ETV Bharat / state

ಸರ್ಕಾರದ ಅನುಮತಿ ಪಡೆದು ಸಿಬಿಐ ರಾಜ್ಯದಲ್ಲಿ ತನಿಖೆ ಮಾಡುವಂತೆ ಆದೇಶ: ಗೃಹ ಸಚಿವ ಪರಮೇಶ್ವರ್​​ - Order to CBI

ಸಿಬಿಐಗೆ ಇತರ ರಾಜ್ಯಗಳಿಗೆ ತೆರಳಿ ತನಿಖೆ ಮಾಡಲು ಅವಕಾಶವಿದೆ. ಆದರೆ ಸದ್ಯ ರಾಜ್ಯ ಸರ್ಕಾರದ ಅನುಮತಿ ಪಡೆದು ರಾಜ್ಯದಲ್ಲಿ ಸಿಬಿಐ ತನಿಖೆ ಮಾಡುವಂತೆ ಆದೇಶ ಹೊರಡಿಸಲಾಗಿದೆ ಎಂದು ಡಾ. ಜಿ. ಪರಮೇಶ್ವರ್​​ ಹೇಳಿದರು.

ಗೃಹ ಸಚಿವ ಪರಮೇಶ್ವರ್​​
ಗೃಹ ಸಚಿವ ಪರಮೇಶ್ವರ್​​ (ETV Bharat)
author img

By ETV Bharat Karnataka Team

Published : Sep 28, 2024, 9:18 AM IST

ತುಮಕೂರು: ದೆಹಲಿ ಪೊಲೀಸ್​ ಎಸ್ಟಾಬ್ಲಿಷ್​ಮೆಂಟ್‌ ಆಕ್ಟ್‌ ಅಡಿಯಲ್ಲಿ ಸಿಬಿಐಗೆ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ತನಿಖೆ ಮಾಡಲು ಅವಕಾಶವಿದೆ. ಆದರೆ ಈಗ ರಾಜ್ಯ ಸರ್ಕಾರದ ಅನುಮತಿ ಪಡೆದು ರಾಜ್ಯದಲ್ಲಿ ಸಿಬಿಐ ತನಿಖೆ ಮಾಡುವಂತೆ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್​​ ತಿಳಿಸಿದರು.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿದ ಅವರು, "ಸಿಬಿಐ ವಿವಿಧ ರಾಜ್ಯಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ತನಿಖೆ ಮಾಡಬಹುದು. ಕೆಲವು ರಾಜ್ಯದಲ್ಲಿ ಸಿಬಿಐ ನೇರವಾಗಿ ಬಂದು ತನಿಖೆ ಮಾಡಬಹುದು. ನಮ್ಮ ರಾಜ್ಯದಲ್ಲಿಯೂ ಕೂಡ ಇಲ್ಲಿವರೆಗೂ ಅದೇ ರೀತಿ ಇತ್ತು. ಈ ಹಿಂದೆ ಬೇಡ ಎಂದು ಮಾಡಿದ್ದೇವೆ" ಎಂದು ತಿಳಿಸಿದರು.

ಡಾ. ಜಿ. ಪರಮೇಶ್ವರ್​​ (ETV Bharat)

"ಈ ಹಿಂದೆ ರಾಜ್ಯ ಸರ್ಕಾರ ಎರಡು ಮೂರು ಬಾರಿ ಆ ರೀತಿ ತೀರ್ಮಾನ ಮಾಡಿದೆ. ಇದು ಮೊದಲ ಬಾರಿ ಅಲ್ಲ. ಅನುಮತಿ ಕೊಡುವಂತಹ ಸಂದರ್ಭ ಬಂದರೆ ರಾಜ್ಯ ಸರ್ಕಾರ ಕೊಡಬೇಕಾಗುತ್ತದೆ. ಅನುಮತಿ ಕೊಡುವುದಿಲ್ಲ ಎಂದು ಹೇಳಿಲ್ಲ. ಸರ್ಕಾರದ ಈ ಆದೇಶ ಸಿಬಿಐಗೆ ಮಾತ್ರ ಸೀಮಿತವಾಗಿರುತ್ತದೆ. ಲೋಕಾಯುಕ್ತ ಸಂಸ್ಥೆಗೆ ಮೊನ್ನೆ ಜನಪ್ರತಿನಿಧಿಗಳ ಟ್ರಯಲ್​ ಕೋರ್ಟ್​ನಲ್ಲಿ ತನಿಖೆ ಮಾಡುವಂತೆ ಆದೇಶ ಮಾಡಲಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದಾರೆ".

"ಪ್ರಕರಣದ ಬಗ್ಗೆ ತನಿಖೆ ಪ್ರಾರಂಭ ಮಾಡಲು ಎಫ್‌ಐಆರ್‌ ದಾಖಲು ಮಾಡಲಾಗಿದೆ. ಈಗಾಗಲೇ ಯಾವುದೇ ತನಿಖೆಗೂ ಸಿದ್ಧ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗಾಗಿ ತನಿಖೆಗೆ ಯಾವುದೇ ವಿರೋಧವಿಲ್ಲ ತನಿಖೆ ಮಾಡಲಿ. ತನಿಖೆಯ ವರದಿ ಆಧಾರದ ಮೇಲೆ ನಾವು ಮತ್ತು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತೇವೆ".

"ತನಿಖೆಯಲ್ಲಿ ಸರ್ಕಾರದ ನೇರ ಹಸ್ತಕ್ಷೇಪ ಇರುವುದಿಲ್ಲ. ಲೋಕಾಯುಕ್ತ ಪೊಲೀಸ್​​​ ಸರ್ಕಾರದ ಅಧೀನದಲ್ಲಿ ಇಲ್ಲ. ಸರ್ಕಾರದ ಅವರಿಗೆ ಸವಲತ್ತು ಕೊಡಬಹುದು. ಆದರೆ ಸರ್ಕಾರದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಇರುವುದಿಲ್ಲ. ಅದು ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ. ಅವರೇ ಪಾರದರ್ಶಕವಾಗಿ ತನಿಖೆ ಮಾಡಲು ಅವಕಾಶವಿದೆ".

"ಮೈಸೂರು ಲೋಕಾಯುಕ್ತ ಎಸ್ಪಿ ತನಿಖೆ ಮಾಡುವಂತೆ ನ್ಯಾಯಾಲಯ ಹೇಳಿದ್ದು, ಆದರಿಂದ ತನಿಖೆಯನ್ನು ಮಾಡಲಿದ್ದಾರೆ. ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ನಾವೆಲ್ಲರೂ ಹೇಳಿದ್ದೇವೆ, ಮುಖ್ಯಮಂತ್ರಿಗಳು ಕೂಡ ನಾನು ರಾಜೀನಾಮೆ ಕೊಡುವುದಿಲ್ಲ ಎಂದಿದ್ದಾರೆ. ಈ ಸಂದಭದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ. ನಾವು ಅದಕ್ಕೆಲ್ಲಾ ಉತ್ತರ ಕೊಡುವ ಅಗತ್ಯವಿಲ್ಲ" ಎಂದು ಜಿ. ಪರಮೇಶ್ವರ್​ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಸುರಕ್ಷತಾ ಪರಿಕರಗಳ ಅಳವಡಿಕೆಗೆ ಆದ್ಯತೆ ನೀಡುವಂತೆ ದ್ವಿಚಕ್ರ ವಾಹನ ತಯಾರಕರು, ಮಾರಾಟಗಾರರಿಗೆ ಪತ್ರ: ಪೊಲೀಸ್ ಆಯುಕ್ತ - Safety Equipment for Bikes

ETV Bharat Logo

Copyright © 2024 Ushodaya Enterprises Pvt. Ltd., All Rights Reserved.