ETV Bharat / state

ಇನ್ಮುಂದೆ ಅಂಗೈನಲ್ಲೇ ಸಿಗಲಿವೆ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು; ಪೊಲೀಸರಿಗಾಗಿ ನೂತನ ಆ್ಯಪ್ ಸಿದ್ಧ - Police get CCTV camera footage - POLICE GET CCTV CAMERA FOOTAGE

ಬೆಂಗಳೂರು ನಗರ ಪೊಲೀಸರಿಗೆ ಇನ್ನು ಮುಂದೆ ಮೊಬೈಲ್​ನಲ್ಲಿಯೇ ಸಿಸಿಟಿವಿ ದೃಶ್ಯಗಳು ಸಿಗಲಿವೆ.

cctv-camera-footage
ಮೊಬೈಲ್​ನಲ್ಲಿ ಸಿಸಿಟಿವಿ ದೃಶ್ಯ (IANS)
author img

By ETV Bharat Karnataka Team

Published : Jul 24, 2024, 4:57 PM IST

ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ (ETV Bharat)

ಬೆಂಗಳೂರು : ಇನ್ಮುಂದೆ ಬೆಂಗಳೂರು ನಗರ ಪೊಲೀಸರಿಗೆ ನಗರದ ಮೂಲೆ ಮೂಲೆಯಲ್ಲಿನ ಸಿಸಿಟಿವಿ ದೃಶ್ಯಗಳು ಅಂಗೈನಲ್ಲೇ ಸಿಗಲಿವೆ. ಸೇಫ್ ಸಿಟಿ ಯೋಜನೆಯಡಿ ಬೆಂಗಳೂರಿನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನ ಪೊಲೀಸರು ತ್ವರಿತವಾಗಿ ಮೊಬೈಲ್ ಮೂಲಕವೇ ಪಡೆಯಬಹುದಾದ 'ಬೆಂಗಳೂರು ಸೇಫ್ ಸಿಟಿ ಫೀಲ್ಡ್ ಆಪರೇಷನ್ ಪ್ಲಾಟ್ ಫಾರ್ಮ್' ಹೆಸರಿನ ಆ್ಯಪ್‌ವೊಂದನ್ನ ಸಿದ್ಧಪಡಿಸಲಾಗಿದ್ದು, ಪ್ರಾಯೋಗಿಕವಾಗಿ ಹಿರಿಯ ಅಧಿಕಾರಿಗಳ ಬಳಕೆಗೆ ನೀಡಲಾಗಿದೆ.

ಆ ಮೂಲಕ ಯಾವುದೇ ಅಪರಾಧ ಕೃತ್ಯದ ತನಿಖೆ ನಡೆಸುತ್ತಿರುವ ಪೊಲೀಸರು, ಅಗತ್ಯವಿರುವ ಸ್ಥಳದಲ್ಲಿ ಸೇಫ್ ಸಿಟಿ ಯೋಜನೆಯಡಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ನಿರ್ದಿಷ್ಟ ಸಮಯದಲ್ಲಿ ಸೆರೆಯಾಗಿರುವ ದೃಶ್ಯಗಳನ್ನ ಆ್ಯಪ್ ಮೂಲಕ ಪಡೆಯಬಹುದಾಗಿದೆ.

ಹೊಸ ಆ್ಯಪ್ ಹೇಗೆ ಸಹಾಯಕಾರಿ : ಬೆಂಗಳೂರು ನಗರದಾದ್ಯಂತ ಈಗಾಗಲೇ 7,500 ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು, ಎಲ್ಲವೂ ಸಹ ಕಾರ್ಯನಿರ್ವಹಿಸುತ್ತಿವೆ. ಇದುವರೆಗೂ ಆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳು ತನಿಖೆಗೆ ಅಗತ್ಯವಿದ್ದರೆ, ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ ಮನವಿ ಸಲ್ಲಿಸಬೇಕಿತ್ತು. ಮತ್ತು ಇದಕ್ಕಾಗಿ ಸಾಕಷ್ಟು ಸಮಯ ವ್ಯಯವಾಗುತ್ತಿತ್ತು. ಆದರೆ, ಇನ್ನು ಮುಂದೆ ಅಪರಾಧ ಕೃತ್ಯಗಳು ವರದಿಯಾದಾಗ ಅದರ ತನಿಖೆಗಾಗಿ ಕ್ಯಾಮೆರಾದ ದೃಶ್ಯಗಳನ್ನ ತ್ವರಿತವಾಗಿ ಪಡೆಯಲು ಪೊಲೀಸ್ ಇಲಾಖೆಗಾಗಿಯೇ 'ಬೆಂಗಳೂರು ಸೇಫ್ ಸಿಟಿ ಫೀಲ್ಡ್ ಆಪರೇಷನ್ ಪ್ಲಾಟ್ ಫಾರ್ಮ್' ಹೆಸರಿನ ಆ್ಯಪ್ ಸಿದ್ದಪಡಿಸಲಾಗಿದೆ.

ಆ್ಯಪ್ ಮೂಲಕ ತನಿಖಾಧಿಕಾರಿ ಅಥವಾ ಪೊಲೀಸ್ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ತನಿಖೆಗೆ ಅಗತ್ಯ ಇರುವ ಸ್ಥಳದಲ್ಲಿರುವ ಕ್ಯಾಮೆರಾ ನಂಬರ್ ನೀಡಿ, ನಿಗದಿತ ಸಮಯದ ದೃಶ್ಯಗಳಿಗಾಗಿ (ಗರಿಷ್ಠ 15 ನಿಮಿಷಗಳವರೆಗೆ) ಪೊಲೀಸ್ ನಿಯಂತ್ರಣ ಕೋಣೆಗೆ ಮನವಿ ಸಲ್ಲಿಸಬಹುದು. ಅದರನ್ವಯ ಮನವಿ ಸಲ್ಲಿಸಿರುವ ಅಧಿಕಾರಿಗೆ ಒಂದು ಗಂಟೆಯೊಳಗೆ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಅವಶ್ಯಕ ದೃಶ್ಯಗಳು ಆ್ಯಪ್ ಮೂಲಕವೇ ರವಾನೆಯಾಗುತ್ತವೆ. ಒಂದು ಬಾರಿ ಗರಿಷ್ಠ 15 ನಿಮಿಷಗಳವರೆಗಿನ ದೃಶ್ಯಗಳಿಗೆ ಮನವಿ ಸಲ್ಲಿಸಬಹುದಾಗಿದ್ದು, ಅಗತ್ಯವಿದ್ದಲ್ಲಿ ಹೆಚ್ಚುವರಿ ದೃಶ್ಯಗಳಿಗೆ ಮನವಿ ಸಲ್ಲಿಸಬಹುದು.

ಅಪರಾಧ ಕೃತ್ಯಗಳು ವರದಿಯಾದಾಗ ಈ ಆ್ಯಪ್‌ ಸಹಾಯದಿಂದ ತ್ವರಿತಗತಿಯಲ್ಲಿ ಮಾಹಿತಿ ಕಲೆಹಾಕಲು ಮತ್ತು ಪ್ರಕರಣಗಳನ್ನ ಪತ್ತೆಹಚ್ಚಲು ಸಹಾಯಕವಾಗಲಿದೆ. ಸೇಫ್ ಸಿಟಿ ಯೋಜನೆಯಡಿ ನಗರದಲ್ಲಿ ಅಳವಡಿಸಲಾಗಿರುವ ಎಲ್ಲ ಕ್ಯಾಮೆರಾಗಳ ದೃಶ್ಯಗಳನ್ನೂ ಈ ಆ್ಯಪ್ ಮೂಲಕ ಪಡೆಯಬಹುದಾಗಿದ್ದು, ಪ್ರಸ್ತುತ ಆ್ಯಂಡ್ರಾಯ್ಡ್, ಐಓಎಸ್ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಿದೆ.

ಕಳೆದ ಒಂದು ತಿಂಗಳಿನಿಂದ ಪ್ರಾಯೋಗಿಕವಾಗಿ ಎಸಿಪಿ ಹಂತದ ಅಧಿಕಾರಿಗಳಿಗೆ ಬಳಕೆಗೆ ನೀಡಲಾಗಿದ್ದು, ಅವರಿಂದ ಪ್ರತಿಕ್ರಿಯೆಗಳನ್ನ ಪಡೆದುಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿಗೂ ಈ ಆ್ಯಪ್ ಬಳಕೆಯನ್ನ ವಿಸ್ತರಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದರು.

ಇದನ್ನೂ ಓದಿ : ಬೆಂಗಳೂರಲ್ಲಿ 7 ಸಾವಿರ ಸಿಸಿ ಕ್ಯಾಮೆರಾ ಅಳವಡಿಕೆ: ಅಪರಾಧ ಕೃತ್ಯಕ್ಕೆ ಬ್ರೇಕ್ ಹಾಕಲು ಸಿದ್ಧತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.