ಬಾರಾಮುಲ್ಲಾ, ಜಮ್ಮು- ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಸೋಪೋರ್ನಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಸೋಪೋರ್ನಲ್ಲಿ ಗುಜ್ಜರ್ ಪೇತಿ ಜಾಲೂರು ಪ್ರದೇಶದಲ್ಲಿನ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಚಟುವಟಿಕೆಯ ನಡೆದಿದ್ದು, ಇದರಲ್ಲಿ ಸೋಪೋರ್ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಪಡೆಗಳು ಭಯೋತ್ಪಾದಕರ ಅಡಗುತಾಣದ ಮೇಲೆ ದಾಳಿ ನಡೆಸಿದ್ದು, ಮೂಲಗಳ ಪ್ರಕಾರ, ಇಬ್ಬರು ಭಯೋತ್ಪಾದಕರು ಸಿಲುಕಿದ್ದಾರೆ ಎನ್ನಲಾಗಿದೆ.
ಈ ಪ್ರದೇಶದಿಂದ ಹೊರ ಬಿದ್ಧಿರುವ ವರದಿ ಅನುಸಾರ, ಕಳೆದ 24 ಗಂಟೆಗಳಿಂದ ಭಾರಿ ಕಾರ್ಯಾಚರಣೆ ನಡೆಸಿದ್ದು, ಭದ್ರತಾ ಪಡೆಗಳು ಗುಜ್ಜರ್ ಪೇತಿ ಜಾಲೂರ ಅರಣ್ಯದಲ್ಲಿನ ಶೋಧ ಕಾರ್ಯ ಮುಂದುವರೆದಿದೆ. ಅಡುಗುತಾಣವನ್ನು ಭದ್ರತಾ ಪಡೆ ಪತ್ತೆ ಮಾಡಿ ದಾಳಿಗೆ ಮುಂದಾಗಿದೆ. ಗುಂಡಿನ ಸದ್ದು ಕೇಳಿ ಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಸದ್ಯ ಕಾರ್ಯಾಚರಣೆ ಸಾಗುತ್ತಿದ್ದು, ಭದ್ರತಾ ಪಡೆಗೆ ಮತ್ತುಷ್ಟು ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಸೋಪೋರ್ ಪ್ರದೇಶದ ಪಾನಿಪೋರ್ನಲ್ಲಿ 2024ರ ನವೆಂಬರ್ 8ರ ರೀತಿಯ ಕಾರ್ಯಾಚರಣೆ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದು, ಅವರ ಬಳಿಯಿದ್ದ ಶಸ್ತ್ರಾಸ್ತ್ರ, ಗುಂಡು ಮದ್ದುಗಳನ್ನು ವಶಕ್ಕೆ ಪಡೆದಿತ್ತು.
ಇದನ್ನೂ ಓದಿ: 36 ಗಂಟೆಗಳಲ್ಲಿ ಐವರು ಅನುಮಾನಾಸ್ಪದ ಸಾವು: ವಿಷಪೂರಿತ ಮದ್ಯ ಸೇವನೆ ಶಂಕೆ