ETV Bharat / state

ಮಳೆ ಅನಾಹುತಗಳ ಚರ್ಚೆಗೆ ಅವಕಾಶ ನೀಡಿದ್ದಕ್ಕೆ ಆಕ್ಷೇಪ; ಸದನದಲ್ಲಿ ಅಜೆಂಡಾ ಕಾಪಿ ಹರಿದು ಪ್ರತಿಪಕ್ಷದ ನಾಯಕರ ಆಕ್ರೋಶ - R Ashok Tear the agenda copy - R ASHOK TEAR THE AGENDA COPY

ಮಳೆ ಅನಾಹುತಗಳ ಕುರಿತು ಚರ್ಚೆಗೆ ಅವಕಾಶ ನೀಡಿದ್ದಕ್ಕೆ ಆಕ್ಷೇಪಿಸಿ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಅಜೆಂಡಾ ಕಾಪಿಯನ್ನು ಹರಿದು ಎಸೆದ ಪ್ರಸಂಗ ನಡೆಯಿತು.

Assembly
ವಿಧಾನಸಭೆ (ETV Bharat)
author img

By ETV Bharat Karnataka Team

Published : Jul 19, 2024, 8:59 PM IST

ಬೆಂಗಳೂರು : ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಧರಣಿಯ ನಡುವೆಯೂ ಮಳೆ ಅನಾಹುತಗಳ ಚರ್ಚೆಗೆ ಅವಕಾಶ ನೀಡಿದ್ದನ್ನು ಆಕ್ಷೇಪಿಸಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅಜೆಂಡಾ ಕಾಪಿಯನ್ನು ಹರಿದು ಎಸೆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.

ಮೈತ್ರಿಕೂಟ ಸದಸ್ಯರು ಸ್ಪೀಕರ್ ಅವರ ಮುಂದಿನ ಬಾವಿಗಿಳಿದು ಧರಣಿ ನಡೆಸುತ್ತಿದ್ದರು. ಎಷ್ಟೇ ಮನವಿ ಮಾಡಿದರೂ ಧರಣಿ ಕೈ ಬಿಡದ ಹಿನ್ನೆಲೆ ಸ್ಪೀಕರ್ ಯು. ಟಿ ಖಾದರ್ ಅವರು, ಮಳೆ ಅನಾಹುತಗಳ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಇದನ್ನು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಲ್ಲದೆ, ಅಜೆಂಡಾದಲ್ಲಿ ಇಲ್ಲದೇ ಇರುವ ವಿಚಾರಗಳ ಚರ್ಚೆಗೆ ಅವಕಾಶ ನೀಡಲಾಗಿದೆ. ನಿಯಮ ಬಾಹಿರವಾಗಿ ಕಲಾಪವಾಗುತ್ತಿದೆ. ಇತಿಹಾಸದಲ್ಲಿ ಈ ರೀತಿ ನಡೆದಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾರ್ಯಕಲಾಪ ಪಟ್ಟಿ ಕಾಗದವನ್ನು ಹರಿದು ಎಸೆದರು.

ಈ ನಡುವೆ ಕಾಂಗ್ರೆಸ್ ಶಾಸಕರು ಮಾತನಾಡುವಾಗ ಪ್ರತಿಬಾರಿಯೂ ಆರ್. ಅಶೋಕ್, ಕಲಾಪ ಕ್ರಮಬದ್ಧವಾಗಿ ನಡೆಯುತ್ತಿಲ್ಲ ಎಂದು ಆಕ್ಷೇಪಿಸುತ್ತಾ ಬಂದರು. ಆದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಯಥಾ ರೀತಿ ಕಲಾಪ ಮುಂದುವರೆದಿತ್ತು. ಮಳೆಗಾಲದ ಅನಾಹುತಗಳ ಬಗ್ಗೆ ಆಡಳಿತ ಪಕ್ಷದ ಶಾಸಕರು ಸುದೀರ್ಘ ಚರ್ಚೆ ನಡೆಸಿದರು.

ಪ್ರತಿಪಕ್ಷಗಳ ಗದ್ದಲದ ನಡುವೆ ಮಳೆ ಅನಾಹುತಗಳ ಬಗ್ಗೆ ಚರ್ಚೆ : ವಿರೋಧ ಪಕ್ಷಗಳ ಧರಣಿ, ಗದ್ದಲ, ಕೋಲಾಹಲದ ನಡುವೆಯೂ ಆಡಳಿತ ಪಕ್ಷದ ಶಾಸಕರು ರಾಜ್ಯಾದ್ಯಂತ ಮಳೆ ಅನಾಹುತಗಳ ಬಗ್ಗೆ ಚರ್ಚೆ ನಡೆಸಿದ್ದು ಗಮನ ಸೆಳೆಯಿತು. ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರ, ಘೋಷಣೆಗಳನ್ನು ಕೂಗುತಿದ್ದರು. ಈ ಹಂತದಲ್ಲಿ ಸ್ಪೀಕರ್ ಯು ಟಿ ಖಾದರ್ ರಾಜ್ಯದಲ್ಲಿ ಮಳೆಯಿಂದಾಗಿರುವ ಅತಿವೃಷ್ಟಿ ಹಾಗೂ ಇತರ ಅನಾಹುತಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ಆಡಳಿತ ಪಕ್ಷದ ಶಾಸಕರು ಒಬ್ಬೊಬ್ಬರಾಗಿ ಈ ವಿಚಾರಗಳ ಕುರಿತು ಮಾತನಾಡುವಾಗ ಈ ಶಾಸಕರ ಕ್ಷೇತ್ರಕ್ಕೆ ಅನುದಾನ ಇಲ್ಲ ಎಂದು ಬಿಜೆಪಿಯವರು ಮೂದಲಿಕೆಯ ಘೋಷಣೆ ಕೂಗುವ ಮೂಲಕ 'ಏನಿಲ್ಲಾ.. ಏನಿಲ್ಲ.. ಕ್ಷೇತ್ರಕ್ಕೆ ಅನುದಾನ ಇಲ್ಲ' ಎಂದು ವೈರಲ್ ಆಗಿರುವ ಹಾಡನ್ನು ಹಾಡುವ ಮೂಲಕ ಲೇವಡಿ ಮಾಡಿದರು.

ಪ್ರತಿಪಕ್ಷದ ಸದಸ್ಯರ ಗದ್ದಲದ ನಡುವೆಯೂ ಆಡಳಿತ ಪಕ್ಷದ ಶಾಸಕರಾದ ಎ. ಎಸ್ ಪೊನ್ನಣ್ಣ, ಕೆ. ಎಂ ಶಿವಲಿಂಗೇಗೌಡ, ಪ್ರದೀಪ್ ಈಶ್ವರ್, ಬಂಗಾರಪೇಟೆ ಕ್ಷೇತ್ರದ ಶಾಸಕ ನಾರಾಯಣಸ್ವಾಮಿ, ಅನಿಲ್ ಚಿಕ್ಕಮಾಧು, ಶರತ್ ಬಚ್ಚೇಗೌಡ, ಸಿ. ಎಸ್ ನಾಡಗೌಡ, ಅಶೋಕ್ ರೈ, ಆರ್. ವಿ ದೇಶಪಾಂಡೆ ಸೇರಿದಂತೆ ಹಲವಾರು ಮಂದಿ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಕ್ಷೇತ್ರದಲ್ಲಾಗಿರುವ ಮಳೆ ಅನಾಹುತಗಳ ಬಗ್ಗೆ ಸರ್ಕಾರದ ಗಮನ ಸೆಳೆದರು. ಜೊತೆಯಲ್ಲಿ ಬಿಜೆಪಿ ಜೆಡಿಎಸ್ ಶಾಸಕರು ಜನರ ಸಮಸ್ಯೆ ಬಗ್ಗೆ ಚರ್ಚೆ ನಡೆಸದೇ ರಾಜಕಾರಣ ಮಾಡುತ್ತಿದ್ದಾರೆ. ಅವರ ಅವಧಿಯಲ್ಲಿ ಲೂಟಿಯಾಗಿದೆ ಎಂದು ಶಾಸಕರು ವಾಗ್ದಾಳಿ ನಡೆಸಿದರು.

ಹಿರಿಯ ಶಾಸಕ ಆರ್. ವಿ ದೇಶಪಾಂಡೆ ಮಾತನಾಡಿ, ಸದನದಲ್ಲಿ ಮಹತ್ವದ ವಿಚಾರ ಚರ್ಚೆಯಾಗುತ್ತಿದೆ. ಪ್ರತಿಪಕ್ಷಗಳು ಧರಣಿಯನ್ನು ಕೈ ಬಿಟ್ಟು ಜನರ ಸಮಸ್ಯೆಯ ಬಗ್ಗೆ ಗಮನ ಸೆಳೆಯಬೇಕು. ಜನರ ಸಂಕಷ್ಟದ ಸಂದರ್ಭದಲ್ಲಿ ಅನಗತ್ಯ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದರು. ರಾಜ್ಯಕ್ಕೆ ಉತ್ತಮ ಮುಖ್ಯಮಂತ್ರಿ ಸಿಕ್ಕಿದ್ದಾರೆ. ಅವರಿಂದ ಕೆಲಸ ಮಾಡಿಸಿಕೊಂಡು ರಾಜ್ಯದ ಅಭಿವೃದ್ಧಿಯನ್ನು ಮಾಡುವ ನಿಟ್ಟಿನಲ್ಲಿ ಗಮನಹರಿಸಿ ಎಂದರು.

ಮಳೆಯಿಂದಾಗಿ ಶಿವಮೊಗ್ಗದಲ್ಲಿ 366, ಉತ್ತರ ಕನ್ನಡದಲ್ಲಿ 463, ಚಿಕ್ಕಮಗಳೂರಿನಲ್ಲಿ 20ಕ್ಕೂ ಹೆಚ್ಚು ಕಡೆ, ದಕ್ಷಿಣ ಕನ್ನಡದಲ್ಲಿ 92, ಹಾಸನದಲ್ಲಿ 13, ಕೊಡಗಿನಲ್ಲಿ 84 ಭೂಕುಸಿತಗಳಾಗಿವೆ. ಹತ್ತಕ್ಕೂ ಹೆಚ್ಚು ಮಂದಿಗೆ ಪ್ರಾಣಹಾನಿಯಾಗಿದೆ. ಏಳೆಂಟು ಜಿಲ್ಲೆಗಳಲ್ಲಿ ಭಾರಿ ನಷ್ಟ ಸಂಭವಿಸಿದೆ. ಇದರ ಬಗ್ಗೆ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ನಡುವೆ ಆರ್. ಅಶೋಕ್, ದೇಶಪಾಂಡೆಯವರು ದಲಿತರಿಗೆ ಅನ್ಯಾಯವಾದ ವಿಚಾರವಾಗಿ ಮಾತನಾಡಿಲ್ಲ ಎಂದು ಕೆಣಕಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಮಾತನಾಡಿ ಎಂದು ಬಿಜೆಪಿ, ಜೆಡಿಎಸ್ ಶಾಸಕರು ಒತ್ತಾಯಿಸಿದಾಗ, ಅಲ್ಲಿ ಹಗರಣವೇ ಆಗಿಲ್ಲ. ನಾನು ಏನು ಮಾತನಾಡಲಿ? ಎಂದು ದೇಶಪಾಂಡೆ ಪ್ರಶ್ನಿಸಿದರು.

ಒಂದು ಹಂತದಲ್ಲಿ ದೇಶಪಾಂಡೆ ಅವರಿಗೆ ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ, ಜೆಡಿಎಸ್ ಸದಸ್ಯರು ಘೋಷಣೆ ಕೂಗಿದಾಗ, ನನಗೆ ಎಲ್ಲವೂ ಸಿಕ್ಕಿದೆ, ಯಾವುದೇ ಅನ್ಯಾಯವಾಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು. ರಾಜ್ಯದಲ್ಲಿ ಸಾಕಷ್ಟು ಮಳೆ ಹಾನಿಯಾಗಿದೆ, ಧರಣಿ ಕೈ ಬಿಟ್ಟು ಚರ್ಚೆಯಲ್ಲಿ ಭಾಗವಹಿಸಿ ಎಂದು ದೇಶಪಾಂಡೆ ಅವರು ಸಹ ಮನವಿ ಮಾಡಿದರು.

ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಧರಣಿ : ಮತ್ತೆ ಸದನ ಸೇರಿದಾಗ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಂದಿಟ್ಟುಕೊಂಡು ಬಿಜೆಪಿಯ ಹಾಗೂ ಜೆಡಿಎಸ್​ನ ಶಾಸಕರು ವಿಧಾನಸಭೆಯಲ್ಲಿ ಧರಣಿ ಮುಂದುವರೆಸಿದರು. ಧರಣಿ ನಿರತ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಕಾಂಗ್ರೆಸ್ ಶಾಸಕರಾದ ಪ್ರದೀಪ್ ಈಶ್ವರ್ ಮತ್ತು ಕೆ. ಎಂ ಶಿವಲಿಂಗೇಗೌಡ ಪ್ರಚೋದಿಸಿದ ಪ್ರಸಂಗವೂ ನಡೆಯಿತು.

ಇದರ ಮಧ್ಯೆ ಸ್ಪೀಕರ್ ಯು. ಟಿ ಖಾದರ್ ಅವರು, ಮಳೆ ಅನಾಹುತಗಳ ಚರ್ಚೆಗೆ ಅವಕಾಶ ನೀಡಿದರು. ಆಗ ಎದ್ದು ನಿಂತ ಶಾಸಕ ಶಿವಲಿಂಗೇಗೌಡ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಹಗರಣ ಆಗಿಲ್ಲ. ಆದರೆ, ಬಿಜೆಪಿ ಅಧಿಕಾರ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ 104 ಕೋಟಿ, ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ 100 ಕೋಟಿ ಹಗರಣವಾಗಿದೆ. ಅವರಿಬ್ಬರನ್ನು ಎಲ್ಲಿಗೆ ಕರೆಸುತ್ತೀರಾ?. ತಾಕತ್ತಿದ್ದರೆ ಈ ವಿಚಾರದ ಬಗ್ಗೆ ಚರ್ಚೆಗೆ ಬನ್ನಿ. ನಿಮಗೆ ಆತ್ಮಸಾಕ್ಷಿ, ನೈತಿಕತೆ, ಆತ್ಮ ಗೌರವ ಇಲ್ಲವೇ? ಎಂದು ಬಿಜೆಪಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಆರು ತಿಂಗಳಿಗೊಮ್ಮೆ ಸದನ ಸಮಾವೇಶಗೊಳ್ಳುತ್ತದೆ. ಜನರ ಸಮಸ್ಯೆಯ ಬಗ್ಗೆ ಚರ್ಚೆ ಮಾಡುವ ಬದಲಾಗಿ ಬಂಡತನ ಮಾಡುತ್ತಿದ್ದೀರಾ? ಎಂದು ಕಿಡಿಕಾರಿದ ಅವರು, ನಿಗಮಗಳಲ್ಲಿನ ಲೆಕ್ಕಪತ್ರಗಳನ್ನು ಪ್ರತಿದಿನ ಮುಖ್ಯಮಂತ್ರಿಯವರು ಪರಿಶೀಲಿಸಲು ಸಾಧ್ಯವೇ ? ಬಿಜೆಪಿಯ ಆಡಳಿತ ಇದ್ದಾಗ ಪಾರದರ್ಶಕ ನಿಯಮವನ್ನು ಉಲ್ಲಂಘಿಸಿ ಕೋಟ್ಯಂತರ ರೂಪಾಯಿ ಹಗರಣ ಮಾಡಲಾಗಿದೆ. ನೀವೇನು ಸತ್ಯ ಹರಿಶ್ಚಂದ್ರರಲ್ಲ ಎಂದು ತಿರುಗೇಟು ನೀಡಿದರು.

ಸ್ಪೀಕರ್ ಮಳೆಗಾಲದ ಬಗ್ಗೆ ಮಾತನಾಡಿ ಎಂದಾಗ, ಬಿಜೆಪಿ ಶಾಸಕರು, 'ಏನಿಲ್ಲ, ಏನಿಲ್ಲ, ಶಿವಲಿಂಗೇಗೌಡರ ಅರಸೀಕೆರೆ ಕ್ಷೇತ್ರಕ್ಕೂ ಅನುದಾನ ಇಲ್ಲ' ಎಂದು ರಾಗವಾಗಿ ಹಾಡಿ ಮೂದಲಿಸಿದರು. ಆಗ ನೀವಿಲ್ಲಿ ಬಣ್ಣ ಹಾಕದೇ ನಾಟಕ ಆಡುತ್ತಿದ್ದೀರಾ? ಎಂದು ಶಿವಲಿಂಗೇಗೌಡ ಕೆಂಡಕಾರಿದರು.

ಚರ್ಚೆ ರಾಜಕೀಯ ಸ್ವರೂಪಕ್ಕೆ ತಿರುಗಿದಾಗ ಸ್ಪೀಕರ್ ಅವರು ತರೀಕೆರೆಯ ಶಾಸಕ ಶ್ರೀನಿವಾಸ ಅವರಿಗೆ ಮಳೆ ಅನಾಹುತಗಳ ಕುರಿತಂತೆ ಚರ್ಚೆ ಮಾಡಲು ಆಹ್ವಾನ ನೀಡಿದರು. ಆದರೆ ಶಿವಲಿಂಗೇಗೌಡ ತಮ್ಮ ಏರಿದ ಧ್ವನಿಯ ವಾಗ್ದಾಳಿಯನ್ನು ಮುಂದುವರಿಸಿದರು. ತರೀಕೆರೆ ಶ್ರೀನಿವಾಸ್ ಅವರಿಗೆ ಮಾತನಾಡಲು ಇದರಿಂದ ಅವಕಾಶ ಸಿಗಲಿಲ್ಲ. ಕಾಂಗ್ರೆಸ್ಸಿನ ಶಾಸಕರಾದ ಷಡಕ್ಷರಿ, ನಾರಾಯಣಸ್ವಾಮಿ, ಸಿ. ಎಸ್ ನಾಡಗೌಡ ಅವರು ಶಿವಲಿಂಗೇಗೌಡರ ಬಳಿ ಹೋಗಿ ಸಮಾಧಾನಪಡಿಸಿ ಕೂರಿಸುವ ಮೂಲಕ ತರೀಕೆರೆ ಶ್ರೀನಿವಾಸ್ ಅವರಿಗೆ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು.

ನಂತರದ ಸರದಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಎದ್ದುನಿಂತು ಮಾತನಾಡಲಾರಂಭಿಸಿದರು. ರಾಜ್ಯದಲ್ಲಿ ಮಳೆಯಿಂದಾಗಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಪಕ್ಷದವರಿಗೆ ಮಾನ ಮರ್ಯಾದೆ ಇಲ್ಲ. ಜನರ ಸಮಸ್ಯೆಗೆ ಸ್ಪಂದಿಸದೇ ಇಲ್ಲಿ ರಾಜಕೀಯ ಚರ್ಚೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಮತ್ತೆ ರಾಜಕೀಯ ಚರ್ಚೆ ಆಗುತ್ತಿದ್ದಂತೆ ಸ್ಪೀಕರ್ ಅದನ್ನು ತಡೆಯಲು ಯತ್ನಿಸಿದರು. ಆದರೆ ಪ್ರದೀಪ್ ಈಶ್ವರ್ ಮಾತು ಮುಂದುವರೆಸಿ ಈ ಹಿಂದೆ ಭೋವಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಹಗರಣಗಳು ನಡೆದಿವೆ. ಅವುಗಳನ್ನು ಸಿಬಿಐಗೆ ಕೊಡುವಂತೆ ಕೇಳುತ್ತೀರಾ? ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಶಾಸಕರು, ಬಂಡಲ್ ಬಂಡಲ್ ಪ್ರದೀಪ್ ಈಶ್ವರ್ ಬಂಡಲ್ ಎಂದು ಮೂದಲಿಕೆಯ ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ : ವಾಲ್ಮೀಕಿ ಹಗರಣದ ಗದ್ದಲ: ಪರಿಷತ್ ಕಲಾಪ ಸೋಮವಾರಕ್ಕೆ ಮುಂದೂಡಿಕೆ - COUNCIL ADJOURNED

ETV Bharat Logo

Copyright © 2025 Ushodaya Enterprises Pvt. Ltd., All Rights Reserved.