿಷ್ಠ ಪಕ್ಷ ಎನ್​ಡಿಎ 340-350 ಸ್ಥಾನ ಗಳಿಸಲಿದೆ. ಮೋದಿಯವರು ಕರೆ ಕೊಟ್ಟಿದ್ದ ಚಾರ್ ಸೋ ಪಾರ್ ಸಮೀಪ ಇದ್ದು, ಅದನ್ನೂ ಪಾರು ಮಾಡಿ ಎನ್​ಡಿಎ ಮುಂದಕ್ಕೆ ಹೋದರು ಅಚ್ಚರಿ ಪಡಬೇಕಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ‌ ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ಕಾರ್ಯಕ್ರಮ ಹಿನ್ನೆಲೆ ಬೆಳಗಾವಿಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಕ್ಸಿಟ್​ ಪೋಲ್ ಬರುವುದಕ್ಕಿಂತ ಮೊದಲೂ ನಾವು ಮತ್ತು ನಮ್ಮ ರಾಷ್ಟ್ರೀಯ ನಾಯಕರು, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲುತ್ತೇವೆ ಎಂದು ಎಲ್ಲಾ ಕಡೆ ವಿಶ್ವಾಸ ವ್ಯಕ್ತಪಡಿಸಿದ್ದೇವು. ಈಗ ಎಕ್ಸಿಟ್ ಪೋಲ್ ಫಲಿತಾಂಶ ಬಂದಿದೆ. ಇದರ ಆಧಾರದ ಮೇಲೆ ಮೋದಿಯವರ ನೇತೃತ್ವದಲ್ಲಿ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ. ಇನ್ನು ರಾಜ್ಯದಲ್ಲಿ ಕಳೆದ ಬಾರಿ 25 ಸ್ಥಾನ ಗೆದ್ದಿದ್ದೆವು. ಈ ಬಾರಿಯೂ 25 ಸ್ಥಾನ ಗೆಲ್ಲುತ್ತೇವೆ. ದೇಶದ ಜನ ಮೋದಿ ನೇತೃತ್ವವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಆರಂಭದಿಂದ ನಕಾರಾತ್ಮಕ ಧೋರಣೆ ಅನುಸರಿಸಿತ್ತು. ಲೋಕಸಭೆ ಎಂದರೆ ರಾಷ್ಟ್ರೀಯ ಮಟ್ಟದ‌ ಚುನಾವಣೆ. ಪ್ರಧಾನಮಂತ್ರಿ ಮತ್ತು ಭಾರತೀಯ ಸರ್ಕಾರವನ್ನು ಚುನಾಯಿಸುವ‌ ಚುನಾವಣೆ. ಆದರೆ, ಕಾಂಗ್ರೆಸ್ ನಾಯಕರು ಪ್ರತಿ ಹಂತದಲ್ಲೂ ಸ್ಥಳೀಯ ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸಿದರು. ನಾವು ಉಚಿತ ಭಾಗ್ಯಗಳನ್ನು ಕೊಟ್ಟಿದ್ದೇವೆ ಎಂದಿದ್ದರು. ಆದರೆ, ಇದೆಲ್ಲವನ್ನು ಜನ ಸ್ಪಷ್ಟವಾಗಿ ತಿರಸ್ಕರಿಸಿ, ನಿರಾಕರಿಸಿ ದೇಶದ ಹಿತದೃಷ್ಟಿ, ಸುಭದ್ರತೆ, ಸುರಕ್ಷತೆ ಮತ್ತು ಬಡವರ ಹಿತದ ದೃಷ್ಟಿಯಿಂದ ಬಿಜೆಪಿ ಮತ್ತು ನರೇಂದ್ರ ಮೋದಿಗೆ ಮತ ಹಾಕಿದ್ದಾರೆ ಎಂದು ಜೋಶಿ ತಿಳಿಸಿದರು.

ಎಕ್ಸಿಟ್ ಪೋಲ್ ಬಳಿಕ ಇಂಡಿಯಾ ಒಕ್ಕೂಟ ಸಭೆ ಮಾಡಿ, ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿರುವ ವಿಚಾರಕ್ಕೆ ಪ್ರತಿಕ್ರಯಿಸಿ, ಅವರು ಮೊದಲಿನಿಂದಲೂ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಅವರ ವಿಶ್ವಾಸದ ಹಣೆ ಬರಹ ಏನಾಗಿದೆ ಎಂದು ಎಲ್ಲರಿಗೂ ಗೊತ್ತಾಗುತ್ತಿದೆ. ನಾಳೆ ಲೋಕಸಭೆ ಫಲಿತಾಂಶ ಬಂದ ಬಳಿಕ ಇನ್ನೂ ನಿಚ್ಚಳವಾಗಿ ಗೊತ್ತಾಗುತ್ತದೆ.‌

ಅಧಿಕಾರಕ್ಕೆ ಬಂದ ಬಳಿಕ ಟಕಾಟಕ್ 8500 ರೂ. ಹಾಕುವ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿ, ಟಕಾಟಕ್ ಆಗಿ ಕಾಂಗ್ರೆಸ್ ನವರು ವಿರೋಧ ಪಕ್ಷವಾಗಲಿ. ಆದರೆ, ಅಧಿಕೃತವಾಗಿ ಕಾಂಗ್ರೆಸ್ ವಿರೋಧ ಪಕ್ಷ ಆಗುವುದೂ ನನಗೆ ಸಂಶಯವಿದೆ ಎಂದು ಲೇವಡಿ ಮಾಡಿದರು. ಗ್ಯಾರಂಟಿ ಯೋಜನೆಗಳನ್ನು ಜನರು ನಂಬಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಶಿ, ಕಾಂಗ್ರೆಸ್ ಗ್ಯಾರಂಟಿ ಬೋಗಸ್ ಗ್ಯಾರಂಟಿ ಎಂದು ಜನರಿಗೂ ಗೊತ್ತಿದೆ. ಲೋಕಸಭೆ ಚುನಾವಣೆವರೆಗೂ ಗ್ಯಾರಂಟಿ, ಆಮೇಲೆ ಈ ಸರ್ಕಾರವೇ ಇರೋ ಗ್ಯಾರಂಟಿ ಇಲ್ಲ ಎಂದರು.

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ಜವಾಬ್ದಾರಿಯುತ ಮಂತ್ರಿಯಾಗಿ ಈ ಸರ್ಕಾರ ಪತನ ಆಗಬಾರದು ಎಂದು ನಾನು ಭಾವಿಸುತ್ತೇನೆ. ಜನ ಅವರಿಗೆ ಐದು ವರ್ಷ ಅಧಿಕಾರ ನಡೆಸಲು ಬಹುಮತ ಕೊಟ್ಟಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಬೇರೆ ಬೇರೆ. ಇನ್ನು ಬಿಜೆಪಿ ಮತ್ತು ನಮ್ಮ ಯಾವುದೇ ನಾಯಕರಾಗಲಿ ಸರ್ಕಾರ ಪತನಗೊಳಿಸಲು ಪ್ರಯತ್ನಿಸುವುದಿಲ್ಲ ಮತ್ತು ಪ್ರಯತ್ನಿಸಬಾರದು. ಆದರೆ, ಮೇಲ್ನೋಟಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ. ಅವರ ಆಂತರಿಕ ಜಗಳದಿಂದ ಸರ್ಕಾರ ಬಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದರು.

ಪ್ರಜ್ವಲ್​ಗೆ ಕಠಿಣ ಶಿಕ್ಷೆಯಾಗಲಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಕಳೆದ ಮೇ 21 ರಂದೇ ಪೆನ್​ಡ್ರೈವ್ ಹೊರಗಡೆ ಬಂದಿದೆ. ನನಗೆ ಗೊತ್ತಾದ ತಕ್ಷಣ ನಾನು ಮೊದಲು ಹೇಳಿದ್ದು ಪ್ರಜ್ವಲ್​ನ ಅರೆಸ್ಟ್ ಮಾಡಿ, ಕ್ರಮ ಕೈಗೊಳ್ಳಿ ಅಂತಾ. ಅವರು ಕ್ರಮ ತೆಗೆದುಕೊಳ್ಳಲಿಲ್ಲಾ. ಈಗ 35 ದಿವಸದ ನಂತರ ಕೇಂದ್ರ ಸರ್ಕಾರಕ್ಕೆ ಪಾಸ್​ಪೋರ್ಟ್ ರದ್ದು ಮಾಡಬೇಕು ಅಂತಾ ಕೇಳಿದರು. ಅಧಿಕೃತವಾಗಿ ಮಾಹಿತಿ ಕೊಟ್ಟ ತಕ್ಷಣ ಕೇಂದ್ರ ಸರ್ಕಾರ ಕೆಲಸ ಮಾಡಿದೆ. ಪ್ರಜ್ವಲ್​ ಕಠೋರವಾದ ಶಿಕ್ಷೆ ಆಗಬೇಕು ಎಂದು ಪ್ರಲ್ಹಾದ್​ ಜೋಶಿ ಒತ್ತಾಯಿಸಿದರು.

ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆಗಳ ಮೇಲೆ ವಿಶ್ವಾಸವಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ದಾಟಲಿದೆ: ಡಿಸಿಎಂ ಶಿವಕುಮಾರ್ - State Wise Exit Poll

Last Updated : Jun 2, 2024, 7:50 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.