ETV Bharat / state

ಹೊಸ ಪಿಂಚಣಿ ವ್ಯವಸ್ಥೆ ರದ್ದತಿಗೆ ಒತ್ತಾಯಿಸಿ ಫೆ.7ರಂದು ಒಪಿಎಸ್ ಹಕ್ಕೊತ್ತಾಯ ಧರಣಿಗೆ ತೀರ್ಮಾನ - DHARANI FOR OPS

NPS ಯೋಜನೆಯ ರದ್ದತಿಗೆ ಒತ್ತಾಯಿಸಿ ಫೆ.7ರಂದು OPS ಹಕ್ಕೊತ್ತಾಯ ಧರಣಿ ಮಾಡುವುದಾಗಿ NPS ನೌಕರರ ಸಂಘ ತಿಳಿಸಿದೆ.

ಹೊಸ ಪಿಂಚಣಿ ವ್ಯವಸ್ಥೆ ರದ್ದತಿಗೆ ಒತ್ತಾಯ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jan 20, 2025, 7:16 AM IST

ಬೆಂಗಳೂರು: NPS ಯೋಜನೆಯ ರದ್ದತಿಗೆ ಒತ್ತಾಯಿಸಿ ಫೆ.7ರಂದು 'OPS ಹಕ್ಕೊತ್ತಾಯ' ಧರಣಿ ನಡೆಸಲು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ತೀರ್ಮಾನಿಸಿದೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು 2022ರ ಅ.13ರಿಂದ ಒಂದು ತಿಂಗಳು OPS ಸಂಕಲ್ಪ ಯಾತ್ರೆ ಹಾಗೂ 14 ದಿನಗಳ ಕಾಲ OPS ಜಾರಿಗಾಗಿ ಫ್ರೀಡಂ ಪಾರ್ಕ್‌ಲ್ಲಿ ಅಹೋ ರಾತ್ರಿ ಧರಣಿ ನಡೆಸಲಾಗಿತ್ತು. ಜನವರಿ ತಿಂಗಳಿಂದ ಮೂರು ತಿಂಗಳ ಕಾಲ Vote for OPS ಅಭಿಯಾನ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ NPS ಯೋಜನೆ ರದ್ದುಗೊಳಿಸುವ ಭರವಸೆಯನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು ಎಂದಿದೆ.

ಮುಖ್ಯಮಂತ್ರಿಯವರು ಅಧಿಕಾರ ವಹಿಸಿಕೊಂಡ ತಕ್ಷಣ ನಮ್ಮ ಸಂಘದ ಪದಾಧಿಕಾರಿಗಳೊಂದಿಗೆ 2023ರ ಜೂ.13ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಭರವಸೆ ನೀಡಿದ್ದರು. NPS ಯೋಜನೆಯನ್ನು ರದ್ದುಗೊಳಿಸುವ ಕುರಿತು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು. ಮುಖ್ಯಮಂತ್ರಿ 2024ರ ಜ.6 ರಂದು ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮುಂದಿನ ಸಂಪುಟ ಸಭೆಯಲ್ಲಿ NPS ಯೋಜನೆಯ ರದ್ದತಿಯ ವಿಷಯವನ್ನು ಸಂಪುಟದ ಸಹದ್ಯೋಗಿಗಳೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದರು ಎಂದು ಪ್ರಕಟಣೆಯಲ್ಲಿ ಸಂಘ ತಿಳಿಸಿದೆ.

ಆದರೆ, ಈ ನಡುವೆ ಕೇಂದ್ರ ಸರ್ಕಾರ NPS ಬದಲು UPS ಏಕೀಕೃತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದ್ದು, ಇದನ್ನು ರಾಷ್ಟ್ರ ಮಟ್ಟದಲ್ಲಿ NMOPS ಮತ್ತು ರಾಜ್ಯದಲ್ಲಿ ನಮ್ಮ ಸಂಘಟನೆ ಈ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ನಮ್ಮ ಬೇಡಿಕೆ ಕೇವಲ ಹಳೆ ಪಿಂಚಣೆ ಯೋಜನೆಯನ್ನು ಮರುಜಾರಿಗೊಳಿಸುವುದಾಗಿದೆ. ಈ ನಡುವೆ ರಾಜ್ಯ ಸರ್ಕಾರ ಕೆಲವು ರಾಜ್ಯಗಳಲ್ಲಿ OPS ಜಾರಿಗೊಳಿಸಿದ್ದು, ಸಿದ್ದರಾಮಯ್ಯ ಆ ರಾಜ್ಯಗಳಿಗೆ ಭೇಟಿ ನೀಡಿ ವರದಿ ಪಡೆದು ಪರಿಶೀಲಿಸುವ ಬಗ್ಗೆ ಸಮಿತಿ ರಚಿಸಿದ್ದು, ಸರ್ಕಾರದ ಈ ಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ವಿರೋಧಿಸಿದೆ.

"ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ, NPS ಯೋಜನೆಯನ್ನು 2025-26ನೇ ಸಾಲಿನ ಆಯವ್ಯಯದಲ್ಲಿ ರದ್ದುಗೊಳಿಸುವ ಭರವಸೆಯು ದೊರಕದೇ ಇದ್ದಲ್ಲಿ, 2025ರ ಫೆ.7ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 'OPS ಹಕ್ಕೊತ್ತಾಯ' ಧರಣಿ ನಡೆಸಲು ಬೆಂಗಳೂರಿನಲ್ಲಿ ಭಾನುವಾರ ನಡೆದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಂಘ ಮಾಹಿತಿ ನೀಡಿದೆ.

ಇದನ್ನೂ ಓದಿ: ನೀವು 10 ವರ್ಷ ಕೆಲಸ ಮಾಡಿದ್ದೀರಾ?: ಇನ್ಮುಂದೆ ಪ್ರತಿ ತಿಂಗಳು ಬರುತ್ತೆ ಇಷ್ಟು ಕನಿಷ್ಠ ಇಪಿಎಫ್ ಪಿಂಚಣಿ ಹಣ

ಇದನ್ನೂ ಓದಿ: ನಿಂತಿದ್ದ ಮಾಸಿಕ ವೃದ್ಧಾಪ್ಯ ವೇತನ ಪುನಾರಂಭ: ದೆಹಲಿ ಸರ್ಕಾರದಿಂದ ಹಿರಿಯರಿಗೆ ₹2500 ಬಂಪರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.